ಸುಧಾ ಮೂರ್ತಿ ಅವರ ಮೊದಲ ಕಾದಂಬರಿ ‘ಅತಿರಿಕ್ತೆ’. ಈ ಕಥೆ ಯಾವುದೋ ಒಂದು ವ್ಯಕ್ತಿಯನ್ನು ಕುರಿತಾಗಿ ಬರೆದದ್ದಲ್ಲ. ಔದ್ಯೋಗೀಕರಣದಿಂದ ಭಾರತದ ಆರ್ಥಿಕ ನವೀನ ಪರಿಸರದಲ್ಲಿ ಮುಂಬಯಿ, ಬೆಂಗಳೂರು, ದಿಲ್ಲಿ, ಪೂನಾ ನಗರಗಳು ತಲೆ ಎತ್ತಿವೆ. ಈ ಹೊಸ ಬದಲಾವಣೆಯ ವಾತಾವರಣವು ಹಲವಾರು ಹೊಸ ಸಮಸ್ಯೆಗಳನ್ನು ತಂದು ಒಡ್ಡಿದೆ. ಮನುಷ್ಯ ಮನುಷ್ಯರಲ್ಲಿ ಅಧಿಕಾರದ ಸ್ಪರ್ಧೆಯೂ ಒಂದು ಯಶಸ್ಸಿನ ಮೆಟ್ಟಲನ್ನು ಬೇಗನೇ ಏರಲು ಪಡುವ ಆತುರ! ಅದಕ್ಕಾಗಿ ಎಷ್ಟೆಲ್ಲ ತಾಕಲಾಟ? ಯಶಸ್ಸೇ ಜೀವನದ ಪರಮೋನ್ನತಿ ಅದುವೇ ಬಾಳಗುರಿ ಎಂದು ತಿಳಿದು ಅದಕ್ಕಾಗಿ ತಮ್ಮ ಜೀವನವನ್ನೇ ಧಾರೆಯೆರೆದ, ಧಾರೆಯೆರೆಯುತ್ತಿರುವ ಜನರ ಕೌಟುಂಬಿಕ ಸಮಸ್ಯೆಗಳಾವುವು? ಅದಕ್ಕೆ ಈ ಮಹತ್ವಾಕಾಂಕ್ಷಿ ಜನರು ಕೊಡುವ ಬೆಲೆ ಯಾವುದು? ಅಂಥವರ ಮನೆಯಲ್ಲಿರುವವರ ಜಗತ್ತು ಯಾವುದು? ಅವರ ಸುಭದ್ರವಾದ ಆರ್ಥಿಕ ಪರಿಸ್ಥಿತಿ ಇದ್ದರೂ ಮನಃಶಾಂತಿ ಏಕಿಲ್ಲ? ಬದಲಾಗುತ್ತಿರುವ ಈ ಹೊಸ ಮೌಲ್ಯಗಳನ್ನು, ಹೊಸ ಪರಿಸರವನ್ನು ಹೊಂದದೇ ಅದರಲ್ಲಿ ಬಳಲುವ, ನಿಷ್ಕ್ರಿಯವಾದ, ನೀರಸ ಜೀವನವನ್ನು ನಡೆಯಿಸುತ್ತಿರುವವರ ಜೀವನದ ಕುರಿತ ಕತಾ ಹಂದರವಿದೆ.
ಕನ್ನಡ ಹಾಗೂ ಇಂಗ್ಲಿಷ್ ಬರಹಗಾರ್ತಿ, ಇನ್ಫೊಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಅವರು ಜನಿಸಿದ್ದು 1950 ಆಗಸ್ಟ್ 18ರಂದು ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ. ತಾಯಿ ವಿಮಲಾ, ತಂದೆ ರಾಮಚಂದ್ರ ಕುಲಕರ್ಣಿ. ವೃತ್ತಿಯಲ್ಲಿ ಕಂಪ್ಯೂಟರ್ ಇಂಜಿನಿಯರ್ ಆಗಿದ್ದ ಇವರು ಕನ್ನಡ ಹಾಗೂ ಇಂಗ್ಲಿಷ್ ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಕೊಂಡಿದ್ದಾರೆ. ಅತಿರಿಕ್ತೆ, ಅವ್ಯಕ್ತೆ, ಮಹಾಶ್ವೇತೆ, ಡಾಲರ್ ಸೊಸೆ, ಋಣ, ತುಮುಲ, ಯಶಸ್ವಿ (ಕಾದಂಬರಿ), ಸಾಮಾನ್ಯರಲ್ಲಿ ಅಸಮಾನ್ಯರು (ಅಂಕಣ ಬರಹಗಳು), ಗುಟ್ಟೊಂದು ಹೇಳುವೆ, ಮನದ ಮಾತು (ಅನುಭವ ಕಥನ), ಹಕ್ಕಿಯ ತೆರದಲಿ ಮುಂತಾದ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಸುಧಾ ಮೂರ್ತಿ ಅವರಿಗೆ ರೋಟರಿ ...
READ MORE