ಕೃತಿಗಳ ಮೂಲಕ ಓದುಗರ ಒಂದು ವರ್ಗವನ್ನು ಇನ್ನಿಲ್ಲದಂತೆ ಸೆಳೆದವರು ಸತ್ಯಕಾಮ. ಪುರಾಣಗಳೇ ಅವರ ಕೃತಿಗಳ ಜೀವಾಳ. ’ರಾಜಕ್ರೀಡೆ’ ಕೂಡ ಇಂತಹ ಪುರಾಣ ಪುರುಷನೊಬ್ಬನ ಕತೆ. ಆದರೆ ಪುರಾಣ- ಅಧ್ಯಾತ್ಮದ ಜೊತೆಗೆ ಇಲ್ಲಿ ರಾಜಕಾರಣವೂ ಮೇಳೈಸಿದೆ ಎನ್ನುವುದು ವಿಶೇಷ.
ಕೃತಿಯಲ್ಲಿ ಬರುವ ಆ ಪುರಾಣ ಪುರುಷನ ಹೆಸರು ಶ್ರೀಕೃಷ್ಣ. ಕೃಷ್ಣನ ಮತ್ತೊಂದು ಹೆಸರೇ ರಾಜಕಾರಣ ಎನ್ನುವಷ್ಟು ಅವನ ರಾಜಕೀಯ ತೀರ್ಮಾನಗಳು ಜನಜನಿತ. ಅವನ ಲೀಲಾ ವಿನೋದಗಳಲ್ಲಿ ರಾಜಕಾರಣವೂ ಸೇರಿತ್ತು ಎನ್ನುವುದು ಅತಿಶಯೋಕ್ತಿಯಲ್ಲ. ಜಗದೋದ್ಧಾರನ ಚದುರಂಗದಾಟ ಹೇಗಿತ್ತು ಎಂಬುದನ್ನು ವಿವರಿಸುವ ಯತ್ನ ಸತ್ಯಕಾಮ ಅವರದ್ದು.
ಇನ್ನೊಂದು ಕಾರಣಕ್ಕೆ ’ರಾಜಕ್ರೀಡೆ’ಯನ್ನು ವಿವರಿಸಲೇಬೇಕು. ಜಗದೋದ್ಧಾರನನ್ನು ಯಶೋಧರೆ ಆಡಿಸಿದಂತೆ ಸತ್ಯಕಾಮರ ಕೈಯಲ್ಲಿ ಕೃಷ್ಣ ನಲಿದಿದ್ದಾನೆ.
’ಸತ್ಯಕಾಮ’ ಎಂಬುದು ಅನಂತ ಕೃಷ್ಣಾಚಾರ್ಯ ಶಹಾಪುರ ಅವರ ಕಾವ್ಯನಾಮ. ತಮ್ಮ ಕಾದಂಬರಿ ಹಾಗೂ ತಂತ್ರವಿದ್ಯೆ, ಕೃಷಿಯ ಮೂಲಕ ನಾಡಿನ ಮನೆ ಮಾತಾದವರು ’ಸತ್ಯಕಾಮ’. ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಗಲಗಲಿಯಲ್ಲಿ 1920ರ ಮಾರ್ಚ್ 2ರಂದು ಜನಿಸಿದರು. (ಕೆಲವು ಕಡೆ ಏಪ್ರಿಲ್ 16 ಎಂದು ದಾಖಲಾಗಿದೆ.) ಆರಂಭಿಕ ಶಿಕ್ಷಣವನ್ನು ಗಲಗಲಿಯಲ್ಲಿ ಪಡೆದ ಅವರು ಮುಲ್ಕಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಶಾಲೆಯ ಗೊಡವೆಗೇ ಹೋಗದೆ ಒಂದು ವರ್ಷ ಗಲಗಲಿಯಲ್ಲಿಯೇ ಕಳೆದರು. 1935ರಲ್ಲಿ ಬಾಗಲಕೋಟೆಯ ಸಕ್ರಿ ಹೈಸ್ಕೂಲಿಗೆ ಸೇರಿದರಾದರೂ ಓದು ಮುಂದುವರಿಸಲಿಲ್ಲ. ಭಾರತದಲ್ಲಿ ಉಪ್ಪಿನ ಸತ್ಯಾಗ್ರಹ ನಡೆಯುತ್ತಿದ್ದ 1930-31ರಲ್ಲಿ ಬಾಲಕ ಅನಂತ ...
READ MORE