ಲೇಖಕ ಹರೀಶ್ ಹಾಗಲವಾಡಿ ಅವರ ಕಾದಂಬರಿ -ನ್ಯಾಸ. ಅಹಂಕಾರ ಹಾಗೂ ಮಮಕಾರಗಳನ್ನು ಹೊರತುಪಡಿಸಿ ಸೇವೆ ಮಾಡಲು ಸಾಧ್ಯವಾ? ಎಂಬ ಕೃತಿಯ ಉಪಶೀರ್ಷಿಕೆಯು ಇಡೀ ಕಾದಂಬರಿಯ ಮನೋಧರ್ಮವನ್ನು ಸೂಚಿಸುತ್ತದೆ. ಚಿಂತನ, ಮಂಥನ ಹಾಗೂ ದರ್ಶನಗಳನ್ನು ವಿವಿಧ ಹಂತದಲ್ಲಿ ವಿವಿಧ ಸನ್ನಿವೇಶಗಳ ಮೂಲಕ ತುಂಬಾ ಪರಿಣಾಮಕಾರಿಯಾಗಿ ನಿರೂಪಿಸಿರುವ ಲೇಖಕರು, ಪಾತ್ರಗಳ ಸೃಷ್ಟಿಯಲ್ಲೂ ಪ್ರಬುದ್ಧತೆಯನ್ನು ಮೆರೆದಿದ್ದಾರೆ. ಜೀವನ ಸಾರ್ಥಕತೆಯಲ್ಲಿ ವ್ಯಕ್ತಿಯ ಧಾರ್ಮಿಕ ಮನೋಭಾವ, ದಾರ್ಶನಿಕತೆಯ ಪ್ರಭಾವ ಕುರಿತಂತೆ ಸಂದೇಶ ನೀಡುತ್ತದೆ.
ಲೇಖಕ ಹರೀಶ್ ಹಾಗಲವಾಡಿ ಅವರು ಮೂಲತಃ ತುಮಕೂರಿನವರು. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದು ಎ.ಎಸ್.ಸಿ. ಡಿಗ್ರಿ ಕಾಲೇಜಿನ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ 'ಋಷ್ಯಶೃಂಗ' ಕೃತಿಯನ್ನು ಛಂದ ಪುಸ್ತಕ ಪ್ರಕಟಿಸಿದೆ. ...
READ MORE