‘ಬಹುರೂಪಿ’ ಪ್ರೇಮಕುಮಾರ ಹರಿಯಬ್ಬೆ ಅವರ ಕಾದಂಬರಿಯಾಗಿದ್ದು, ಕಾದಂಬರಿಯಲ್ಲಿ ಹೊಸ, ಹೊಸ ರೂಪ ಧರಿಸುವ ವ್ಯಕ್ತಿಗತ ಅನಿವಾರ್ಯತೆ ಮತ್ತು ಸದಾ ತಿರುವುಗಳನ್ನು ಪಡೆದುಕೊಳ್ಳುತ್ತ ಸಾಗುವ ಸಾಮಾಜಿಕ ಮತ್ತು ರಾಜಕೀಯ ಸಂದರ್ಭಗಳನ್ನು ಕಟ್ಟಿಕೊಡುವ ಪ್ರಯತ್ನ ಲೇಖಕರಾದ ಪ್ರೇಮಕುಮಾರ ಹರಿಯಬ್ಬೆ ಅವರು ಮಾಡಿದ್ದಾರೆ. ಈ ಕಾದಂಬರಿ ಯಾವುದೇ ವ್ಯಕ್ತಿ, ಆಶ್ರಮ ಅಥವಾ ಮಠವನ್ನು ಕುರಿತದ್ದಲ್ಲ. ಪತ್ರಕರ್ತ ವೃತ್ತಿ ಜೀವನದ ನಲವತ್ತು ವರ್ಷಗಳ ಅವಧಿಯಲ್ಲಿ ಕಂಡ, ಕೇಳಿದ ಹಲವಾರು ಸಂಗತಿಗಳನ್ನು ಬಳಸಿಕೊಂಡು ಸುಂದರವಾದ ಕಾದಂಬರಿಯನ್ನು ರಚಿಸಿದ್ದಾರೆ.
ಹಿರಿಯ ಪತ್ರಕರ್ತ ಹಾಗೂ ಲೇಖಕ ಪ್ರೇಮಕುಮಾರ ಹರಿಯಬ್ಬೆ ಅವರು ಮೂಲತಃ ಚಿತ್ರದುರ್ಗ ಜಿಲ್ಲೆಯ ಹರಿಯಬ್ಬೆ ಗ್ರಾಮದವರು. ಪ್ರಜಾವಾಣಿ ದಿನಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ಅವರು ತಮ್ಮ ವೃತ್ತಿ ಜೀವನವನ್ನು ಆರಂಭಿಸಿ, ಬಳ್ಳಾರಿ ಹಾಗೂ ಧಾರವಾಡ ಜಿಲ್ಲಾ ವರದಿಗಾರರಾಗಿ, ನಂತರ ಪ್ರಜಾವಾಣಿ ಭಾನುವಾರದ ವಿಶೇಷ ಪುರವಣಿಯ ಸಂಪಾದಕರಾಗಿಯೂ ಸೇವೆ ಸಲ್ಲಿಸಿ ಸದ್ಯ ನಿವೃತ್ತರು. ಕೃತಿಗಳು: ಸತ್ತವರು (1980), ದೇವಕಣಗಿಲೆ (2010), ಅಕಾಲ(2021) ಇವು ಮೂರು ಕಥಾ ಸಂಕಲನಗಳು. ಪ್ರಶಸ್ತಿ-ಪುರಸ್ಕಾರಗಳು: ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ ಇವರಿಗೆ 2018ನೇ ಸಾಲಿನ ‘ವಾರ್ಷಿಕ ಪ್ರಶಸ್ತಿ’ ಲಭಿಸಿದೆ. ...
READ MORE