ಬೀಸು ಬಿರುಗಾಳಿ ಸರಸ್ವತಿ ಬೋಸಲೆ ಅವರ ಕಾದಂಬರಿಯಾಗಿದೆ. ಅಮಾಯಕ ಹೆಣ್ಣೂಬ್ಬಳ ಹೋರಾಟದ ಕತೆ 'ಬೀಸು ಬಿರುಗಾಳಿ' ಕವಿ, ಕಥೆಗಾರ್ತಿ, ಪ್ರವಾಸ ಕಥನವನ್ನೂ ಬರೆದ ಸರಸ್ವತಿ ಭೋಸಲೆಯವರ ಮೊದಲ ಕಾದಂಬರಿಯಿದು. ನಮ್ಮ ಭಾರತೀಯ ಸಮಾಜದಲ್ಲಿ ಹೆಣ್ಣುಮಕ್ಕಳಿಗೆ ಮದುವೆಯ ಅನಿವಾರ್ಯತೆಯ ಬಗ್ಗೆ ಹೇಳುತ್ತಲೇ ಈ ಕೃತಿಯು ಕೌಟುಂಬಿಕವಾಗಿ ಒಬ್ಬ ಹೆಣ್ಣುಮಗಳಿಗೆ ಎದುರಾಗುವ ಹಲವಾರು ಸಮಸ್ಯೆಗಳ ಕುರಿತು ಚರ್ಚಿಸುತ್ತದೆ. ಕಥಾನಾಯಕಿ ಲೀಲಾ ಯುವತಿಯಾಗಿದ್ದ ಸಮಯದಲ್ಲಿ ಮನೆಯ ದೇವರ ಪೂಜೆಯಿಂದ ಆರಂಭವಾಗುವ ಈ ಕಥೆಯು, ಮೊದಲು ಕಥಾನಾಯಕಿಯ ತಂದೆ-ತಾಯಿಗಳಾದ ದಮಯಂತಿ ಮತ್ತು ರಾಮೂ ಮಾಸ್ತರ ಮದುವೆ ಸಂಗತಿಯಿಂದ ಮುಂದುವರೆಯುತ್ತದೆ, ತಮ್ಮ ಕಿರಿಯ ಮಗಳು ಲೀಲಾ ಭಕ್ತಿಭಾವದಿಂದ ಹಾಡುವುದನ್ನು ಕಂಡು ತಂದೆ ರಾಮ ಮಾಸ್ತರರು ಖುಷಿಪಡುತ್ತಾರೆ, ಆದರೆ ಅಲ್ಲಿಯೇ ಇದ್ದ ಅವಳ ತಾಯಿ ಮಗಳ ಒಳ್ಳೆಯ ಹವ್ಯಾಸವನ್ನು ಕಡೆಗಣಿಸುತ್ತಾಳೆ, ತಂದೆತಾಯಿಗಳು ಮಗಳನ್ನು ಮದುವೆ ಮಾಡಿಕೊಡುವ ಬಗ್ಗೆಯೇ ಯೋಚಿಸುತ್ತಾರೆಯೇ ಹೊರತು, ಅವಳಿಗೆ ಅವಳದೇ ಆದ ವ್ಯಕ್ತಿತ್ವವಿದೆ ಎಂಬುದನ್ನು ಮನೆ ಹಿರಿಯರು ಪರಿಗಣಿಸುವುದಿಲ್ಲವಾದರೂ, ಕಾದಂಬರಿಯ ಕೊನೆಯಲ್ಲಿ ಲೀಲಾ ತನ್ನದೇ ಆದ ಅಸ್ತಿತ್ವವನ್ನು ಗಟ್ಟಿಗೊಳಿಸಿಕೊಳ್ಳುತ್ತ ಮಾದರೀ ವ್ಯಕ್ತಿತ್ವವಾಗಿ ಬೆಳೆಯುವುದು ಲೇಖಕಿಗಿರುವ ಸ್ತ್ರೀ ಸಬಲೀಕರಣದ ಕಾಳಜಿಯು ಖುಷಿಗೆ ಕೊಡುತ್ತದೆ.
ಸರಸ್ವತಿ ಭೋಸಲೆಯವರು ಮೂಲತ: ಗದಗ ಜಿಲ್ಲೆಯ ಶಿರಹಟ್ಟಿಯವರು. ರಾಜ್ಯ ಸರ್ಕಾರದ ರೇಷ್ಮೆ ಇಲಾಖೆಯಲ್ಲಿ 25 ವರ್ಷ ಸೇವೆ ಸಲ್ಲಿಸಿ, 2007 ರಲ್ಲಿ ಸ್ವಯಂ ನಿವೃತ್ತಿ ಪಡೆದಿದ್ದಾರೆ. ಉತ್ತರ ಕರ್ನಾಟಕ ಲೇಖಕಿಯರ ಸಂಘದ ಕಾರ್ಯಕಾರೀ ಸಮಿತಿಯ ಸದಸ್ಯರಾಗಿ 4 ವರುಷಗಳವರೆಗೆ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಸಂಘದ ಪ್ರಧಾನ ಕಾರ್ಯದರ್ಶಿಯಾಗಿ 2 ವರ್ಷಗಳವರೆಗೆ ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಣೆ ಮಾಡಿದ್ದಾರೆ. ಲೇಖಿಕಾ ಸಾಹಿತ್ಯ ವೇದಿಕೆಯ ಸದಸ್ಯರಾಗಿ,ಈ ವೇದಿಕೆಯಿಂದ ಹಿರಿಯ ಮಹಿಳಾ ಚೇತನಗಳ ಬದುಕು ಬರಹ ಮಾಲಿಕೆಯಲ್ಲಿ ಎರಡು ಸಲ ಪ್ರಬಂಧ ಮಂಡನೆಯನ್ನು ಮಾಡಿರುವರು. ಸ್ವರಚಿತ ಕಥಾವಾಚನ ಕಾವ್ಯವಾಚನ ಹೀಗೆ ಅನೇಕ ಸಾಹಿತ್ಯ ಚಟುವಟಿಕೆಗಳಲ್ಲಿ ಈ ವೇದಿಕೆಯಿಂದ ...
READ MORE