‘ಡೂರೋಯುಗ’ ಲೇಖಕ ಹ.ಶಿ. ಭೈರನಟ್ಟಿ ಅವರ ವೈಜ್ಞಾನಿಕ ಕಾದಂಬರಿ. ಇದು ತರಂಗ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡ ಕಾದಂಬರಿಯಾಗಿದೆ. ಡೂರೋ ಎಂದರೆ ‘ಡೂ’ಪ್ಲಿಕೇಟ್ ಮಾನವ ರೋ ಬೋ. ಥೇಟ್ ಮಾನವರಂತೇ ಕಾಣುವುದರಿಂದ ಈ ಹೆಸರು. ಸೃಜನಾತ್ಮಕತೆಯನ್ನು ಮೈಗೂಡಿಸಿಕೊಂಡ ಡೂರೋಗಳು ಸಂಗೀತ ಕ್ಷೇತ್ರ ಪ್ರವೇಶಿಸಿ ಸಮ್ಮೋಹಿನಿ ಎಂಬ ಹೊಸ ರಾಗ ಸೃಷ್ಟಿಸಿದ್ದು ಹ.ಶಿ. ಭೈರನಟ್ಟಿ ಅವರ ಸಂಗೀತ ಸಮ್ಮೋಹಿನಿ ಕಾದಂಬರಿಗೆ ವಸ್ತುವಾಗಿತ್ತು. ಪ್ರಸ್ತುತ ಡೂರೋಯುಗದಲ್ಲಿ ವಿಜ್ಞಾನಿ-ತಂತ್ರಜ್ಞಾನಿಯೊಬ್ಬ ಡೂರೋಗಳಿಗೆ ತರಬೇತಿ ನೀಡಿ ಕಥೆ ಬರೆಸುವ ಹವಣಿಕೆಯಲ್ಲಿದ್ದಾನೆ. ಮನೋರಂಜನೆಯ ಜೊತೆ ಜೊತೆಗೇ ಮಹಾಕಾಲ, ಮಹಾವಿಶ್ವ(ಮಲ್ಟಿವರ್ಸ್)ಗಳ ಕಲ್ಪನೆಗಳನ್ನೂ ಅಳವಡಿಸಿದ್ದಾರೆ.
ವೈಜ್ಞಾನಿಕ ಕಾದಂಬರಿ ಪ್ರಕಟಿಸಿರುವ ಹನುಮಂತ ಶಿ. ಭೈರನಟ್ಟಿ ಅವರು ಕನ್ನಡದ ಪ್ರಮುಖ ಚಿಂತಕ-ಲೇಖಕರಲ್ಲಿ ಒಬ್ಬರು. ಮೂಲತಃ ಬೆಳಗಾವಿ ಜಿಲ್ಲೆಯ ಕುಲಗೋಡ ಗ್ರಾಮದವರು. 1950ರ ಮೇ 2ರಂದು ಜನಿಸಿದರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ ಎಂ.ಎಸ್ಸಿ ಪದವಿ ಪಡೆದಿದ್ದರು. ಜೀವ ವಿಮಾ ನಿಗಮ (ಎಲ್.ಐ.ಸಿ.)ದಲ್ಲಿ 35 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.ಹಲವು ವೈಜ್ಞಾನಿಕ ಕೃತಿಗಳನ್ನು ಪ್ರಕಟಿಸಿದ್ದರು. ಅವರು 2019ರ ಮೇ 5ರಂದು ಧಾರವಾಡದಲ್ಲಿ ನಿಧನರಾದರು. ...
READ MORE