1948 ಸೆಪ್ಟಂಬರ್ 1ರಂದು ಜನಿಸಿದ ಇವರು ಜಾಹೀರಾತು ಉದ್ಯಮದಲ್ಲಿ ಕಾಪಿರೈಟರ್, ಪತ್ರಕರ್ತೆಯಾಗಿ ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸಿದ್ದಾರೆ. ಸೃಜನಶೀಲ, ಪ್ರಗತಿಪರ ವಿಚಾರಧಾರೆಗಳನ್ನು ಪ್ರತಿಪಾದಿಸುವ, ಸೂಕ್ಷ್ಮ ಸಂವೇದನೆಯುಳ್ಳ ಲೇಖಕಿಯಾಗಿ ಮುಖ್ಯವೆನಿಸುತ್ತಾರೆ. 80ರ ದಶಕದಲ್ಲಿ, ಉಮಾರಾವ್ ರವರು 'ಫ್ರೀಲಾನ್ಸ್ ಕಾಪಿರೈಟರ್' ಹಾಗೂ 'ಜರ್ನಲಿಸ್ಟ್' ಆಗಿ ಕೆಲಸ ಮಾಡಲು ಪ್ರಾರಂಭಿಸಿದರು. ಉಮಾರವರ ಬರಹ, ಕಥೆಗಳು ಕನ್ನಡದ ಹಲವಾರು ದಿನಪತ್ರಿಕೆಗಳಲ್ಲಿ, ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ, ಮಹಿಳಾ ವರ್ಷ ದತ್ತಿ ನಿಧಿ ಪ್ರಶಸ್ತಿ, ಗೊರುರು ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ಎಚ್.ವಿ ಸಾವಿತ್ರಮ್ಮ ಪ್ರಶಸ್ತಿ, ಮುಂಬೈ ಡೈರಿಗೆ ಬಹುಮಾನ ಲಭಿಸಿದೆ. ಅಗಸ್ತ್ಯ, ಕಾಡು ಹಾದಿ, ಸಿಲೋನ್ ಸುಶೀಲ ಹಾವಡಿಗ ಮೀಸೆ ಹೆಂಗಸು ಮತ್ತು ಇತರರು ಕಥಾ ಸಂಕಲನ ರಚಿಸಿದ್ದಾರೆ. ನೂರು ಸ್ವರ ಇವರ ಕಾದಂಬರಿಯಾಗಿದೆ. ರಾಕೀ ಪರ್ವತಗಳ ನಡುವೆ ಕ್ಯಾಬರೆ ಇವರ ಕೆನಡಾ ಮತ್ತು ಅಮೇರಿಕಾ ಪ್ರವಾಸ ಅನುಭವವಾಗಿದ್ದು ಬಿಸಿಲು ಕೋಲು ಇವರ ಜೀವನ ಚರಿತ್ರೆಯಾಗಿದೆ. ವನಜಮ್ಮನ ಡೈರಿ ಇವರು ಕಿರು ಕಾದಂಬರಿಗಿದ್ದು ಹೆಣ್ಣೊಬ್ಬಳ ಸಾಮಾಜಿಕ ಸ್ಥಾನಪಲ್ಲಟದ ಕುರಿತಾಗಿದೆ.
ಇವರ ಬಿಸಿಲು ಕೋಲು ಕೃತಿಗೆ 2006 ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ಲಭ್ಯವಾಗಿದೆ. ಸಿಲೋನ್ ಸುಶೀಲಾ ಕಥಾ ಸಂಕಲನಕ್ಕೆ 2010ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ಹಾಗೂ ಎಚ್.ವಿ.ಸಾವಿತ್ರಮ್ಮ ಜನ್ಮ ಶತಾಬ್ಧಿ ಪ್ರಶಸ್ತಿ ಲಭಿಸಿದೆ. ಅಗಸ್ತ್ಯ, ಮುಂಬೈ ಡೈರಿ, ನೂರುಸ್ವರ ಕೃತಿಗಳಿಗೆ ಕನ್ನಡ ಸಾಹಿತ್ಯ ಪರಿಷತ್ ದತ್ತಿನಿಧಿ ಬಹುಮಾನಗಳು, ನೂರುಸ್ವರಕ್ಕೆ ಗೊರೂರು ಪ್ರಶಸ್ತಿ, ಬಿಸಿಲು ಕೋಲು ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಮಲ್ಲಿಕಾ ಪ್ರಶಸ್ತಿ ಲಭಿಸಿದೆ.