ಲೇಖಕ ಮೋಹನ್ ವೆರ್ಣೇಕರ್ ಅವರ 57ನೇ ಕೃತಿ ʻಜೋಡಿ ಕಿರು ಕಾದಂಬರಿಗಳುʼ. ಪ್ರಸ್ತುತ ಪುಸ್ತಕ ಕಾದಂಬರಿ ಸಂಕಲನವಾಗಿದ್ದು, ಮೋಹನ್ ವೆರ್ಣೇಕರ್ ಅವರ ʻಕಪ್ಪು ಬಾನಲ್ಲಿ ಚಂದಿರʼ ಹಾಗೂ ʻಸ್ವರ್ಣಮಂದಾರʼ ಎಂಬ ಎರಡು ಕಿರು ಕಾದಂಬರಿಗಳಿವೆ. ಅವು ಕನ್ನಡ ಮಾಸಪತ್ರಿಕೆಯೊಂದರಲ್ಲಿ ಧಾರವಾಹಿಯಾಗಿ ಪ್ರಕಟವಾಗಿತ್ತು.
ಮೋಹನ್ ವರ್ಣೇಕರ್ ಅವರದ್ದು ಕಲೆ ಹಾಗೂ ಸಾಹಿತ್ಯ ಎರಡೂ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದವರು. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಹೊಸಪಟ್ಟಣದಲ್ಲಿ 1950 ಜೂನ್ 22ರಂದು ಜನಿಸಿದರು. ತಂದೆ ವಾಸುದೇವ ಶೇಟ್, ತಾಯಿ ತುಳಸಿಬಾಯಿ. ಬಿ.ಎ. ಪದವಿಯೊಂದಿಗೆ ಟೈಪಿಂಗ್ ಮತ್ತು ಶೀಘ್ರಲಿಪಿಯಲ್ಲಿ ರ್‍ಯಾಂಕ್ ಪಡೆದಿದ್ದಾರೆ. ಕರ್ನಾಟಕ ವಿಧಾನ ಸಭೆಯ ಸಚಿವಾಲಯದಲ್ಲಿ ಅಭಿಲೇಖನಾಧಿಕಾರಿಯಾಗಿ (RECORDING OFFICER) ಸೇವೆಗೈದು ಸ್ವಯಂ ನಿವೃತ್ತಿ. ಪ್ರಸ್ತುತ ಮೈಸೂರಿನಲ್ಲಿ ನೆಲೆ. ಪ್ರಶಸ್ತಿ, ಪ್ರಾಪ್ತಿ, ಪ್ರೇಮಿಸಿದವರು, ಅವಳು ಕ್ಷಮಾತೀತಳು, ನರಸಿಂಹ ದೇವರಿಗಿಟ್ಟ ಚಿನ್ನದ ಕಿರೀಟ ಅವರ ಪ್ರಮುಖ ಕತಾ ಸಂಕಲನಗಳು. ಅವರ ಮೊದಲ ಕಾದಂಬರಿ ‘ದಿಕ್ಕು’. ಪ್ರೀತಿ-ಪ್ರೇಮಗಳ ನಡುವೆ, ಸ್ವರ್ಣ ಮಂದಾರ, ಕಪ್ಪುಬಾನಲ್ಲಿ ಚಂದಿರ ಅವರ ಮತ್ತಿತರ ಕಾದಂಬರಿಗಳು. ...
READ MORE