“ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾ ಎಲ್ಲಿ ನಾರಿಯರು ಪೂಜಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ನಲಿದಾಡುತ್ತಾರೆ.” ಎಂದು ನಮ್ಮ ಭವ್ಯ ಸಂಸ್ಕೃತಿ ಹೆಮ್ಣಿನ ಹಿರಿಮೆಯನ್ನು ಸಾರುತ್ತದೆ. ಹತ್ತು ತಿಂಗಳು ಜೀವಕಣಗಳನ್ನು ಗರ್ಭದಲ್ಲಿ ಪೋಷಿಸಿ ಅದಕ್ಕೆ ಮಗುವಿನ ರೂಪ ಕೊಟ್ಟು ನೋವುಂಡು ಆ ಕಂದನನ್ನು ಪ್ರಪಂಚಕ್ಕೆ ತರುವ ಆಕೆಯನ್ನು ‘ಮಾತೃದೇವೋಭವ’ ಎಂದು ದೈವತ್ವದ ಸ್ಥಾನಕ್ಕೇರಿಸಿ ಪೂಜಿಸುತ್ತಾರೆ. ಅಂಥ ಜನಂದಾತೆ ತಾನು ಜನ್ಮ ನೀಡಿದ ಮಗುವನ್ನೇ ಕೈಯಾರೆ ಕೊಲ್ಲಲು ಯತ್ನಿಸುವುದು ಊಹೆಗೂ ನಿಲುಕದ ವಿಷಯ: ಇದು ನಾನು ಕೇಳಿ, ಕಂಡ ಸತ್ಯ ಘಟನೆ ಅದರ ಸೂತ್ತಲೂ ನಾನೇ ಕಲ್ಪನೆಯ ಪಾತ್ರಗಳನ್ನು ಸೃಷ್ಟಿಸಿ ಕಾದಂಬರಿಯ ಕಥಾವಸ್ತು ಹೆಣೆದಿದ್ದೇನೆ ಎಂಬುದಾಗಿ ಈ ಸಾಮಾಜಿಕ ಕಾದಂಬರಿಯಲ್ಲಿ ಲೇಖಕಿ ಆರತಿ ವೆಂಕಟೇಶ್ ಅವರು ಬರೆದಿದ್ದಾರೆ.
ಕಾದಂಬರಿಗಾರ್ತಿ ಆರತಿ ವೆಂಕಟೇಶ್ ಅವರು 1964 ಫೆಬ್ರವರಿ 15ರಂದು ಜನಿಸಿದರು. ತಂದೆ ನವರತ್ನರಾಮ್, ತಾಯಿ ಉಷಾ ನವರತ್ನರಾಮ್. ’ಆಶಾಕಿರಣ, ಅಮೃತಬಿಂದು, ನಿನಗಾಗಿ ನಾನೋಡಿ ಬಂದೆ, ಜೀವನ ಸಂಧ್ಯಾ, ಅಗೋಚರ, ಮುಕುಕಿದೀ ಮಬ್ಬಿನಲಿ, ಮಾಫಲೇಶುಕದಾಚನ, ಯಾವ ಮುರಳಿ ಕರೆಯಿತು, ತಲ್ಲಣಿಸದಿರು ಮನವೆ, ಧರಿತ್ರಿ’ ಮುಂತಾದ 30ಕ್ಕೂ ಹೆಚ್ಚು ಕಾದಂಬರಿ ರಚಿಸಿದ್ದಾರೆ. ...
READ MORE