ಲೇಖಕ ಚಂದ್ರಶೇಖರ ದಾಮ್ಲೆ ಅವರ ಕೃತಿ ಶಾಲೆ ಎಲ್ಲಿದೆ?. ಶಿಕ್ಷಣ, ಶಾಲೆ, ವಿದ್ಯಾರ್ಥಿಗಳು ಹೀಗೆ... ಈ ಕ್ಷೇತ್ರದ ಸುತ್ತ ಅನೇಕ ಸಂಶೋಧನಾ ಬರಹಗಳು ಪ್ರಕಟಗೊಂಡಿದೆ. ಪುಸ್ತಕಗಳು ಪ್ರಕಟವಾಗಿದೆ. ಆದರೆ ಇದೇ ಕ್ಷೇತ್ರದ ವಸ್ತುವನ್ನು ಆಧಾರವಾಗಿಟ್ಟು ಬಂದಿರುವ ಕಾದಂಬರಿ ಶಾಲೆ ಎಲ್ಲಿದೆ?. ಶಾಲೆಗಳು ಪ್ರಯೋಗ ಶಾಲೆಯಾಗುತ್ತಿರುವ ಇಂದಿನ ಸಂದರ್ಭದಲ್ಲಿ ಇತ್ತೀಚಿನ ವರ್ಷಗಳ ಅದರ ವ್ಯವಸ್ಥೆಗಳು, ಗೊಂದಲಗಳು ಈ ಕ್ಷೇತ್ರವನ್ನು ಆಪೋಷನ ತೆಗೆದುಕೊಳ್ಳುತ್ತಿದೆ. ಈ ಸಂಗತಿಗಳು ಕೂಡಾ ಈ ಕಾದಂಬರಿಯಲ್ಲಿ ಮಹತ್ವಿಕೆ ಪಡೆದುಕೊಂಡಿದೆ. ಮಗು ಮತ್ತು ಶಿಕ್ಷಕ ಕೇಂದ್ರಿತವಾದ ಶಾಲೆಯ ಸುತ್ತಮುತ್ತ ವಿಸ್ತರಿಸಲ್ಪಡುವ ಕಥಾ ಹಂದರದ ಈ ಕಾದಂಬರಿಯಲ್ಲಿ 44 ಅಧ್ಯಾಯಗಳಿದ್ದು, ಎಲ್ಲವೂ ಬಾಲ್ಯಕೇಂದ್ರಿತವಾದ ನೆನಪುಗಳು ಮತ್ತು ವ್ಯವಸ್ಥೆಗಳು ಮತ್ತು ಗೊಂದಲಗಳ ಸುತ್ತವೇ ಸುತ್ತುತ್ತಿದೆ.
ಲೇಖಕ ಡಾ. ಚಂದ್ರಶೇಖರ ದಾಮ್ಲೆ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿದ್ದಾರೆ. ಸಂಶೋಧಕರು, ಹವ್ಯಾಸಿ ಯಕ್ಷಗಾನ ಕಲಾವಿದರು, ಅಂಕಣಕಾರರು, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಘಟಕರು, ಸಾಹಿತಿ, ಶಿಕ್ಷಣ ತಜ್ಞರು, ಕೃತಿಕಾರರು ಹಾಗೂ ವಿಚಾರ ಸಂಕಿರಣಗಳ ಸಂಪನ್ಮೂಲ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ‘ಮನೆಮನೆ ಇಂಗುಗುಂಡಿ’ ಅಭಿಯಾನದ ಮೂಲಕ ಜಲ ಸಾಕ್ಷರತೆಗಾಗಿ ದುಡಿಯುತ್ತಿದ್ದಾರೆ. ಸುಳ್ಯದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯನ್ನು 1996 ರಲ್ಲಿ ಆರಂಭಿಸಿ, ಅದರ ಸ್ಥಾಪಕಾಧ್ಯಕ್ಷರಾಗಿ ಕನ್ನಡ ಮಾಧ್ಯಮ ಶಾಲೆಯನ್ನು ನಡೆಸುತ್ತಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕನ್ನಡ ಜಾಗೃತ ಸಮಿತಿ ಹಾಗೂ ಸರಕಾರಿ ಶಾಲೆಗಳ ಸಬಲೀಕರಣ ಸಮಿತಿಗಳ ಸದಸ್ಯರಾಗಿಯೂ ...
READ MORE