ಚಿಂತಕ ತೀರ್ಥರಾಮ ವಳಲಂಬೆ ಅವರ ಕೃತಿ-ಅಜಬಿರು. ಕಥೆಯ ಪರಿಸರ ತುಳುನಾಡು. ಆದರೂ, ಇಡೀ ಕಾದಂಬರಿಯನ್ನು ಕನ್ನಡಕ್ಕೆ ರೂಪಾಂತರಿಸಲಾಗಿದೆ. ಭಾರತೀಯ ಸಾಂಸ್ಕೃತಿಕ ಮೌಲ್ಯಗಳು ಕಸಿಯುತ್ತಿವೆ. ಮರೆಯಾಗುತ್ತಿವೆ. ಮನುಷ್ಯ ಸಂಬಂಧಗಳು ಮಸುಕಾಗುತ್ತಿವೆ. ಇದರಿಂದ, ಎಲ್ಲ ಇದ್ದೂ ಕಳೆದುಕೊಂಡ ಅನುಭವದ ಅನಾಥ ಭಾವವನ್ನು ಕಾದಂಬರಿ ಧ್ವನಿಸುತ್ತದೆ. ವೇದಗಳು, ಅಧ್ಯಾತ್ಮ, ಅತೀತಶಕ್ತಿಗಳ ಚಿಂತನೆ, ಭಾರತೀಯ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿದ್ದರೂ ಅವುಗಳ ಹುಡುಕಾಟವೂ ಇಲ್ಲಿ ಕುತೂಹಲ ಕೆರಳಿಸುತ್ತದೆ.
ತೀರ್ಥರಾಮ ವಳಲಂಬೆ ಅವರು ಚಿಂತಕರು.ತತ್ವಜ್ಞಾನ, ಅಧ್ಯಾತ್ಮ ಇವರ ಆಸಕ್ತಿಯ ಕ್ಷೇತ್ರಗಳು. ದೇಶ-ಕಾಲ-ಬದುಕು-ದೇವರು, ಧ್ಯಾನ, ಪುನರ್ಜನ್ಮ ಮತ್ತು ಪುರುಷಾರ್ಥ, ಬ್ರಹ್ಮಜ್ಞಾನ ಮತ್ತು ಬ್ರಹ್ಮವಿದ್ಯೆ, ಇಪ್ಪತ್ತೆಂಟು ಹಣತೆಗಳು, ವಿಚಾರವಾದ, ವಿಜ್ಞಾನ, ಅಧ್ಯಾತ್ಮ, ಮೃತ ಸಂಜೀವಿನಿ, ಅಜಬಿರು -ಇವು ಪ್ರಮುಖ ಕೃತಿಗಳು. ...
READ MORE