ಬಾಲ್ಯದ ಸವಿನೆನಪನ್ನು ನವಿರೇಳಿಸುವ ಹೊಳೆಬಾಗಿಲು. ಈ ಕಾದಂಬರಿಯ ಹೆಸರಲ್ಲೇ ಏನೋ ಆಕರ್ಷಣೆ ಇದೆ. ಕಥಾವಸ್ತುವಂತೂ ಬಲು ಆಪ್ಯಾಯಮಾನ. ಕಾದಂಬರಿಯಲ್ಲಿ ಬರುವ ಉತ್ತರಕನ್ನಡದ ಭಾಷಾ ಸೊಗಡು ಮಲ್ಲಿಗೆಯ ಪರಿಮಳದಂತೆ ನಮ್ಮನ್ನು ಸೋಕುತ್ತದೆ. ಗಂಗೊಳ್ಳಿಯ ದ್ವೀಪದಂತ ಪರಿಸರದಲ್ಲಿ ಜೀವಿಸುವ ಸುಬ್ಬಪ್ಪಯ್ಯರ ಸಂಸಾರದ ಕಥೆಯನ್ನು ನವಿರಾಗಿ ಬಿಡಿಸುತ್ತ ನಮ್ಮನ್ನು 80-90ರ ದಶಕದ ಹಿಂದಿನ ಜನಜೀವನದತ್ತ ಕರೆದೊಯ್ಯುತ್ತದೆ. .
ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಸ್ಥಾನ ಹೊಂದಿರುವ ಪ್ರಸಿದ್ಧ ಕತೆ, ಕಾದಂಬರಿಕಾರ್ತಿ ಎ. ಪಿ. ಮಾಲತಿಯವರು ಹುಟ್ಟಿದ್ದು ಭಟ್ಕಳದಲ್ಲಿ 1944 ರ ಮೇ 6 ರಂದು. ಅವರ ಎರಡು ಪತ್ತೆದಾರಿ ಕಾದಂಬರಿಗಳು ಹೊರಬಂದಾದ ಕೇವಲ ಹದಿನೈದರ ವಯಸ್ಸು. ಹಿಂದಿ ಭಾಷೆ ಕಲಿತು ಓದಿದ್ದು ಪ್ರೇಮಚಂದರ ಕಥೆ, ಠಾಕೂರರ ಬಂಗಾಲಿ ಅನುವಾದಗಳು. ಅಧ್ಯಾಪಕರು, ಸಾಹಿತ್ಯಾಸಕ್ತರು, ವಿದ್ಯಾವಂತರಾದ ಪತಿ, ಎ.ಪಿ. ಗೋವಿಂದಭಟ್ಟರಿಂದ ದೊರೆತ ಪ್ರೋತ್ಸಾಹ. ಕೃಷಿ ಜೀವನದ ಜೊತೆಗೆ ಹಳ್ಳಿಯ ಹೆಂಗಸರು ಭತ್ತ ಕುಟ್ಟಲು ಪಡುತ್ತಿದ್ದ ಭವಣೆ ನೋಡಿ ಪ್ರಾರಂಭಿಸಿದ ರೈಸ್‌ಮಿಲ್, ಜೊತೆಗೆ ಹಾಲಿನ ವ್ಯಾಪಾರ. ಜನರೊಡನೆ ಬೆರೆಯುತ್ತಾ ಹೋದಂತೆಲ್ಲ ...
READ MORE