ಕನ್ನಡದಲ್ಲಿ ಕಾದಂಬರಿಗಳೇ ಅಪರೂಪವಾಗುತ್ತಿರುವ ಹೊತ್ತಿನಲ್ಲಿ ಲತಾ ಗುತ್ತಿಯವರ ಈ ಕಾದಂಬರಿ ಪ್ರಿಯ ಓದುಗರ ಮೆಚ್ಚುಗೆ ಪಡೆದುಕೊಂಡಿದೆ. ಲತಾ ಅವರು ಕವಿತೆ, ಕಥೆ, ಕಾದಂಬರಿಗಳನ್ನು ಬರೆದಿದ್ದರೂ ಅವರ ಪ್ರವಾಸ ಕಥನಗಳು ಹೆಚ್ಚು ಓದುಗರ ಗಮನ ಸೆಳೆಯುತ್ತವೆ. ಕರಿನೀರು ಎಂಬ ಈ ಕಾದಂಬರಿ ಅವರ ಇದುವರೆಗಿನ ಎಲ್ಲ ರಚನೆಗಳಿಗಿಂತ ವ್ಯಾಪ್ತಿಯಲ್ಲೂ ಗಾತ್ರದಲ್ಲೂ ಆಕಾಂಕ್ಷೆಯಲ್ಲೂ ದೊಡ್ಡ ರಚನೆಯಾಗಿದೆ. ಭಾರತದಲ್ಲಿ ಬ್ರಿಟಿಷರ ಆಳ್ವಿಕೆಯ ಕೊನೆಯ ದಶಕಗಳಿಂದ ಆರಂಭವಾಗಿ ಸ್ವಾತಂತ್ರೋತ್ತರ ಅನಿವಾಸಿ ಭಾರತೀಯ ಯುವ ಪೀಳಿಗೆಯ ಬದುಕಿನವರೆಗೆ ಈ ಕಾದಂಬರಿ ವ್ಯಾಪಿಸಿದೆ. ಈ ಕೃತಿಯ ನಾಯಕ, ಊರಿನ ಹೆಣ್ಣುಮಗಳೊಬ್ಬಳ ಮಾನರಕ್ಷಣೆಗಾಗಿ ಆಳುವ ಬ್ರಿಟಿಷ್, ಆಡಳಿತಗಾರನ ಮೇಲೆ ಗುಂಡು ಹಾರಿಸಿದಾಗ ಅಧಿಕಾರಿಯ ಹೆಂಡತಿ ಸಾಯುತ್ತಾಳೆ, ನಾಯಕ ಅಂದಮಾನಿಗೆ ಕರಿನೀರು ಶಿಕ್ಷೆ ಅನುಭವಿಸಲು ಹೇಗೆ ಗಡಿಪಾರಾಗುತ್ತಾನೆಂಬುವುದನ್ನುವಿವರಿಸಿದ್ದಾರೆ.
ಮೂಲತಃ ಬೆಳಗಾವಿಯವರಾದ ಡಾ. ಲತಾ ಗುತ್ತಿ ಅವರು ತಮ್ಮ ಪ್ರವಾಸ ಕಥನ ಹಾಗೂ ಕವಿತೆಗಳ ಮೂಲಕ ಚಿರಪರಿಚಿತರಿದ್ದಾರೆ. ಲತಾ ಅವರು ಜನಿಸಿದ್ದು 1953ರ ಆಗಸ್ಟ್ 12ರಂದು. ಬೆಂಗಳೂರು ಕಂಪ್ಯೂಟರ್ ಟೆಕ್ನಾಲಜಿಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಂದೆ ನಾಗನಗೌಡ, ತಾಯಿ -ಶಾಂತಾದೇವಿ ಪಾಟೀಲ. ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪಿಎಚ್.ಡಿ. ಪದವಿ ಪಡೆದಿರುವ ಅವರು ಮೈಸೂರು ವಿಶ್ವವಿದ್ಯಾಲಯಿಂದ ಇಂಗ್ಲಿಷಿನಲ್ಲಿ ಎಂ.ಎ. ಪದವಿ ಪಡೆದಿದ್ದಾರೆ. ಯುರೋನಾಡಿನಲ್ಲಿ (1993), ನಾ ಕಂಡಂತೆ ಅರೇಬಿಯಾ (1995), ಅಂಡಮಾನಿನ ಎಳೆಯನು ಹಿಡಿದು (2013), ಚಿರಾಪುಂಜಿಯವರೆಗೆ (2017) ಅವರ ಪ್ರವಾಸ ಕಥನಗಳಾದರೆ ಹೆಜ್ಜೆ (2004), ಕರಿನೀರು (2015) ಕಾದಂಬರಿಗಳು. “ಪ್ರವಾಸ ಸಾಹಿತ್ಯ ...
READ MOREಕಾದಂಬರಿ-2015