ಲೇಖಕಿ ಸವಿತಾ ಶ್ರೀನಿವಾಸ್ ಅವರ ವೈಜ್ಞಾನಿಕ ಕಾದಂಬರಿ-ಗಾಳಕ್ಕೆ ಸಿಕ್ಕ ಚಂದಿರ. ಕನ್ನಡ ಸಾಹಿತ್ಯದಲ್ಲಿ ವೈಜ್ಞಾನಿಕ ಲೇಖನಗಳು, ಕಾದಂಬರಿಗಳು ಸಂಖ್ಯೆಯಲ್ಲಿ ವಿರಳ. ಇಂತಹ ಸನ್ನಿವೇಶದಲ್ಲಿ ಲೇಖಕಿ ವೈಜ್ಞಾನಿಕ ಕಾದಂಬರಿ ಬರೆದಿದ್ದಾರೆ. ಕಾದಂಬರಿಯ ವಿಷಯ ವಸ್ತು, ನಿರೂಪಣಾ ಶೈಲಿ, ಸನ್ನಿವೇಶಗಳ ಜೋಡಣೆ, ಪಾತ್ರಗಳ ಸೃಷ್ಟಿ, ಪರಿಣಾಮಕಾರಿ ಸಂಭಾಷಣೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಈ ಕೃತಿಯು ಓದುಗರ ಗಮನ ಸೆಳೆಯುತ್ತದೆ.
ಸವಿತಾ ಶ್ರೀನಿವಾಸ ಅವರು ಮೂಲತಃ ಬೆಂಗಳೂರಿನವರು. ಸ್ನಾತಕೋತ್ತರ ಡಿಪ್ಲೊಮಾ (ಪತ್ರಿಕೋದ್ಯಮ ಮತ್ತು ಸಮೂಹ ಮಾಧ್ಯಮ) ಎಂ.ಎ.(ಯೋಗ) ಪದವಿ ಪಡೆದಿದ್ದಾರೆ. ತಂದೆ ಎಂ.ಸಿ. ಶ್ರೀನಿವಾಸ, ತಾಯಿ ರತ್ನಮ್ಮ. ಕೃತಿಗಳು : ಮಧುಮಾಸ (ಕಾದಂಬರಿ) ೧೯೯೩, ಈ ಮನದ ಆಕಾಶಗಂಗೆ (ಕಥಾ ಸಂಕಲನ) ೧೯೯೩, ಹಿಮಗಿರಿಯ ಹೇಮಲತೆ (ಕಾದಂಬರಿ) ೧೯೯೪, ರ‍್ಮನಿಯ ಒಡಲಲ್ಲಿ (ಪ್ರವಾಸ ಕಥನ) ೧೯೯೮, ಕನ್ನಡ ವೈಜ್ಞಾನಿಕ ಕತೆಗಳು (ಸಂಪಾದಿತ) ೨೦೦೦, ಶತಮಾನದಂಚಿನ ಮಿಂಚು (ಕಥಾ ಸಂಕಲನ) ೨೦೦೧, ಹೂಗುಚ್ಛ (ಪ್ರೌಢಮಕ್ಕಳ ಕತೆಗಳು) ೨೦೦೧, ಸಂಗೀತ ಚಿಕಿತ್ಸೆ (ವೈಜ್ಞಾನಿಕ) ೨೦೦೨, ಕಾಮನಬಿಲ್ಲ ಅರಸುವವರು (ದಶಕದ ಆಯ್ದಕತೆಗಳು) ೨೦೦೫, ...
READ MORE