‘ಕಾಫಿನಾಡಿನ ಕಿತ್ತಳೆ’ ಕೃತಿಯು ಗಿರಿಮನೆ ಶ್ಯಾಮರಾವ್ ಅವರ ಕಾದಂಬರಿಯಾಗಿದೆ. ಮಲೆನಾಡಿನ ಬದುಕಿನ ನವರಸಗಳೆಲ್ಲ ಮೇಳವಿಸಿವೆ. ಕವಿ ವಿ.ಜಿ.ಭಟ್ಟರು ಕೃತಿಯ ಕುರಿತು ಹೇಳಿರುವಂತೆ ‘ಕಲ್ಪನೆಯ ಹತ್ತನೆಯ ರಸ (ಶುಷ್ಕರಸ) ಇಲ್ಲಿ ಲವಲೇಶವೂ ಕಾಣುತ್ತಿಲ್ಲ. ಕೆಲವೆಡೆ ಸಾಕ್ಷ್ಯಚಿತ್ರದಂತೆ, ಕೆಲವೆಡೆ ಕಾಲ್ಪನಿಕ ಕತೆಯಂತೆ, ಇನ್ನು ಕೆಲವೆಡೆ ಹಾಸ್ಯದ ಲಹರಿಯಂತೆ ಈ ಕೃತಿ ಪ್ರತಿ ಪುಟದಲ್ಲೂ ರೂಪ ಲಕ್ಷಣಗಳನ್ನು ಬದಲಾಯಿಸಿಕೊಳ್ಳುತ್ತಾ, ಮಲೆನಾಡಿನ ಮಳೆಗಾಲದ ಹಳ್ಲಗಳಂತೆ ಒಮ್ಮೆ ಧಾವಿಸುತ್ತಾ, ಒಮ್ಮೆ ನಿಧಾನಕ್ಕೆ ಜುಳುಜುಳಿಸುತ್ತ, ಮರುಕ್ಷಣವೇ ಧುಮ್ಮಿಕ್ಕುತ್ತ, ಮತ್ತೆ ಕೆಲವೊಮ್ಮೆ ಅನಿರೀಕ್ಷಿತವಾಗಿ ಹ್ರಸ್ವವಾಗುತ್ತ ಸಾಗುತ್ತದೆ. ಆರ್.ಕೆ.ನಾರಾಯಣರ `ಮಾಲ್ಗುಡಿ ಡೇಯ್ಸ್‘ ಮತ್ತು ಕುವೆಂಪು ವಿರಚಿತ `ಕಾನೂನು ಹೆಗ್ಗಡತೆ‘ಯ ಛಾಯೆಯನ್ನು ಅಲ್ಲಲ್ಲಿ ತೋರಿಸುತ್ತ ಹರಿಯುತ್ತದೆ’ ಎಂದಿದೆ.
ಗಿರಿಮನೆ ಶ್ಯಾಮರಾವ್ ಆಧುನಿಕ ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ವಿನೂತನ ರೀತಿಯ ಬರವಣೆಗೆಗಳಿಂದ ಕನ್ನಡ ಓದುಗ ಆಸಕ್ತರ ನಡುವೆ ಚಿರಪರಿಚಿತರು. ಇವರ ಹುಟ್ಟೂರು ಹಾಸನ ಜಿಲ್ಲೆಯ ಸಕಲೇಶಪುರದ ಗಾಣದಹೊಳೆ ಗ್ರಾಮ. ಪತ್ನಿ ಶಶಿಕಲಾ ಹಾಗು ಪುತ್ರ ಚೇತನ್ ಶರ್ಮ. ಕೃಷಿಕನಾಗಿ 35 ವಸಂತಗಳ ಸುದೀರ್ಘ ಅನುಭವವಿದೆ. ಪಶ್ಚಿಮ ಘಟ್ಟದ ಪ್ರಕೃತಿ, ಜೀವಜಗತ್ತಿನ ಪರಿಚಯ, ಮನುಷ್ಯರ ಮನಸ್ಸಿನ ಅವಲೋಕನ, ವೈಜ್ಞಾನಿಕವಾದ ವೇದದ ಒಳಗನ್ನು ತಿಳಿಯುವ ಕುತೂಹಲ ಇವೆಲ್ಲವೂ ಇವರನ್ನು ಬರವಣಿಗೆಯ ಕ್ಷೇತ್ರದೆಡೆಗೆ ಸೆಳೆದಿದೆ. ಹವ್ಯಾಸಿ ಪತ್ರಿಕಾ ಅಂಕಣಕಾರರಾಗಿದ್ದಾರೆ. ಮಕ್ಕಳ ಸಾಹಿತ್ಯ, ವ್ಯಕ್ತಿತ್ವ ವಿಕಸನ, ಚಿಂತನೆ, ಕಾದಂಬರಿ ಹೀಗೆ ಹಲವಾರು ...
READ MORE