ಲೇಖಕಿ ಸುಚಿತ ಹೆಚ್.ಡಿ. ಅವರ ಕಾದಂಬರಿ-ಸಂಚು. ಕಾದಂಬರಿಕಾರರು ತಮ್ಮ ಮಾತುಗಳಲ್ಲಿ ಪ್ರಸ್ತಾಪಿಸಿದಂತೆ ಕಾಫಿ ತೋಟದಲ್ಲಿ ಯಾರಿಗೂ ತಿಳಿಯದೇ ನಡೆಯುವ ಕೆಲವು ಕೃತ್ಯಗಳು ಬೆಳಕಿಗೆ ಬಂದ ನಂತರ ನಡೆಯುವ ಘಟನಾವಳಿಗಳನ್ನು ಚಿತ್ರಿಸಿದ್ದಾಗಿ ಹೇಳಿದ್ದಾರೆ. ಕಾಫಿ ತೋಟದಲ್ಲಿ ಕಾರ್ಮಿಕರ ಮೇಲೆ ನಡೆಯುವ ದೌರ್ಜನ್ಯ-ಶೋಷಣೆಗಳ ವಿವರಗಳಿವೆ. ತೋಟದ ಮಾಲೀಕನ ವಿರುದ್ಧ ಕಾರ್ಮಿಕನ ಮಗನೊಬ್ಬ ಹೇಗೆ ಸೇಡು ತೀರಿಸಿಕೊಳ್ಳುತ್ತಾನೆ ಮತ್ತು ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಹೇಗೆ ಕಾರ್ಮಿಕ ಕುಟುಂಬಗಳ ವಿಚಾರ ವೈಖರಿ ಬದಲಾಗುತ್ತಾ ಹೋಗುತ್ತದೆ ಎಂಬುದರ ಕುರಿತೂ ಮಾರ್ಮಿಕವಾದ ವಿವರಣೆ ಇದೆ. ತೆರೀಕೆರೆಯ ಕಾಫಿ ತೋಟದ ರಮ್ಯ ಸೊಬಗು ಈ ಕಾದಂಬರಿಯ ಭಾಗವೂ ಆಗಿದೆ ಎನ್ನುವದನ್ನು ತಳ್ಳಿ ಹಾಕುವಂತಿಲ್ಲ.
ಲೇಖಕಿ ಹೆಚ್.ಡಿ. ಸುಚಿತ ಅವರು ಚಿಕ್ಕಮಗಳೂರು ಜಿಲ್ಲೆಯ ತರೀಕೆರಿ ತಾಲೂಕಿನ ಹುಣಸಘಟ್ಟ ಅಂಚೆ ವ್ಯಾಪ್ತಿಯ ಹೊಸಹಳ್ಳಿ ತಾಂಡಾದವರು. ಎಂ.ಎ, ಬಿ.ಇಡಿ ಪದವೀಧರರು. ಕೃತಿಗಳು: ಸಂಚು (ಇವರ ಮೊದಲ ಕಾದಂಬರಿ) ...
READ MORE