‘ಜೊತೆ ಜೊತೆಯಲಿ’ ಲೇಖಕಿ ಗೀತಾ ಬಿ.ಯು ಅವರ ಕಾದಂಬರಿ, ತರಂಗ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತ್ತು. ಶಂಕರ್ ನಾಗ್ ಅವರ 'ಗೀತಾ' ಚಿತ್ರದ ಹಾಡಿನ ಸಾಲನ್ನೇ ಕಾದಂಬರಿಯ ಹೆಸರಾಗಿಸಿದ ಲೇಖಕಿ, ಒಂದು ನವಿರು ಪ್ರೇಮಕತೆಯನ್ನು ಕಾದಂಬರಿಯಾಗಿಸಿದ್ದಾರೆ.
ಸುಂದರ ಚಿಕ್ಕ ಹುಡುಗಿ, ಸರಸವಾಗಿ ಮಾತನಾಡುವ ಹುಡುಗಿ ಅವಳಿಗೆ ತಕ್ಕದಾದ ಚೆಲುವ ಚೆನ್ನಿಗರಾಯನಂಥ ಹುಡುಗ. ಎಳೆಯರ ಜೀವನದ ಕೀಟಲೆ, ಸಂಗೀತ, ನಗು, ಚೆಲುವು, ಶೃಂಗಾರ ಎಲ್ಲ ಇರಬೇಕು ಎಂದು ಶುರು ಮಾಡುವ ಲೇಖಕಿ, ಹಿರಿಯರ ಜವಾಬ್ದಾರಿ, ನೋವು, ಆತಂಕ, ಆಸೆ, ನಿರಾಸೆ ಎಲ್ಲವೂ ಸೇರಿಸುತ್ತಾ ಹೋಗುತ್ತಾರೆ. ಎರಡು ತಲೆಮಾರುಗಳ ರೀತಿ, ಚಿಂತನೆ ಒಬ್ಬರಿಂದ ಒಬ್ಬರು ಕಲಿಯುತ್ತಾ ಒಬ್ಬರನ್ನೊಬ್ಬರು ಅರಿಯುತ್ತಾ ಹೋಗುವ ಕಥಾವಸ್ತುವೇ ಈ ಕಾದಂಬರಿ.
ತಮ್ಮ ಕತೆ-ಕಾದಂಬರಿಗಳ ಮೂಲಕ ಕನ್ನಡ ಓದುಗರಿಗೆ ಚಿರಪರಿಚಿತ ಇರುವ ಗೀತಾ ಬಿ.ಯು. ಇದುವರೆಗೆ 12 ಕಾದಂಬರಿಗಳನ್ನು ಬರೆದು ಪ್ರಕಟಿಸಿದ್ದಾರೆ. ಬೆಂಗಳೂರಿನವರಾಗಿರುವ ಗೀತಾ ಅವರ ಕತೆ-ಕಾದಂಬರಿಗಳು ಕನ್ನಡದ ಮಾಸ ಹಾಗೂ ವಾರ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ’ಅವರನ್ನು ಬಿಟ್ಟು ಇವರನ್ನು ಬಿಟ್ಟು ಇವರು ಯಾರು’ ಹಾಗೂ ’ಮಿಥ್ಯ’ ಕಾದಂಬರಿಗಳು ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾಗಿದ್ದವು. ಸೋಲು ಗೆಲುವಿನ ಹಾದಿಯಲ್ಲಿ, ಹೊಂಗೆಯ ನೆರಳು, ಕೈ ಹಿಡಿದು ನಡೆಸನ್ನೆನ್ನನು, ಆರದಿರಲಿ ಬೆಳಕು, ವಾರಸುದಾರ, ಅದೇ ಏಕಾಂತ, ಜೊತೆ-ಜೊತೆಯಲಿ ಮುಂತಾದವು ಇವರ ಇನ್ನಿತರ ಕಥಾ ಸಂಕಲನ ಹಾಗೂ ಕಾದಂಬರಿಗಳು. ಆಂಗ್ಲ ಮಾಧ್ಯಮದಲ್ಲಿ ಓದಿರುವ ಗೀತಾ ಅವರು ...
READ MORE