ಬ್ರಾಮ್ ಸ್ಟೋಕರ್ ರಚಿಸಿರುವ ’ಡ್ರಾಕುಲ’ ಕಾದಂಬರಿಯನ್ನು 1988 ರಲ್ಲಿ ಕನ್ನಡಕ್ಕೆ ಅನುವಾದ ಮಾಡಿದವರು ಲೇಖಕರಾದ ವಾಸುದೇವರಾವ್. 1877 ರಲ್ಲಿ ಬರೆದ ಈ ಕಾದಂಬರಿ ಅಂದಿನಿಂದ ಇಂದಿನವರೆಗೂ ವಿಶ್ವದ ಅಸಂಖ್ಯಾತ ಜನರ ನಿದ್ದೆಗೆಡಿಸಿದ ಕೃತಿಯಾಗಿದೆ. ರೋಚಕ, ಭಯಾನಕ ಕೃತಿಯೂ ಹೌದು. ಪರಂಪರೆಗೆ ನಾಂದಿ ಹಾಡಿದ ಕಥೆ ಕೂಡಾ ಹೌದು, ಈ ಕಾದಂಬರಿಯನ್ನು ಆಧರಿಸಿ ಅನೇಕ ಸಿನಿಮಾಗಳು ಬಂದವು. 'ಡ್ರಾಕುಲಾ' ಪಾತ್ರದ ಮುಖಾಂತರ ಜಗತ್ತಿನ ದುಷ್ಟಶಕ್ತಿ ಶಿಷ್ಟಶಕ್ತಿಗಳ ನಡುವಿನ ಹೋರಾಟವನ್ನು ಮನೋವೈಜ್ಞಾನಿಕ ನೆಲೆಯಲ್ಲಿ ಲೇಖಕರು ಚಿತ್ರಿಸಿದ್ದಾರೆ.
ವಾಸುದೇವರಾವ್ ಕನ್ನಡದ ಪ್ರಸಿದ್ಧ ಲೇಖಕರು.ಅನೇಕ ಸ್ವತಂತ್ರ ಕೃತಿಗಳ ಜೊತೆಗೆ ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಷರ್ಲಾಕ್ ಹೋಮ್ಸ್ ನ ಕೃತಿಗಳ ಅನುವಾದ ಮತ್ತು ಬ್ರಾಮ್ ಸ್ಪೋಕರ್ ಅವರ ಡ್ರಾಕುಲ ಇವರ ಪ್ರಮುಖ ಕೃತಿಗಳು. ವಾಸುದೇವರಾವ್ ಅವರು ಈಗ ನಮ್ಮೊಂದಿಗಿಲ್ಲ. ...
READ MORE