‘ಸುಗುಣ ಕುಬೇರ ಮತ್ತಿತರ ಕಥನಗಳು’ ಕೃತಿಯು ಎಂ.ಎಸ್. ಸಂಪತ್ತಯ್ಯಂಗಾರ್ ಅವರ ಕತಾನಕಸಂಕಲನವಾಗಿದೆ. ಈ ಕತೆಗಳು ಊರೊಂದರ ಚರಿತ್ರೆಯನ್ನು ಹೇಳುತ್ತದೆ. ತನ್ನ ನೆಲಕ್ಕೆ ಆಳವಾಗಿ ಅಂಟಿಕೊಂಡಿರುವ ಜೀವವೊಂದು ಅಲ್ಲಿನ ಬದುಕಿನ ಹೊಳೆಯೊಳಗೆ ಕಂಠಮಟ್ಟ ಮುಳುಗಿದರೂ ಅದೇ ಸಮಯದಲ್ಲಿ ಅದರಿಂದ ಬೇರೆಯಾಗಿ, ಬದಲಾಗುತ್ತಿರುವ ಅದರ ತಿರುವು ಮುರುವು, ಏರಿಳಿವು, ಬಣ್ಣಗಳನ್ನು ಸೂಕ್ಷ್ಮವಾಗಿ ಗಮನಿಸುವ, ಕೆಲವೊಮ್ಮೆ ಅದರ ದಾರಿಯನ್ನು ಬದಲಿಸುವ ಸಾಹಸವನ್ನೂ ಕೂಡ ಮಾಡುತ್ತದೆ. ವ್ಯಕ್ತಿ, ಸಂಸ್ಥೆ, ಸಮುದಾಯದ ಬಿರುಕು ಸರಿ ಮಾಡುವ, ಜೀವ ಜಲದ ಮೇಲೆ ಕವಿದು ಬಿದ್ದರುವ ಮಣ್ಣನ್ನು, ನೋವಿಗೆ ಮಿಡಿಯುವ ಸಹಾಯ ಹಸ್ತ ಚಾಚುವ, ಕೈ ಮೀರಿದ ಕ್ರೌರ್ಯ, ಸಣ್ಣತನಕ್ಕೆ ಸಿಡಿಯುವ ನಿರೂಪಕನ ಪಾತ್ರ ಕಾಲದೇಶಬದ್ಧ ಈ ಕತೆಗಳು ಎಲ್ಲಿಯೂ ಸಂಭವಿಸುತ್ತದೆ ಎನಿಸುತ್ತದೆ ಎಂಬುದು ಈ ಕೃತಿಯಲ್ಲಿ ವಿಶ್ಲೇಷಿತವಾಗಿದೆ.
ಎಂ.ಎಸ್. ಸಂಪತ್ತಯ್ಯಂಗಾರ್ ಅವರು ಮೂಲತಃ ದೊಡ್ಡಬಳ್ಳಾಪುರದವರು ಓದು-ಬರಹ ಇವರ ಹವ್ಯಾಸ. ಕೃತಿಗಳು : ನಾಳೆ ತಿಂಡಿ ಏನು?, (ಸಾಂಪ್ರದಾಯಿಕ ಪಾಕ ಶಾಸ್ತ್ರ), ಸುಗುಣ ಮತ್ತಿತರ ಕಥೆಗಳು (ಕಥಾ ಸಂಕಲನ) ...
READ MORE