ವಿಜಯಧ್ವನಿ

Author : ಹೆಚ್.ಜಿ. ರಾಧಾದೇವಿ

Pages 160

₹ 80.00




Year of Publication: 2012
Published by: ಶ್ರೀಲಕ್ಷ್ಮೀ ವೆಂಕಟೇಶ ಪ್ರಕಾಶನ
Address: ಬೆಂಗಳೂರು

Synopsys

ತಂದೆಯ ಅಕಾಲಿಕ ಮರಣದಿಂದ ಎಳವೆಯಲ್ಲೇ ತಾಯಿಯ ಸೋದರಮಾವನ ಮನೆ ಸೇರುವ ಕತಾನಾಯಕಿ ಸೀತಾ, ಹೇಗೆ ದಿಟ್ಟವಾಗಿ ಸಾಮಾಜಿಕ ಕಟ್ಟುಪಾಡುಗಳನ್ನು ಮೀರಿ ಜೀವನದಲ್ಲಿ ಉತ್ತುಂಗಕ್ಕೆ ಏರುತ್ತಾಳೆ ಎಂಬುದರ ಚಿತ್ರಣ ‘ವಿಜಯಧ್ವನಿ’ ಕಾದಂಬರಿಯು ಒಳಗೊಂಡಿದೆ. 

ಆರ್ಥಿಕವಾಗಿ ಸಧೃಡವಾಗಲು ಅವಳು ಶುರುಮಾಡುವ ಸಣ್ಣ ಕೈಗಾರಿಕೆಯ ದುಡಿಮೆಯಿಂದ ಹಾಗೂ ಕಠಿಣ ಪರಿಶ್ರಮದಿಂದ ಜೀವನ ಸಾಗಿಸುವ ಅವಳ ಬದುಕು ಇತರರಿಗೂ ಮಾದರಿಯಾಗಬಲ್ಲದು. ಸಣ್ಣ ಸಣ್ಣ ಸಮಸ್ಯೆಗಳಿಗೂ ಕೊರಗುವವರಿಗೆ ಸ್ಪೂರ್ತಿದಾಯಕವಾಗಿ ಈ ಕಾದಂಬರಿಯಲ್ಲಿ ಲೇಖಕಿ ಹೆಚ್.ಜಿ. ರಾಧಾದೇವಿ ಅವರು ನೀಡಿದ್ದಾರೆ.

About the Author

ಹೆಚ್.ಜಿ. ರಾಧಾದೇವಿ
(30 January 1952 - 09 November 2006)

ಕನ್ನಡ ಕಾದಂಬರಿಗಾರ್ತಿ ಹೆಚ್. ಜಿ.ರಾಧಾದೇವಿ ಅವರು ತಮ್ಮ ವೃತ್ತಿ ಜೀವನದಲ್ಲಿ 30ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದಾರೆ. ಹುಟ್ಟಿದ್ದು ಕೋಲಾರ ಜಿಲ್ಲೆಯ ಶಿಡ್ಲಘಟ್ಟದಲ್ಲಿ. ತಂದೆ ಗೋಪಿನಾಥಾಚಾರ್‌. ಪ್ರಾಥಮಿಕ ಶಾಲಾ ಶಿಕ್ಷಕರು.ಕೋಲಾರದಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ.-ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು.  ಮುಂದಿನ ಓದಿಗೆ ತಡೆಯುಂಟಾಗಿ, ಮನೆ ಪಾಠ ಆರಂಭಿಸಿದರು.ಈ  ಅನುಭವವೇ ಶಾಲಾ ಶಿಕ್ಷಕಿಯಾಗುವ ಅವಕಾಶಕ್ಕೆ ದಾರಿಯಾಯಿತು. ದುಡಿಯುವ ಮಹಿಳಾ ವರ್ಗ ಕುರಿತ ಅನೆಕ ಸಮಸ್ಯೆಗಳನ್ನು ತಮ್ಮ ಕತೆ ಕಾದಂಬರಿಗಳ ಮೂಲಕ ಬೆಳಕು ಚೆಲ್ಲಿದ್ದು, ಈ ಬಗ್ಗೆ ಹಲವಾರು ಲೇಖನಗಳನ್ನು ಸಹ ಬರೆದಿದ್ದಾರೆ. ‘ಅನುರಾಗ ಅರಳಿತು, ಒಲವಿನ ಸುಧೆ ಒಲಿದು ಬಂದ ಅಪ್ಸರೆ, ಕತ್ತಲಲ್ಲಿ ಕಂಡ ಮಿಂಚು, ...

READ MORE

Related Books