‘ವೀರತಪಸ್ವಿ ಪರಶುರಾಮ’ ಡಿ.ಎಸ್ ಶ್ರೀಧರ್ ಅವರ ಕಾದಂಬರಿಯಾಗಿದೆ. ವಿಷ್ಣುವಿನ ಅವತಾರಿಯಾದ ಪರಶುರಾಮನ ಬದುಕಿನ ಅದ್ಭುತ ಕಥಾನಕವನ್ನು ಒಳಗೊಂಡ ಕಾದಂಬರಿ.
.ಡಿ.ಎಸ್. ಶ್ರೀಧರ ಅವರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು ನಿಟ್ಟೂರು ಸಮೀಪದ ಧರೆಮನೆ ಗ್ರಾಮದವರು. ತಂದೆ ಶ್ರೀಪಾದಯ್ಯ (ಯಕ್ಷಗಾನ ಕಲಾವಿದರು) ತಾಯಿ ಸರಸ್ವತಿ. ತಂದೆ ಶ್ರೀಪಾದಯ್ಯ ಕೃಷಿಕರಾಗಿಯೂ ಯಕ್ಷಗಾನ ಕಲಾವಿದರೂ ಆಗಿದ್ದರು. ಹೆಬ್ಬಿಗೆ ಸರಕಾರೀ ಶಾಲೆಯಲ್ಲಿ 7ನೇ ತರಗತಿ, ನಂತರ ಉಡುಪಿಯಲ್ಲಿ ಹೈಸ್ಕೂಲ್ ಹಾಗೂ ಪಿ. ಯು. ಸಿ., ಪದವಿ ವ್ಯಾಸಂಗ ಪೂರ್ಣಗೊಳಿಸಿದರು. ಉಡುಪಿ ರಾಘವೇಂದ್ರ ಪುಸ್ತಕ ಭಂಡಾರದಲ್ಲಿ ಉದ್ಯೋಗಿಯಾಗಿದ್ದು, ಅಂಚೆ ತೆರಪಿನ ಶಿಕ್ಷಣದಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ. ಪದವಿ ಪಡೆದರು. ಕೆಮ್ಮಣ್ಣು ಮತ್ತು ಕೋಟ ವಿದ್ಯಾಸಂಸ್ಥೆಗಳಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ನಂತರ 1991ರಲ್ಲಿ ಕಿನ್ನಿಗೋಳಿ ಪೊಂಪೈ ಕಾಲೇಜಿಗೆ ಪೂರ್ಣಕಾಲಿಕ ಉಪನ್ಯಾಸಕರಾಗಿ ಅಲ್ಲಿಯೇ ನಿವೃತ್ತರಾದರು. ...
READ MORE