ಈ ಕಾದಂಬರಿಯಲ್ಲಿ ನಾನು ಹೇಳುವ ಅಗ್ರಹಾರ ಇಪ್ಪತ್ತನೆ ಶತಮಾನದಲ್ಲಿ ಉಸಿರಾಡಿದ್ದ ಶಿವಳ್ಳಿ ಎನ್ನುವ ಹಳ್ಳಿ, ಇಲ್ಲಿನ ಬದುಕಿನ ಮೇಲೆ ಒಂದು ಸಣ್ಣ ಬೆಳಕನ್ನಾದರೂ ಬೀರುವ ಪ್ರಯತ್ನ ಇದು. ಆದ್ದರಿಂದಲೇ, ಮಾರ್ಕ್‌ಟೈನ್ ನಿರ್ವಚನ ಮಾಡುವ ಹಾಗೆ ಒಂದು ಕಾದಂಬರಿ ಸಮಾಜದ ಒಂದು ಕಾಲಘಟ್ಟದ ನಿರೂಪಣೆ. ಇದರಲ್ಲಿ ಒಂದು ಪ್ರಾರಂಭ, ಒಂದು ಕೈಮ್ಯಾಕ್ಸ್, ಒಂದು ಮುಕ್ತಾಯ ಇಂತಹುವೂ ಮತ್ತು ಲವ್, ಇಂಟ್ರಿಗ್‌ನಂತಹವೂ ಇರಲೇಬೇಕು ಎನ್ನುವಂತಹ ಸೂತ್ರ ಇರಬೇಕಿಲ್ಲ. ಇದು ನೈಜವಾಗಿ ಒಂದು ಸಮಾಜ ಇರುವ ಹಾಗಿನ ಚಿತ್ರಣ. ಹಾಗಾಗಿ ನನ್ನ ಹಳ್ಳಿಯನ್ನು ನನ್ನ ವಯಸ್ಸು ಕಣ್ಣು ಮತ್ತು ಮನಸ್ಸಿನ ಮೂಲಕ ಗ್ರಹಿಸಿದ್ದನ್ನು ಪಡಿಮೂಡಿಸುವ ಒಂದು ನಮ್ಮ ಪ್ರಯತ್ನವಿದು.
ಕೋಲಾರದ ಮುಡಿಯ ನೂರಿನ ನೈಷಧಂ ಇಂಗ್ಲಿಷ್ ಸ್ನಾತಕೋತ್ತರ ಪದವೀಧರರು. ಸರ್. ಎಂ. ವಿ. ಕಾಲೇಜು ಮತ್ತು ಎ. ಪಿ. ಎಸ್. ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಮಾಡಿ ಈಗ ನಿವೃತ್ತಿಹೊಂದಿದ್ದಾರೆ. ವಿಭಿನ್ನ ಮಾಧ್ಯಮಗಳಿಗನುಸಾರವಾಗಿ ಬರೆಯುವ ಕಲೆಯನ್ನು ಕರಗತವಾಗಿಸಿಕೊಂಡಿರುವ ಇವರು ಪ್ರಬುದ್ಧ ಅನುವಾದಕರು. ಕೃತಿಗಳು : ‘ಸುಪ್ತ ಚೇತನ ಕ್ರಾಂತಿ' ಕಾವ್ಯ, 'ಎಳರಂಗ' ನಾಲ್ಕು ಕಿರುನಾಟಕಗಳು, 'ಸೊಡರು ನುಂಗುವ ಕತ್ತಲು', 'ಸಂಪನ್ನ ಸಮಾಜ', 'ಕಪ್ಪಿ' ರಂಗ ಪ್ರಯೋಗ ಕೃತಿಗಳು. 'ಕಪ್ಪು ವಜ್ರಗಳು ಮತ್ತು ಚೆಂಗುಲಾಬಿ' (ದಕ್ಷಿಣ ಆಫ್ರಿಕದ ಹೋರಾಟ ಕವನಗಳು), 'ಚಿನ್ನದುಳಿ ಮತ್ತು ಕಲ್ಲುಕುಟಿಗರು' (16 ಚೀನೀ ಪ್ರಾತಿನಿಧಿಕ ಜಾನಪದ ...
READ MORE