ಅಮ್ಮಾ ನನ್ನನ್ನು ಯಾಕೇ ಕೊಂದೆ?

Author : ರವಿ ಬೆಳಗೆರೆ

Pages 120

₹ 135.00




Year of Publication: 2021
Published by: ಭಾವನಾ ಪ್ರಕಾಶನ
Address: ನಂ. 2, 80 ಫೀಟ್ ರಸ್ತೆ, ಕದಿರೇನಹಳ್ಳಿ ಪೆಟ್ರೋಲ್ ಪಂಪ್ ಹತ್ತಿರ, ಬನಶಂಕರಿ 2ನೇ ಹಂತ ಬೆಂಗಳೂರು-560070.
Phone: 080 2679 0804.

Synopsys

ಲೇಖಕ ಹಾಗೂ ಪತ್ರಕರ್ತ ರವಿ ಬೆಳಗೆರೆ ಅವರ ಕೃತಿ-ಅಮ್ಮಾ ನನ್ನನ್ನು ಯಾಕೇ ಕೊಂದೆ?. ವಿಲಕ್ಷಣ ಮರ್ಡರ್ ಮಿಸ್ಟರಿ ಎಂಬ ಉಪಶೀರ್ಷಿಕೆ ಹೊಂದಿರುವ ಈ ಕೃತಿಯು ಹೆತ್ತವರಿಂದಲೇ ಕೊಲೆಯಾದ ರೌಡಿ ಶೀನಾ ಬೋರಾ ಕುರಿತದ್ದಾಗಿದೆ. ರೌಡಿಯು ಸಮಾಜಕ್ಕೆ ಕಂಟಕವಾಗಿದ್ದು ಮಾತ್ರವಲ್ಲ; ತನ್ನದೇ ಕುಟುಂಬದ ಸದಸ್ಯರಿಗೆ ಕಂಟಕವಾಗಿದ್ದನೆ? ಹೆತ್ತವರೇ ಆತನನ್ನು ಕೊಲೆ ಮಾಡುವ ಅನಿವಾರ್ಯತೆ ಏಕಿತ್ತು? ಇಂತಹ ಸಂಗತಿಗಳನ್ನು ದಟ್ಟವಾಗಿ ಕಟ್ಟಿಕೊಡುವ ನೈಜ ಘಟನೆಯನ್ನು ಆಧರಿಸಿದ್ದು, ಕಾದಂಬರಿ ಸ್ವರೂಪ ಪಡೆದಿದೆ.

About the Author

ರವಿ ಬೆಳಗೆರೆ
(15 March 1958 - 13 November 2020)

ಕನ್ನಡದ ಪ್ರಮುಖ ಪತ್ರಕರ್ತರಲ್ಲಿ ಒಬ್ಬರಾದ ರವಿ ಬೆಳಗೆರೆ ಅವರು 15 ಮಾರ್ಚ್ 1958 ಬಳ್ಳಾರಿಯಲ್ಲಿ ಜನಿಸಿದರು. ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದಲ್ಲಿ ಎಂ.ಎ., ಮಾಡಿದ್ದ ಇವರು ಮೊದಲು ಪ್ರಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿದರು. ನಂತರ ಸಂಯುಕ್ತ ಕರ್ನಾಟಕ, ಕರ್ಮವೀರ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸಿದರು. ಲಂಕೇಶ್ ಪತ್ರಿಕೆಯಲ್ಲಿ ನಿಯಮಿತವಾಗಿ ಬರೆಯುತ್ತಿದ್ದ ಅವರು ಆಮೇಲೆ ತಾವೇ ಸ್ವತಃ ಹಾಯ್ ಬೆಂಗಳೂರು ಪತ್ರಿಕೆಯನ್ನು ಆರಂಭಿಸಿದರು. ಹಾಯ್ ಬೆಂಗಳೂರ್ ವಾರಪತ್ರಿಕೆಯು ಓದುಗರ ಮನಗೆದ್ದು ಕನ್ನಡ ಪತ್ರಿಕೋದ್ಯಮದಲ್ಲಿ ಹೊಸ ಸಂಚಲನ ಮೂಡಿಸಿತು. ಹಾಯ್ ಬೆಂಗಳೂರು ಪತ್ರಿಕೆಯ ಜೊತೆಗೆ ಓ ಮನಸೇ ಪಾಕ್ಷಿಕ ಪ್ರಾರಂಭಿಸಿದರು. ಶಿವರಾಮ ಕಾರಂತ ...

READ MORE

Related Books