ಕಡಲಾಳದ ಕಥೆಗಳು

Author : ಆರ್‌. ಕೆ. ಆಶಾ ಪ್ರಮೋದ

Pages 108

₹ 90.00




Published by: ಅದಮ್ಯ ಪ್ರಕಾಶನ
Address: 102/ಬಿ, ಮೊದಲ ಮಹಡಿ, ಎಂ.ಕೆ.ಸಿ.ಎಸ್. ಕಟ್ಟಡ, 3ನೇ ತಿರುವು ಮೌಂಟ್ ಜಾಯ್ ಬಡಾವಣೆ, ಹನುಮಂತನಗರ ಬೆಂಗಳೂರು

Synopsys

‘ಕಡಲಾಳದ ಕಥೆಗಳು’ ಆರ್‌. ಕೆ. ಆಶಾ. ಪ್ರಮೋದ್‌ ಅವರ ಕಾದಂಬರಿಯಾಗಿದೆ. ಕಾಮ'ವೆಂಬುದು ಎಲ್ಲ ರೀತಿಯ 'ಬೇಕು'ಗಳನ್ನು ಪ್ರತಿನಿಧಿಸುತ್ತದೆಯಾದರೂ ಮನುಷ್ಯರಲ್ಲಿ ಮಾತ್ರ ಮನೋವೈಜ್ಞಾನಿಕ ಹಿನ್ನೆಲೆಯಲ್ಲಿ ಅದನ್ನು ಸೆಕ್ಸ್ ಎಂಬಂತೆಯೇ ಬೇಗನೆ ಅರ್ಥ ಮಾಡಿಕೊಳ್ಳುವ ರೂಢಿ ಅಂಟಿಕೊಂಡಿದೆ. ವಿದ್ಯೆಯಿಲ್ಲದವರು ಹೆಚ್ಚು 'ವೈಜ್ಞಾನಿಕ'ವಾಗಿ ಚಿಂತಿಸದೆ 'ನೀ ಇಟ್ಟಂಗಿರುವೆನೋ ವಿಠಲ' ಎನ್ನುತ್ತ ನೆಮ್ಮದಿಯ ಬದುಕು ಸಾಗಿಸುತ್ತಾರೆ. ಆದರೆ ಸ್ವಲ್ಪ ಓದಿ, ಎಲ್ಲದರ ವಿಶ್ಲೇಷಣೆಗೆ ತೊಡಗಿದವರು ಮೂಲಭೂತ ಹಸಿವೆಯಾದ 'ಕಾಮ'ವನ್ನು ತುಂಬಾ ಕೆಟ್ಟದ್ದು ಅಥವ ಅಪವಿತ್ರವಾದದ್ದು, ನರಕಕ್ಕೆ ದಾರಿ ತೋರಿಸುವಂಥದ್ದು, ಆದರ್ಶ ಜೀವನಕ್ಕೆ ತದ್ವಿರುದ್ಧವಾದದ್ದು ಎಂದೆಲ್ಲ ಪರಿಭಾವಿಸುತ್ತಾರೆ ಅಥವ ಅಂಥ ಪ್ರಭಾವಕ್ಕೆ ಒಳಗಾಗಿ ತಲ್ಲಣಿಸುತ್ತಾರೆ. ಆದ್ದರಿಂದ ಸರಳವಾಗಿ ಬದುಕಬೇಕಾದವರು ಸಂಕೀರ್ಣತೆಯ ಜೀವನಕ್ಕೆ ತಮ್ಮನ್ನು ಬಲಿ ಕೊಟ್ಟು-ಬಿಡುತ್ತಾರೆ. ಈಗಾಗಲೇ ಎಸ್‌.ಎಲ್‌. ಭೈರಪ್ಪನವರಂತಹ ಕೆಲವರು ಮಾತ್ರ ಮನುಷ್ಯನ ಮೂಲಭೂತ ಹಸಿವೆಯನ್ನು ಕೇಂದ್ರವಾಗಿಸಿ ಕಾದಂಬರಿಗಳನ್ನು ಬರೆದಿದ್ದಾರೆ. ಅಂಥ ಒಂದು ಪುಟ್ಟ ಪ್ರಯತ್ನವನ್ನು ಲೇಖಕಿ ಶ್ರೀಮತಿ ಆರ್.ಕೆ. ಆಶಾ ಪ್ರಮೋದ್ ಅವರು ತಮ್ಮ ಈ 'ಕಡಲಾಳದ ಕತೆಗಳು' ಕೃತಿಯಲ್ಲಿ ಮಾಡಿದ್ದಾರೆ ಎನ್ನಬಹುದು.

Related Books