ಚಂದ್ರ ನಲಿದಾಡಿದ

Author : ಹೆಚ್.ಜಿ. ರಾಧಾದೇವಿ



Published by: ಶ್ರೀ ಲಕ್ಷ್ಮಿ ವೆಂಕಟೇಶ್ವರ ಪ್ರಕಾಶನ

Synopsys

ಹೆಚ್.ಜಿ.ರಾಧಾದೇವಿ ಅವರ ಸುಂದರ ಪ್ರೇಮಕಥೆ ‘ಚಂದ್ರ ನಲಿದಾಡಿದ’. ಎಲ್ಲಾ ಪ್ರೇಮ ಕಥೆಗಳೂ ' ಅವರಿಬ್ಬರೂ ಮದುವೆಯಾಗಿ ಸುಖವಾಗಿದ್ದರು' ಎನ್ನುವಲ್ಲಿಗೆ ಅಂತ್ಯವಾದರೆ ಇಲ್ಲಿ ಕಥೆ ನಡೆಯುವುದೇ ಮದುವೆಯ ನಂತರ . ಇಲ್ಲಿ ಪ್ರೇಮಿಗಳಿಗೆ ಅಡ್ಡವಾಗಿ ಯಾವುದೇ ಖಳನಾಯಕ ಬರುವುದಿಲ್ಲ . ಪರಿಸ್ಥಿತಿಗಳೇ ಅವರಿಗೆ ಶತ್ರುಗಳಾಗುತ್ತವೆ . ಹಿರಿಯರನ್ನು ಒಪ್ಪಿಸಿ ಮದುವೆಯಾಗುವ ಈ ಪ್ರೇಮಿಗಳು , ಮದುವೆಯ ನಂತರ ಎದುರಾಗುವ ಹಲವು ಕಷ್ಟಗಳಿಗೆ ಅಂಜದೆ ಬದುಕನ್ನು ಎದುರಿಸಿ ತಮ್ಮ ಪ್ರೇಮಕ್ಕೇ ಬದ್ಧರಾಗಿದ್ದ ಈ ಚಂದ್ರ ಚಕೋರಿಯರು ಕೊನೆಗೂ ಸಂತಸದ ಬದುಕು ಪಡೆಯುವ ಕಥೆ .

About the Author

ಹೆಚ್.ಜಿ. ರಾಧಾದೇವಿ
(30 January 1952 - 09 November 2006)

ಕನ್ನಡ ಕಾದಂಬರಿಗಾರ್ತಿ ಹೆಚ್. ಜಿ.ರಾಧಾದೇವಿ ಅವರು ತಮ್ಮ ವೃತ್ತಿ ಜೀವನದಲ್ಲಿ 30ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದಾರೆ. ಹುಟ್ಟಿದ್ದು ಕೋಲಾರ ಜಿಲ್ಲೆಯ ಶಿಡ್ಲಘಟ್ಟದಲ್ಲಿ. ತಂದೆ ಗೋಪಿನಾಥಾಚಾರ್‌. ಪ್ರಾಥಮಿಕ ಶಾಲಾ ಶಿಕ್ಷಕರು.ಕೋಲಾರದಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ.-ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು.  ಮುಂದಿನ ಓದಿಗೆ ತಡೆಯುಂಟಾಗಿ, ಮನೆ ಪಾಠ ಆರಂಭಿಸಿದರು.ಈ  ಅನುಭವವೇ ಶಾಲಾ ಶಿಕ್ಷಕಿಯಾಗುವ ಅವಕಾಶಕ್ಕೆ ದಾರಿಯಾಯಿತು. ದುಡಿಯುವ ಮಹಿಳಾ ವರ್ಗ ಕುರಿತ ಅನೆಕ ಸಮಸ್ಯೆಗಳನ್ನು ತಮ್ಮ ಕತೆ ಕಾದಂಬರಿಗಳ ಮೂಲಕ ಬೆಳಕು ಚೆಲ್ಲಿದ್ದು, ಈ ಬಗ್ಗೆ ಹಲವಾರು ಲೇಖನಗಳನ್ನು ಸಹ ಬರೆದಿದ್ದಾರೆ. ‘ಅನುರಾಗ ಅರಳಿತು, ಒಲವಿನ ಸುಧೆ ಒಲಿದು ಬಂದ ಅಪ್ಸರೆ, ಕತ್ತಲಲ್ಲಿ ಕಂಡ ಮಿಂಚು, ...

READ MORE

Related Books