ಸ್ಫೋಟ ಕೃತಿಯು ಉಷಾ ನವರತ್ನರಾಂ ಅವರ ಕಾದಂಬರಿಯಾಗಿದೆ. ಈ ಕೃತಿಯ ಸಣ್ಣ ತುಣುಕು: "ನಮ್ರತಳ ಮುಖದಲ್ಲಿ ಬದಲಾವಣೆ ಕಂಡಿತು ಕಣ್ಣುಗಳು ಅರಳಿದವು. ಭಯ ಅವರಿಸಿತು ತುಟಗಳು ನಡುಗುತ್ತಿದ್ದವು. ಕೈಕಾಲು ಮುದುರಿ, ಮೈಮೇಲೆ ಬಟ್ಟೆಯೇ ಇಲ್ಲದೇ ಮಾನ ಕಾಪಾಡಿಕೊಳ್ಳುವಂತೆ ಮೈ ಹಿಡಿಯಾಗಿ ಮಾಡಿಕೊಂಡು ಮಂಡಿಯಲ್ಲಿ ಮುಖ ಹುದುಗಿಸಿ ಕುಳಿತಿದ್ದಳು. "ಬ್ಯಾಡೋ ಬೇಡೋ ನನ್ನ ಬಿಟ್ಬಿಡಿ ಕಾಶೀ, ಉಪೂ ಪಾರೂ. ಯಾರಾದ್ರೂ ಬನ್ನಿ - ಅಮ್ಮ- ನಾನೇನೂ ಮಾಡ್ತಿಲ್ಲ ಅವೋ. ಆ ರಾಜೇಂದ್ರ ಕುಮಾರ, ಅವೋ ಆ ಅಜಯ್, ಅವಿನಾಶ್, ವಿಶ್ವನಾಥ್ - ಎಲ್ರೂ ಸೇರ್ಕೊಂಡೂ.... ಕಾಶೀ ಒಳಗಿದ್ದಾನೇಂತಾ ಕರೆದ್ರು ಹೋದ್ರೆ ಬಾಗ್ಲೆಲ್ಲಾ ಹಾಕಿ, ನನ್ನ ಬಿಗಿಯಾಗಿ ಹಿಡ್ಕೊಂಡು - ಭರಮಪ್ಪ ರೂಮಿನ ಗಾಜಿನ ಕಿಟಕಿ ಬಾಗ್ಲು ಹಾಸ್ಪಿಟ್ಟ. ನಾನೂ ಕೂಗಿದ್ರೂ ಹೊರಗೆ ಕೇಳಿಸ್ತಾ ಇಲ್ಲಿಲ್ಲ. ನನ್ನ ಬಟ್ಟೆ ಬಿಚ್ಚಾಕಿದ್ರು. ಇದ್ದ ಕುಡಿ ಅಂತಾ ಏನೋ ಕೆಟ್ಟ ಪಾನಕ ಜ್ಯೂಸ್ ಕುಡ್ಲಿದ್ರೂ. ಎಲ್ಲೂ ಹಿಡ್ಕೊಂಡ್ರು. ನನ್ನ ಕೆಳಗೆ ಉರಳಿಸಿದ್ರು. ಮೊದ್ಲು ರಾಜೇಂದ್ರ ಆಮೇಲೆ ಕುಮಾರ್, ಅಮೇಲೆ ಅವಿನಾಶ್.ನಂಗೆ ತಡೋಕ್ಕಾಗ್ತಾ ಇಲ್ಲ, ನೋವೂ. ಹಿಂಸೆ “ನಾನು ಸತ್ತೋಗ್ತಿನಿ, ಬನ್ನೂ ಯಾರಾದ್ರೂ ಕಾಪಾಡ್ರೊ. ಹಾಗೆ ಕಿರಿಚುತ್ತಿರುವಂತೆಯೇ ಅವಳ ಗಂಟಲು ಹತ್ತಿ ಕೆಮ್ಮಲಾಂಭಿಸಿದಳು. ಕೈಕಾಲುಗಳು ಸೆಟೆದುಕೊಂಡವು. ಎಳೆತ ಪ್ರಾರಂಭ ವಾಯಿತು. ಸುಭದ್ರ, ಶಿವು ದಡಕ್ಕನ್ನೆದ್ದರು. ನಮ್ರತಾ ಉಸಿರಾಡಲೂ ಕಷ್ಟಪಡು ತ್ತಿದ್ದಳು. ಡಾ. ಧನಂಜಯ, ಆಚಾರ್ಯ, ಆದಿತ್ಯ ಮತ್ತಿತರ ಡ್ಯೂಟಿ ಡಾಕ್ಟರ್‌ಗಳು ಬಾಗಿಲು ತಳ್ಳಿಕೊಂಡು ಒಳಗೋಡಿದರು."
ಲೇಖಕಿ ಉಷಾ ನವರತ್ನರಾಂ ಅವರು ಹುಟ್ಟಿದ್ದು ಬೆಂಗಳೂರಿನಲ್ಲಿ. ತಂದೆ- ಎಂ.ವಿ. ಸುಬ್ಬರಾವ್. ತಾಯಿ- ಶಾಂತಾ. ಪ್ರಾರಂಭಿಕ ಶಿಕ್ಷಣವನ್ನು ಶಿವಮೊಗ್ಗದ ಮೇರಿ ಇಮ್ಯಾಕುಲೇಟ್ ಕಾನ್ವೆಂಟ್ ಹಾಗೂ ಬೆಂಗಳೂರಿನ ಮಹಿಳಾ ಸೇವಾ ಸಮಾಜದಲ್ಲಿ ಪೂರ್ಣಗೊಳಿಸಿದರು. ಆನಂತರ ಮೌಂಟ್ ಕಾರ್ಮಲ್ ಕಾಲೇಜಿನಿಂದ ಇಂಗ್ಲಿಷ್ ಸಾಹಿತ್ಯ ಹಾಗೂ ಇತಿಹಾಸದಲ್ಲಿ ಪದವಿ ಪಡೆದರು. ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಪೂರೈಸಿದರು. ವಿದ್ಯಾರ್ಥಿನಿಯಾಗಿದ್ದಾಗಲೇ ಹಲವು ಲೇಖನಗಳನ್ನು ಪ್ರಕಟಿಸಿದರು. ಇಂಗ್ಲಿಷ್ ಮತ್ತು ಕನ್ನಡ ಪತ್ರಿಕೆಗಳ ಅಂಕಣಗಾರ್ತಿಯಾಗಿದ್ದು, ಗೆಳತಿ ಮತ್ತು ಉಷಾ ಪತ್ರಿಕೆಗಳ ಸಂಪಾದಕಿಯಾಗಿದ್ದರು. ಮಹಿಳಾ ಸೇವಾ ಸಮಾಜದಲ್ಲಿ ಅಧ್ಯಾಪಕಿಯಾಗಿ 27 ವರ್ಷ ಸೇವೆ ಸಲ್ಲಿಸಿ, ಸ್ವಯಂ ನಿವೃತ್ತಿ ಪಡೆದರು. ನಾಲ್ಕು ವರ್ಷ ರೀಜನಲ್ ಫಿಲಂ ಸೆನ್ಸಾರ್ ...
READ MORE