ತೇಜಸ್ವಿಯವರಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟ ಕಾದಂಬರಿ ’ಕರ್ವಾಲೊ’. ೧೯೮೦ರಲ್ಲಿ ಇದರ ಮೊದಲ ಮುದ್ರಣ ಆದ ಈ ಕಾದಂಬರಿಯು ಕಳೆದ ಮೂವತ್ತೆಂಟು ವರ್ಷಗಳಲ್ಲಿ ನಲ್ವತ್ತೂರು ಮುದ್ರಣ ಕಂಡಿದೆ. ಜೀವ ವಿಕಾಸದ ಅವಸ್ಥಾಂತರಗಳನ್ನು ಶೋಧಿಸುತ್ತ ವಿವಿಧ ಜೀವ ಸಂಕುಲಗಳ ವಿನಾಶ ಮತ್ತು ಅವುಗಳ ಹಿಡಿಯಲೆತ್ನಿಸುವ ಮನುಷ್ಯನ ವೈಫಲ್ಯವನ್ನು ಈ ಕಾದಂಬರಿ ಚಿತ್ರಿಸುತ್ತದೆ. ಕನ್ನಡ ಕಾದಂಬರಿ ಪ್ರಕಾರದ ಸಾಧ್ಯತೆಗಳನ್ನು ವಿಸ್ತರಿಸಿದ ಕೃತಿಯಿದು. ತೇಜಸ್ವಿಯವರಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟ ಕಾದಂಬರಿ ’ಕರ್ವಾಲೊ’. 1980ರಲ್ಲಿ ಇದರ ಮೊದಲ ಮುದ್ರಣ ಆದ ಈ ಕಾದಂಬರಿಯು ಕಳೆದ ಮೂವತ್ತೆಂಟು ವರ್ಷಗಳಲ್ಲಿ ನಲ್ವತ್ತೂರು ಮುದ್ರಣ ಕಂಡಿದೆ. ಜೀವ ವಿಕಾಸದ ಅವಸ್ಥಾಂತರಗಳನ್ನು ಶೋಧಿಸುತ್ತ ವಿವಿಧ ಜೀವ ಸಂಕುಲಗಳ ವಿನಾಶ ಮತ್ತು ಅವುಗಳ ಹಿಡಿಯಲೆತ್ನಿಸುವ ಮನುಷ್ಯನ ವೈಫಲ್ಯವನ್ನು ಈ ಕಾದಂಬರಿ ಚಿತ್ರಿಸುತ್ತದೆ. ಕನ್ನಡ ಕಾದಂಬರಿ ಪ್ರಕಾರದ ಸಾಧ್ಯತೆಗಳನ್ನು ವಿಸ್ತರಿಸಿದ ಕೃತಿಯಿದು. ಇಂಗ್ಲಿಷ್, ಜಪಾನಿ, ಮಲಯಾಳಂ, ಮರಾಠಿ, ತಮಿಳು, ಜರ್ಮನ್ ಭಾಷೆಗಳಿಗೆ ಭಾಷಾಂತರಗೊಂಡಿದೆ. 1980ರ ಅತ್ಯುತ್ತಮ ಸೃಜನಶೀಲ ಕೃತಿ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಿಶೇಷ ಬಹುಮಾನ ಪಡೆದ ಕೃತಿಯಿದು.
ಕನ್ನಡದ ಹೆಸರಾಂತ ಲೇಖಕ ಕುವೆಂಪು ಅವರ ಪುತ್ರರಾಗಿರುವ ಪೂರ್ಣಚಂದ್ರ ತೇಜಸ್ವಿ ಅವರು 08-09-1938ರದು ಜನಿಸಿದರು. ತಮ್ಮ ಬರವಣಿಗೆಯ ಮೂಲಕವೇ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ’ಚಿದಂಬರ ರಹಸ್ಯ’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ತೇಜಸ್ವಿ ಅವರು ಕನ್ನಡದಲ್ಲಿ ನವ್ಯ ಸಾಹಿತ್ಯ ಚಳುವಳಿಯು ಉಚ್ಛ್ರಾಯ ಸ್ಥಿತಿಯಲ್ಲಿದ್ದ ದಿನಗಳಲ್ಲಿ ಅದಕ್ಕಿಂತ ಭಿನ್ನವಾದ ನೆಲೆಯ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದರು. ನವ್ಯ ಲೇಖಕರು ನಗರ ಕೇಂದ್ರಿತ, ವ್ಯಕ್ತಿನಿಷ್ಟ ಸಾಹಿತ್ಯ ರಚನೆಯಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಬದುಕು ಕುರಿತ ಮತ್ತು ಅದು ಹಳಹಳಿಕೆಯ ಧ್ವನಿಯಲ್ಲಿ ಇರದ ಹಾಗೆ ನೋಡಿಕೊಂಡರು. ಲೋಹಿಯಾ ಚಿಂತನೆಗಳಿಂದ ಪ್ರೇರಿತರಾಗಿದ್ದ ...
READ MOREKARVALO Book review l ಕವಾ೯ಲೋ ಪುಸ್ತಕದ ಓಳನೋಟ | ಕೆ.ಪಿ.ಪೂಣ೯ಚಂದ್ರ ತೇಜಸ್ವೀ
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ -1980