‘ಗಳಗನಾಥರು ಮತ್ತು ಅವರ ಕಾದಂಬರಿಗಳು’ ಕೃಷ್ಣಮೂರ್ತಿ ಕಿತ್ತೂರ ಅವರ ಗಳಗನಾಥರ ಕಾದಂಬರಿಯ ಕುರಿತ ಕೃತಿಯಾಗಿದೆ. ಇಲ್ಲಿ 24 ಕಾದಂಬರಿಗಳು, 9 ಪೌರಾಣಿಕ ಕಥೆಗಳು, 3 ಚರಿತ್ರೆಗಳು ಹಾಗು 8 ಪ್ರಬಂಧಗಳನ್ನು ರಚಿಸಿದ ಗಳಗನಾಥರ ಕಾದಂಬರಿಗಳ ವಿಶೇಷತೆಯನ್ನು ಕಾಣಬಹುದು. ‘ಕಮಲಕುಮಾರಿ, ಮೃಣಾಲಿನಿ, ವೈಭವ, ಕನ್ನಡಿಗರ ಕರ್ಮಕಥೆ’ ಮುಂತಾದ ಕಾದಂಬರಿಗಳ ವಿಚಾರಗಳು ಇಲ್ಲಿವೆ.
ಲೇಖಕ ಕೃಷ್ಣಮೂರ್ತಿ ಕಿತ್ತೂರ ಅವರು ಕರ್ನಾಟಕ ವಿಶ್ವವಿದ್ಯಾಲಯ ಕಲಬುರ್ಗಿಯ ಸ್ನಾತಕೋತ್ತರ ಕೇಂದ್ರದಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಬಿ.ಎ, ಎಂ.ಎ ಪರೀಕ್ಷೆಗಳನ್ನು ಉಚ್ಚ ಶ್ರೇಣಿಗಳಲ್ಲಿ ವಿಶ್ವವಿದ್ಯಾಲಯಕ್ಕೆ ಪ್ರಥಮಸ್ಥಾನ ಪಡೆದು ಪಾಸಾಗಿದ್ದ ಕಿತ್ತೂರ ಅವರಿಗೆ ವಿದ್ಯಾರ್ಥಿದೆಸೆಯಿಂದಲೇ ಸಾಹಿತ್ಯದಲ್ಲಿ ಆಸಕ್ತಿ ಹೆಚ್ಚಿತ್ತು. ವಿದ್ಯಾರ್ಥಿದೆಸೆಯಲ್ಲಿಯೇ ಹಲವಾರು ಸಣ್ಣಕತೆ, ವಿಮರ್ಶೆ, ವ್ಯಕ್ತಿಚಿತ್ರ ಮೊದಲಾದವುಗಳನ್ನು ರಚಿಸಿದ್ದ ಅವರು ಕನ್ನಡ ಓದುಗರಿಗೆ ಚಿರಪರಿಚಿತರು. ಗಳಗನಾಥರ ಕಾದಂಬರಿಗಳನ್ನು ಕುರಿತು ಮಹಾಪ್ರಬಂಧ ರಚಿಸಿರುವ ಕೃಷ್ಣಮೂರ್ತಿ ಕಿತ್ತೂರ ಅವರು ಕನ್ನಡದ ಸೃಜನಾತ್ಮಕ ಮತ್ತು ವಿಮರ್ಶಾಕ್ಷೇತ್ರದಲ್ಲಿ ಮಹತ್ತರ ಕೃಷಿಮಾಡಿದ್ದಾರೆ. ...
READ MORE