ಶತಮಾನಂಭವತಿ

Author : ರಾಜಶೇಖರ್ . ಎಂ

₹ 130.00




Year of Publication: 2025
Published by: ವೀರಲೋಕ ಬುಕ್ಸ್
Address: ವೀರಲೋಕ ಬುಕ್ಸ್‌ ಪ್ರೈವೇಟ್‌ ಲಿಮಿಟೆಡ್‌, 207, 2ನೇ ಮಹಡಿ, 3ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು-560018
Phone: +91 7022122121

Synopsys

'ಶತಮಾನಂಭವತಿ' ರಾಜಶೇಖರ ಎಂ ಅವರ ಕೃತಿಯಾಗಿದೆ. ಶತಮಾನಂಭವತಿ ಅನ್ನೋದು ನೂರು ವರ್ಷ ಚೆನ್ನಾಗಿ ಬಾಳಲಿ ಎಂದು ಆಶೀರ್ವದಿಸುವ ಮಂತ್ರ. ಈ ಮಂತ್ರದ ಆಶಯವೇ ಕಾದಂಬರಿಯ ತಲೆಬರಹ, ಈ ಆಶಯದಂತೆ ರಘು ಅನ್ನುವ ಪ್ರಮುಖ ಪಾತ್ರದಾರಿ ಪರಿಶುದ್ಧ ಪ್ರೀತಿಗಾಗಿ ಹಪಾಹಪಿಸುತ್ತಾನೆ ಜೊತೆಗೆ ಆ ಪ್ರೀತಿಯನ್ನ ಗಳಿಸಿ ಜೀವನ ಪೂರ್ತಿ ಕಾಪಿಟ್ಟುಕೊಳ್ಳುವ ಉದ್ದೇಶವನ್ನು ಸಹ ಇಟ್ಟುಕೊಂಡಿರುತ್ತಾನೆ. ಅಷ್ಟೇ ಅಲ್ಲ ಅಂತಹ ಪ್ರೀತಿ ಪಡೆಯಲು ಪರಿಶುದ್ಧನಾಗೇ ಈತನು ಇರುತ್ತಾನೆ. ಮ್ಯಾಟ್ರಿಮೊನಿಯಲ್ ಅನ್ನೋದು ಮದುವೆ ಮಾಡಸಲಿಕ್ಕೆ ಇರುವ ಆನ್ ಲೈನ್ ವೆಬ್ ಸೈಟ್, ಈ ಆನ್ ಲೈನ್ ಪೇಜ್ ಗೆ ಮದುವೆಯಾಗುವ ಹುಡುಗಿಯ ತಲಾತ್ ಮಾಡಲು ನೋಂದಾಯಿಸಿಕೊಳ್ಳುವ ಕಥಾನಾಯಕ ರಘು ಪ್ರೊಫೈಲ್ ಮೂಲಕ ಪರಿಚಯ ಆಗುವ ಹುಡುಗಿ ಜೊತೆಯಲ್ಲಿ ಚಾಟ್ ಆರಂಭಿಸಿದ ನಂತರ ಅವಳೆಡೆಗೆ ಅನುರಾಗ ತೋರಿ ಆ ನಂತರ ಅವಳು ಸಿಗದೆ ಮೋಸಕ್ಕೆ ಒಳಗಾಗುತ್ತಾನಾ? ಅಥವಾ ಅವನಿಗೆ ಅವಳ ಪ್ರೀತಿ ಧಕ್ಕುತ್ತಾ? ಅನ್ನುವ ಹುಡುಕಾಟದಲ್ಲಿರುವ ನಮಗೆ, ಅದೇ ವಂಚನೆ ಮೋಸದ ಕಾರಣಗಳಿಂದ ಮತ್ತೆ ಹೇಗೆ ಅತ ಪ್ರೀತಿಯನ್ನ ಗಳಿಸುತ್ತಾನೆ ಅನ್ನುವ ಕಥಾ ಹೂರಣ ಇರುವ ಕಾದಂಬರಿ ಶತಮಾನಂಭವತಿ, ಕಾದಂಬರಿಯ ಅಂತ್ಯದಲ್ಲಿ ಹೇಳುವ ವಿಷಯವನ್ನ ನಮಗೆ ಗೊತ್ತಿಲ್ಲದಂತೆ ಮೊದಲಿಂದಲೂ ಬೆಸೆದುಕೊಂಡೆ ಬಂದಿರುತ್ತಾರೆ. ಅದೇ ಈ ಕಾದಂಬರಿಯ ಹೆಗ್ಗುರುತು. ಕಾದಂಬರಿಕಾರ ರಾಜಶೇಖರ್ ಮೂಲತಃ ಸಿನೆಮಾ ನಿರ್ದೇಶನ ಮಾಡಲು ಬಂದಾತ. ಆ ರಂಗದಲ್ಲಿ ಒಂದು ದಶಕಕ್ಕೂ ಹೆಚ್ಚು ಅವಧಿಯಲ್ಲಿ ಕೆಲಸ ಮಾಡಿ ಸದಭಿರುಚಿಯ ಹಾಗೂ ಹೊಸತನ ಇರುವ ಸಿನೆಮಾ ಕೊಡಬೇಕೆಂಬ ಸದಾ ಇಚ್ಚೆಯುಳ್ಳ ವ್ಯಕ್ತಿ, ವರ್ತಮಾನದ ಹದಿಹರೆಯದ ಪ್ರೀತಿ, ಪ್ರೇಮ ತಲ್ಲಣಗಳನ್ನ ಹೊಸತನದ ಹಚ್ಚಿಗೆ ಹಾಕಿ ಚೆಂದದ ರೂಪಗಳನ್ನ ಕೊಟ್ಟಿದ್ದಾರೆ. ಇದನ್ನ ಓದುತ್ತಿರುವಾಗಲೇ ಒಂದು ಸಿನೆಮಾ ನೋಡಿದ ಅನುಭವವಾಗುತ್ತದೆ, ಅಂದರೆ ಆ ರೀತಿಯಲ್ಲಿ ಕಾದಂಬರಿಕಾರರು ಸಾಹಿತ್ಯ ಕಟ್ಟಿಕೊಟ್ಟಿದ್ದಾರೆ. ಇದು ಅವರ ಚೊಚ್ಚಲ ಕೃತಿ, ಮುಂದೆ ಏನಾಗಬಹುದು ಅನ್ನುವ ಕುತೂಹಲಗಳ ನಡುವೆ ಕಾದಂಬರಿ ಓದಿಸಿಕೊಂಡು ಹೋಗುತ್ತದೆ.

