ಎಚ್.ಜಿ.ರಾಧಾದೇವಿ ಅವರ ಕಾದಂಬರಿ ‘ಪ್ರೇಮ ನಕ್ಷತ್ರ’. ಇಲ್ಲಿ ಖ್ಯಾತ ಚಲನಚಿತ್ರ ನಟಿ ರೂಪರಾಗಿಣಿ ವೃತ್ತಿ ಜೀವನದ ಔನ್ನತ್ಯದಲ್ಲಿದ್ದಾಗಲೇ ಇದೆಲ್ಲಾ ಸಾಕು ಎನ್ನಿಸಿ , ಆ ರಂಗು ರಂಗಿನ ಜೀವನ ತ್ಯಜಿಸಿ ತನ್ನ ಮನಸ್ಸಿಗೊಪ್ಪುವ ಹುಡುಗ ಬೇಕು ಎಂದು ಹುಡುಕಿಕೊಂಡು ಹೊರಡುವ ಕಥೆ . ಆದರೆ ರೂಪ ಇದನ್ನು ತ್ಯಜಿಸಿದಷ್ಟು ಸುಲಭವಾಗಿ ಉಳಿದ ಕೆಲವರು ಅವಳನ್ನು ಬಿಡಲು ಸಿಧ್ಧವಿಲ್ಲ . ಇದಕ್ಕಾಗಿ ಅವರುಗಳು ಏನೆಲ್ಲಾ ಕುತಂತ್ರ ಮಾಡಿದರು ಇದು ಕಾದಂಬರಿಯಲ್ಲಿ ತಿರುವು ಕೊಡುವ ಆಸಕ್ತಿಕರ ಅಂಶ .
ಕನ್ನಡ ಕಾದಂಬರಿಗಾರ್ತಿ ಹೆಚ್. ಜಿ.ರಾಧಾದೇವಿ ಅವರು ತಮ್ಮ ವೃತ್ತಿ ಜೀವನದಲ್ಲಿ 30ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದಾರೆ. ಹುಟ್ಟಿದ್ದು ಕೋಲಾರ ಜಿಲ್ಲೆಯ ಶಿಡ್ಲಘಟ್ಟದಲ್ಲಿ. ತಂದೆ ಗೋಪಿನಾಥಾಚಾರ್. ಪ್ರಾಥಮಿಕ ಶಾಲಾ ಶಿಕ್ಷಕರು.ಕೋಲಾರದಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ.-ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು. ಮುಂದಿನ ಓದಿಗೆ ತಡೆಯುಂಟಾಗಿ, ಮನೆ ಪಾಠ ಆರಂಭಿಸಿದರು.ಈ ಅನುಭವವೇ ಶಾಲಾ ಶಿಕ್ಷಕಿಯಾಗುವ ಅವಕಾಶಕ್ಕೆ ದಾರಿಯಾಯಿತು. ದುಡಿಯುವ ಮಹಿಳಾ ವರ್ಗ ಕುರಿತ ಅನೆಕ ಸಮಸ್ಯೆಗಳನ್ನು ತಮ್ಮ ಕತೆ ಕಾದಂಬರಿಗಳ ಮೂಲಕ ಬೆಳಕು ಚೆಲ್ಲಿದ್ದು, ಈ ಬಗ್ಗೆ ಹಲವಾರು ಲೇಖನಗಳನ್ನು ಸಹ ಬರೆದಿದ್ದಾರೆ. ‘ಅನುರಾಗ ಅರಳಿತು, ಒಲವಿನ ಸುಧೆ ಒಲಿದು ಬಂದ ಅಪ್ಸರೆ, ಕತ್ತಲಲ್ಲಿ ಕಂಡ ಮಿಂಚು, ...
READ MORE