‘ಋಣ’ ಕಾದಂಬರಿ ಈಗಾಗಲೇ ತಮಿಳು, ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ಬೇರೆ ಬೇರೆ ಹೆಸರಿನಲ್ಲಿ ಪ್ರಕಟಗೊಂಡು ಜನಪ್ರಿಯತೆ ಗಳಿಸಿದೆ. ಸದ್ಯದ ಆಧುನಿಕ ಪರಿಸ್ಥಿತಿಯಲ್ಲಿ ‘ಋಣ’ ಎನ್ನುವುದು ಮರೆಯಾಗುತ್ತಿರುವ ಶಬ್ದವಾಗಿದೆ.
ಸಹೃದಯರಲ್ಲಿ ಋಣ ಅತ್ಯಂತ ಅವಶ್ಯವಾದ ಜೀವನಾಡಿ ಎಂಬುದರ ಕಥಾಹಂದರ ಇದಾಗಿದೆ. ಮಹಾನ್ ವ್ಯಕ್ತಿಯಾದ ಸಿದ್ಧಾರ್ಥ ಗೌತಮ ಬೋಧಿವೃಕ್ಷದ ಕೆಳಗೆ ಕುಳಿತು ಬುದ್ಧನಾದ ಮೇಲೆ ಮೊದಲು ತನಗೆ ಜ್ಞಾನವನ್ನು ಕರುಣಿಸಿದ ವೃಕ್ಷಕ್ಕೆ ಕೃತಜ್ಞತೆ ಅರ್ಪಿಸಿ ‘ಋಣ’ ಸಂದಾಯವನ್ನು ಮಾಡಿದನಂತೆ. ಋಣದ ಭಾವವಿಲ್ಲದ ಜೀವನ ಕೇವಲ ಕಾಗದದ ಹೂವಿನಂತೆ ಎನ್ನುವ ಹಾದಿಯಲ್ಲಿ ಸಾಗುವ ಕಾದಂಬರಿ ಆಧ್ಯಾತ್ಮದ ಎಳೆಯನ್ನು ಸೇರಿಸಿಕೊಂಡಿದೆ. ಈ ಕೃತಿಯು ನಾಲ್ಕು ಮುದ್ರಣ ಕಂಡಿದೆ.
ಕನ್ನಡ ಹಾಗೂ ಇಂಗ್ಲಿಷ್ ಬರಹಗಾರ್ತಿ, ಇನ್ಫೊಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಅವರು ಜನಿಸಿದ್ದು 1950 ಆಗಸ್ಟ್ 18ರಂದು ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ. ತಾಯಿ ವಿಮಲಾ, ತಂದೆ ರಾಮಚಂದ್ರ ಕುಲಕರ್ಣಿ. ವೃತ್ತಿಯಲ್ಲಿ ಕಂಪ್ಯೂಟರ್ ಇಂಜಿನಿಯರ್ ಆಗಿದ್ದ ಇವರು ಕನ್ನಡ ಹಾಗೂ ಇಂಗ್ಲಿಷ್ ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಕೊಂಡಿದ್ದಾರೆ. ಅತಿರಿಕ್ತೆ, ಅವ್ಯಕ್ತೆ, ಮಹಾಶ್ವೇತೆ, ಡಾಲರ್ ಸೊಸೆ, ಋಣ, ತುಮುಲ, ಯಶಸ್ವಿ (ಕಾದಂಬರಿ), ಸಾಮಾನ್ಯರಲ್ಲಿ ಅಸಮಾನ್ಯರು (ಅಂಕಣ ಬರಹಗಳು), ಗುಟ್ಟೊಂದು ಹೇಳುವೆ, ಮನದ ಮಾತು (ಅನುಭವ ಕಥನ), ಹಕ್ಕಿಯ ತೆರದಲಿ ಮುಂತಾದ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಸುಧಾ ಮೂರ್ತಿ ಅವರಿಗೆ ರೋಟರಿ ...
READ MORE