ಮಧ್ಯಮವರ್ಗದ ಸಂಸಾರದಲ್ಲಿ ಜನಿಸಿ, ಸ್ವದೇಶ ಮತ್ತು ವಿದೇಶಗಳಲ್ಲಿ ಒಳ್ಳೆಯ ವ್ಯಾಸಂಗ ಮಾಡಿ, ವಿದೇಶಗಳಲ್ಲಿ ಒಳ್ಳೆಯ ಹಣ ಬರುವ ಉನ್ನತ ಸ್ಥಾನಗಳಲ್ಲಿರುವ ಚಿಕ್ಕವಯಸ್ಸಿನ ಸ್ತ್ರೀಯಾದರೂ ತನ್ನ ದೇಶದಲ್ಲಿ ಸಮಾಜೋದ್ಧಾರ ಮಾಡಲು ವಿದೇಶದ ಕೆಲಸ ಬಿಟ್ಟು ಸ್ವದೇಶಕ್ಕೆ ಹಿಂತಿರುಗಿ ಆಜೀವ ಪರ್ಯಂತ ಸಮಾಜಸೇವೆ ಮಾಡಿದ, ತನ್ನ ಸಂಬಂಧಿಕರನ್ನು, ಮಿತ್ರರನ್ನು ಈ ಕಾರ್ಯಕ್ಕೆ ಪ್ರೇರೇಪಿಸಿದ ಮಿನುಗುತಾರೆ ಮೀನಾ. ಈ ಸ್ತ್ರೀಯೇ ಕಾದಂಬರಿಯ ನಾಯಕಿ. ಈ ಕಾದಂಬರಿ ಸಮಾಜದ ಸೇವೆ ಮಾಡುವ ಅಭೀಷ್ಟವಿರುವವರಿಗೂ, ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೂ, ಸೇವಾಕರ್ತರಿಗೂ, ಸ್ಫೂರ್ತಿ ಕೊಡಬಹುದು. ಇಲ್ಲಿ ಕಥಾನಾಯಕಿಯ ಜೀವನ ಸಾಗುತ್ತಾ ಒಂದು ಸಾಧನೆಯ ಬೆಳಕನ್ನು ಕೊಡುತ್ತದೆ.