ಡಾ. ಕೆ. ಶಿವರಾಮ ಕಾರಂತ ಅವರ ಕಾದಂಬರಿ-ನಷ್ಟ ದಿಗ್ಗಜಗಳು. ಅಪಮೌಲ್ಯಗಳಿಗೆ ಬಲಿಯಾದ ನಮ್ಮ ಸಮಾಜ ಜೀವನದ ವಿಡಂಬನೆಯ ವಸ್ತು-ಈ ಕಾದಂಬರಿಯದ್ದು. ನರ್ಮದಾ ನದಿಗೆ ಸಮೀಪವಿರುವ ಹಳ್ಳಿ ಮಾನಡಿ. ಪ್ರವಾಸದಲ್ಲಿರುವ ಲೇಖಕರಿಗೆ, ಮತ್ತೊಬ್ಬ ಪ್ರವಾಸಿಗನಿಂದ ಮಾನಡಿ ಊರಿನ ಮಾಹಿತಿ ಪಡೆದು ಅಲ್ಲಿಗೆ ಭೇಟಿ ನೀಡುತ್ತಾನೆ. ಗೆಳೆಯನೊಬ್ಬನಿಂದ ಊರಿನಲ್ಲಿರುವ ಎಲ್ಲ ಪ್ರತಿಮೆಗಳಿಗೆ ಭೇಟಿ ಕೊಟ್ಟು ಅವುಗಳ ಸ್ಥಾಪನೆ ಹಿಂದಿರುವ ಇತಿಹಾಸವನ್ನು ತಿಳಿಯುತ್ತಾನೆ. ವಾಸ್ತವವೆಂದರೆ, ಪ್ರತಿಮೆಯಾಗಿ ನಿಂತ ಯಾವ ವ್ಯಕ್ತಿಯೂ ಅದಕ್ಕೆ ತಕ್ಕ ಅರ್ಹತೆ-ಯೋಗ್ಯರೆ ಪಡೆದಿರುವುದಿಲ್ಲ. ಅವರು ಧಾರ್ಮಿಕ ಇಲ್ಲವೇ ರಾಜಕೀಯ ಮುತ್ಸದ್ಧಿಯೂ ಆಗಿರುವುದಿಲ್ಲ. ಬಹುತೇಕರು ಅಡ್ಡ ಹಾದಿ ಹಿಡಿದು ಪ್ರಸಿದ್ಧಿಯ ಪೈಪೋಟಿಯಲ್ಲಿ ತಮ್ಮ ಸ್ವಾರ್ಥ ಸಾಧಿಸಿಕೊಂಡವರು. ಗುಂಫುಗಳನ್ನು ಕಟ್ಟಿಕೊಂಡು ತಾವು ದೊಡ್ಡವರು ಎಂದು ಪೋಜು ಕೊಟ್ಟವರೆ. ಆದರೆ, ದೊಡ್ಡದೊಡ್ಡವರ ಪ್ರತಿಮೆಗಳಿರುವ ಮತ್ತು ಅದಕ್ಕೆಂದೇ ಪ್ರಸಿದ್ಧಿ ಪಡೆದಿದ್ದ ಮಾನಾಡಿ, ಇಡೀ ದೇಶದ ಪ್ರತೀಕವೂ ಆಗಿದೆ. ಜಾತ್ಯತೀತ ರಾಷ್ಟ್ರದಲ್ಲಿ ಧರ್ಮ-ಮತಗಳಿಗೆ ಸೀಮಿತವಾಗಿದ್ದ ಮತ್ತು ತತ್ವ-ಸಿದ್ಧಾಂತಗಳೇನೆಂದು ತಿಳಿಯದಿದ್ದರೂ ಅವರು ಊರಿಗೇ ದೊಡ್ಡವರಾದ ವಿಪರ್ಯಾಸವನ್ನು ಕಾದಂಬರಿಯು ಧ್ವನಿಸುತ್ತದೆ.
ಬೆಂಗಳೂರಿನ ರಾಜಲಕ್ಷ್ಮೀ ಪ್ರಕಾಶನವು 1983ರಲ್ಲಿ (ಪುಟ: 334) ಈ ಕಾದಂಬರಿಯನ್ನು ಮೊದಲ ಬಾರಿಗೆ ಪ್ರಕಟಿಸಿತ್ತು.
ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ- ಅಭೂತಪೂರ್ವ. 1902ರ ಅಕ್ಟೋಬರ್ 10ರಂದು ಜನಿಸಿದರು. ತಂದೆ ಶೇಷ ಕಾರಂತ ತಾಯಿ ಲಕ್ಷ್ಮಮ್ಮ. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದ್ದರು. ಚಲನಚಿತ್ರ , ಯಕ್ಷಗಾನ ಪ್ರಯೋಗಗಳನ್ನು ನಡೆಸಿದ್ದರು, ಹೀಗೆ ...
READ MORE