‘ಕಾಲಜಿಂಕೆ’ ಕೃತಿಯು ಕೆ. ಸತ್ಯನಾರಾಯಣ ಅವರ ಕಾದಂಬರಿಯಾಗಿದೆ. 2005ರಲ್ಲಿ ಮೊದಲ ಬಾರಿಗೆ ಈ ಕೃತಿಯು ಮುದ್ರಣಗೊಂಡಿತ್ತು. ಕೃತಿಯಲ್ಲಿನ ಕೆಲವೊಂದು ವಿಚಾರಗಳನ್ನು ನರೇಂದ್ರ ಪೈ ಅವರು ಹೀಗೆ ಕಟ್ಟಿಕೊಟ್ಟಿದ್ದಾರೆ : ಸತ್ಯನಾರಾಯಣರ ಹಿಂದಿನ ಕಾದಂಬರಿಗಳನ್ನು, ಕತೆ ಪ್ರಬಂಧಗಳನ್ನು ಗಮನಿಸುತ್ತ ಬಂದವರಿಗೆ ಇಲ್ಲಿ ಅವರ ಬರವಣಿಗೆಯ ಸ್ವರೂಪದಲ್ಲಿ ಆಗಿರುವ ಮಹತ್ವದ ಬದಲಾವಣೆಗಳು ಕಾಣದಿರಲು ಸಾಧ್ಯವಿಲ್ಲ. ಮೊದಲನೆಯದಾಗಿ, ಸತ್ಯನಾರಾಯಣರು ಇದೇ ಮೊದಲ ಬಾರಿಯಂಬಂತೆ ಹೆಸರಿನಿಂದ ತೊಡಗಿ ಕಾದಂಬರಿಯ ಉದ್ದಕ್ಕೂ ರೂಪಕಗಳನ್ನು ಬಳಸಿಕೊಂಡಿರುವುದು ಗಮನಾರ್ಹ. ಹಾಗೆಯೇ , ತಮ್ಮ ಕತೆಗಳಲ್ಲಿ ಬದುಕು ತನ್ನೊಳಗೆ ಹಿಡಿದಿಟ್ಟುಕೊಳ್ಳುವ ಕತೆಗಳನ್ನೂ ಆ ಕತೆಗಳ ಒಡಲಿನಲ್ಲಿರುವ ಸತ್ಯಗಳನ್ನೂ ಶೋಧಿಸುವುದರತ್ತಲೇ ತಮ್ಮಲ್ಲಾ ಗಮನವಿಟ್ಟಿದ್ದಾರೇನೋ ಅನಿಸುತ್ತಿದ್ದ ಹೊತ್ತಿನಲ್ಲೇ ಸತ್ಯನಾರಾಯಣರ ಕಾಲಜಿಂಕೆ ಎತ್ತುವ ಪ್ರಶ್ನೆಗಳು ಎರಡು ತಲೆಮಾರಿನ ಮೌಲ್ಯಗಳ ಸಂಘರ್ಷವಾಗಿಯೂ, ಇದನ್ನು ಮೀರಿದ ಸತ್ಯದ ಶೋಧವಾಗಿ ನಿಲ್ಲುವುದು ಕೂಡ ಕಾಲಜಿಂಕೆಯ ವೈಶಿಷ್ಟ್ಯವಾಗಿದೆ. ಕಳೆದ ಎರಡು ದಶಕಗಳಲ್ಲಿ ನಮ್ಮ ಯುವ ಜನಾಂಗದ ಸಂಸ್ಕೃತಿ, ಶಿಕ್ಷಣ, ಉದ್ಯೋಗ, ಮದುವೆ, ವ್ಯವಹಾರ, ಪ್ರಾಶಸ್ತ್ರಗಳು, ಯಶಸ್ಸನ್ನು ಅಳೆಯುವ ಮಾನದಂಡಗಳು ಎಲ್ಲವೂ ವ್ಯಾಪಾರೀಕರಣ, ಜಾಗತೀಕರಣಗಳ ಹೆಸರಿನಲ್ಲಿ ಬದಲಾಗುತ್ತಿರುವಾಗಲೇ ಈ ಎಲ್ಲದರಾಚೆ ತಣ್ಣಗಿರುವಂತೆ, ಇನ್ನೂ ಜೀವಂತಿಕೆಯನ್ನು ಉಳಿಸಿಕೊಂಡಂತೆ ಕಾಣುವ ನಮ್ಮ ಹಳ್ಳಿಗಳು, ಅಲ್ಲಿನ ಪರಿಸರ, ಜಾನಪದ, ಅಲ್ಲಿನ ಸಾಲ-ಉದ್ಯೋಗ, ಅಭಿವೃದ್ಧಿ, ಸ್ವಾಯತ್ತತೆಯ ಹಂಬಲ, ಅಲ್ಲಿನ ಸಾಂಸಾರಿಕ ಅನುಬಂಧ ಮತ್ತು ಮಾನವ ಸಂಬಂಧಗಳು -ಎರಡರ ತೌಲನಿಕ ಚಿತ್ರವಿದೆ. ಆದರೂ ಇಲ್ಲಿ ತೀರ್ಮಾನಗಳಿಲ್ಲ ಆದ್ಯತೆಗಳಿಲ್ಲ, ಒಲವುಗಳೆಲ್ಲ ಇಲ್ಲದಿರುವುದೇ ಈ ಕಾದಂಬರಿ ಓದಿ ಮುಗಿಸಿದ ಮೇಲೂ ಓದುಗನ ಮನಸಿನಲ್ಲಿ ಬೆಳೆಯುತ್ತಲೇ ಉಳಿಯುವುದರ ಹಿನ್ನೆಲೆ ಯಾಗಿದೆ ಅನಿಸುತ್ತದೆ. ರಂಗನಾಥನ ಮಗ ವಿಕ್ರಂ ಮತ್ತು ಮಗಳು ಪ್ರಾರ್ಥನಾ ಎತ್ತುವ ಪುಶ್ನೆಗಳು ಹಾಗೆ ಸರಳವಾದ ಉತ್ತರಗಳಿಗೆ ನಿಲುವುಗಳಿಗೆ ಬರಲು ಸಾಧ್ಯವಿರುವಂಥವುಗಳಲ್ಲಿ ಕಾದಂಬರಿ ಇಂಥ ಪ್ರಶ್ನೆಗಳನ್ನು, ಎತ್ತಬಲ್ಲ ಹಂತಕ್ಕೆ ತನ್ನ ಒಡಲಿನ ಸಂದರ್ಭದಲ್ಲೇ ಏರುವುದಿದೆಯಲ್ಲ, ಅದೇ ಸತ್ಯನಾರಾಯಣರ ಕಲೆಗಾರಿಕೆಯ ಯಶಸ್ಸು ಎಂದು ನಿರ್ವಿವಾದವಾಗಿ ಹೇಳಬಹುದು’ ಎಂದಿದ್ದಾರೆ.
ಕೆ.ಸತ್ಯನಾರಾಯಣ ಅವರು ಹುಟ್ಟಿದ್ದು 1954 ಏಪ್ರಿಲ್ 21 ರಂದು. ಮಂಡ್ಯ ಜಿಲ್ಲಾ ಮದ್ದೂರು ತಾಲೋಕು ಕೊಪ್ಪ ಗ್ರಾಮದಲ್ಲಿ. 1972ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ.ಪದವಿ(ಸುವರ್ಣ ಪದಕದೊಂದಿಗೆ). 1978ರಲ್ಲಿ ಇದೇ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ. 1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ(ಏಪ್ರಿಲ್ 2014ರಲ್ಲಿ ಕರ್ನಾಟಕ ಮತ್ತು ಗೋವಾ ವಲಯದ ಪ್ರಧಾನ ಮುಖ್ಯ ಆಯುಕ್ತರಾಗಿ, ಬೆಂಗಳೂರು) ನಿವೃತ್ತಿ. ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ...
READ MORE