‘ಬೆಟ್ಟದ ಜೀವ’ ಶಿವರಾಮ ಕಾರಂತರಿಗೆ ಹೆಚ್ಚು ಪ್ರಸಿದ್ಧಿ ತಂದುಕೊಟ್ಟ ಕಾದಂಬರಿ. ಅನ್ನಕ್ಕಾಗಿ ಮನುಷ್ಯನ ಹೋರಾಟ ನಡೆಸುವ ಪರಿಗಳನ್ನು ಒಳಗೊಂಡ ಕಥಾ ವಸ್ತು ಇಲ್ಲಿದೆ. ಕಾಡಿನ ಮೂಲೆಯಲ್ಲೊಂದು ತುಣುಕು ಜಮೀನು ಪಡೆದು ಬೇಸಾಯ ಅಂದರೆ ಅಡಿಕೆ ತೋಟ ಮಾಡಿಕೊಂಡಿದ್ದ ಗೋಪಾಲಯ್ಯ ಪತ್ನಿ ಶಂಕರಿಯೊಂದಿಗಿದ್ದ. ಅಡಿಕೆ ತೋಟಕ್ಕೆ ನುಗ್ಗಿದ ಆನೆಗಳ ಹಿಂಡು ಹಾನಿವುಂಟು ಮಾಡುತ್ತಿದ್ದವು. ಹುಲಿಯನ್ನು ಕೊಲ್ಲಿಸದಿದ್ದರೆ ದನಗಳು ಇರಲಾರವು ಎಂಬ ಭೀತಿಯೂ ಕಾಡುತ್ತಿತ್ತು. ಕಾಡಿನಲ್ಲಿ ಕಾಡುವ ಜ್ವರ ಮಲೇರಿಯಾ. ಮಗಳು ವಾಗ್ದೇವಿಯು ಮೊದಲ ಬಾಣಂತನದಲ್ಲೇ ತೀರಿಹೋಗುತ್ತಾಳೆ. ಗೋಪಾಲಯ್ಯನಿಗೆ ಇದ್ದ ಒಬ್ಬ ಮಗನೂ ತಂದೆ-ತಾಯಿಯನ್ನು ಧಿಕ್ಕರಿಸಿ ದೂರದ ಊರಲ್ಲಿ ನೆಲೆಸಿರುತ್ತಾನೆ. ನಿಸರ್ಗ ಮಾಡಿದ ಹಾನಿಗಿಂತ ಈ ನೋವು ಅವರನ್ನು ಕಾಡುತ್ತಿತ್ತು. ಗುತ್ತಿಗೆದಾರ ಶಿವರಾಮಯ್ಯನವರ ಪರಿಚಯವಾಗುತ್ತದೆ. ಪುಣೆಯಲ್ಲಿರುವ ಶರ್ಮಾ ದಂಪತಿ ಕುರಿತು ಗೋಪಾಲಯ್ಯನವರಿಗೆ ತಿಳಿಸುತ್ತಾನೆ. ಆತನೇ ಗೋಪಾಲಯ್ಯನವರ ಮಗ ಆಗಿರುತ್ತಾನೆ. ಅಂತರ್ಜಾತಿಯ ಹುಡುಗಿಯನ್ನು ಮದುವೆಯಾಗಿದ್ದರೂ ತನ್ನ ಮಗ ‘ಹೀಗಾದರೂ ಬದುಕಿದ್ದಾನಲ್ಲ’ ಎಂದು ಗೋಪಾಲಯ್ಯ ಖುಷಿ ಪಡುತ್ತಾರೆ. ಮಗನನ್ನು ಕಾಣಲು ಶಿವರಾಮಯ್ಯನೊಂದಿಗೆ ಪುಣೆಗೆ ತೆರಳಲು ತಯಾರಾಗುತ್ತಾನೆ. ಇಲ್ಲಿಗೆ ಕಾದಂಬರಿ ಮುಕ್ತಾಯಗೊಳ್ಳುತ್ತದೆ. ತನ್ನ ನಿರೂಪಣಾ ಸೌಂದರ್ಯದೊಂದಿಗೆ ಈ ಕಾದಂಬರಿಯು ಓದುಗರ ಮನ ಸೆಳೆಯುತ್ತದೆ.
ಧಾರವಾಡದ ಮನೋಹರ ಗ್ರಂಥಮಾಲೆಯು 1943ರಲ್ಲಿ (ಪುಟ: 207) ಮೊದಲ ಬಾರಿಗೆ ಈ ಕಾದಂಬರಿ ಪ್ರಕಟಗೊಳಿಸಿತ್ತು.
ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ- ಅಭೂತಪೂರ್ವ. 1902ರ ಅಕ್ಟೋಬರ್ 10ರಂದು ಜನಿಸಿದರು. ತಂದೆ ಶೇಷ ಕಾರಂತ ತಾಯಿ ಲಕ್ಷ್ಮಮ್ಮ. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದ್ದರು. ಚಲನಚಿತ್ರ , ಯಕ್ಷಗಾನ ಪ್ರಯೋಗಗಳನ್ನು ನಡೆಸಿದ್ದರು, ಹೀಗೆ ...
READ MOREಬೆಟ್ಟದ ಜೀವ Bettadha Jeeva Kannada Award Winning Movie P Shesadri