‘ಪರ್ಣಕುಟೀರ’ ಸಾಯಿಸುತೆ ಅವರ ಕಾದಂಬರಿಯಾಗಿದೆ. ಇದಕ್ಕೆ ಲೇಖಕರ ಮುನ್ನುಡಿ ಬರಹವಿದೆ; ಪುಸ್ತಕಗಳು ನಮ್ಮ ಜ್ಞಾನ ಭಂಡಾರದ ಕೀಲಿ ಕೈ. ನಾಗರಿಕತೆಯ ಪಾಠ ಹೇಳುವ ಗುರುವು. ಸೋತಾಗ ಧೈರ್ಯ ತುಂಬುವ ಸ್ನೇಹಿತ. ನಿರಂತರವಾಗಿ ನಮ್ಮ ಜೊತೆಯಲ್ಲಿ ಇರುವ ಆತ್ಮೀಯ ಮಿತ್ರ. ವಿಸ್ಮಯ, ವೈಶಿಷ್ಟ್ಯ, ವೈವಿಧ್ಯ, ತುಂಬಿಕೊಂಡ ಪಾತ್ರಗಳ ಅನಾವರಣವೇ 'ಪರ್ಣಕುಟೀರ'. ಇಲ್ಲಿ ತೊಂಬತ್ತೆರಡರ ಹರೆಯದ ಶೇಷಾದ್ರಿಯವರಿದ್ದಾರೆ. ಒಂದು ರೀತಿಯಲ್ಲಿ ಅವರದು ತಮ್ಮ ಪಾತ್ರಕ್ಕೆ ಅನುಗುಣವಾದ ಅಭಿನಯ ನೋಡಿದ, ಕೇಳಿದ, ಪಾತ್ರಗಳ ಜೊತೆಯಲ್ಲಿ ಜೀವಸೆಲೆಯಾದ ಸುಹಾಸಿನಿ ಇಲ್ಲಿ ಇದ್ದಾಳೆ. ಮಾತೃತ್ವಕ್ಕೆ ತನ್ನೆಲ್ಲ ಬದುಕಿನ ಬೆಲೆ ಕೊಡುವ ಮನೀಲಾ ಕೂಡ ಇದ್ದಾಳೆ ಎಂಬುವುದನ್ನು ಈ ಪುಸ್ತಕದಲ್ಲಿ ನೋಡಬಹುದು.
ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ. ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು, ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ನಂತರದಲ್ಲಿ ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ಬೆಳೆಸಿಕೊಂಡ ...
READ MORE