About the Author

ರಾಜಶೇಖರ್ . ಎಂ

ರಾಜಶೇಖರ್ ರವರು ಹುಟ್ಟಿದ್ದು ಬೆಂಗಳೂರಿನಲ್ಲಿ, ಪ್ರಾಥಮಿಕ ಹಾಗೂ ಮುಂದುವರೆದ ಶಿಕ್ಷಣವನ್ನು ಬೆಂಗಳೂರಿನಲ್ಲಿ ಮುಗಿಸಿ ನಂತರ ಸಿನಿಮಾ ಕ್ಷೇತ್ರದಲ್ಲಿ ಚಿಕ್ಕಂದಿನಿಂದಲೂ ಆಸಕ್ತಿ ಇದ್ದ ಕಾರಣ, ಇಫ್ಟಾ (IPTA) ಸಂಘಟನೆಯವರ ದೃಶ್ಯ ಮಾಧ್ಯಮ ಕಾರ್ಯಗಾರದಲ್ಲಿ ನಿರ್ದೇಶನ ವಿಭಾಗದಲ್ಲಿ ಶಿಕ್ಷಣ ಪಡೆದು ಕೆಲವು ವರ್ಷಗಳಿಂದ ಈ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅವರ ಆಯ್ದ ಕೆಲವು ಪ್ರಮುಖ ಚಿತ್ರಗಳೆಂದರೆ, ಮೊದಲಾಸಲ(ರಾಕಿಂಗ್ ಸ್ಟಾರ್ ಯಶ್ ಅಭಿನಯ), ವೀರಬಾಹು(ದುನಿಯಾ ವಿಜಯ್) , ಚಕ್ರವರ್ತಿ (ಚಾಲೆಂಜಿಂಗ್ ಸ್ಟಾರ್ ದರ್ಶನ್),ಅಧ್ಯಕ್ಷ ಇನ್ ಅಮೆರಿಕ(ಶರಣ್), ಬೈಟು ಲವ್ (ಧನ್ವೀರ್, ಶ್ರೀ ಲೀಲಾ), ಓ ನನ್ನ ಚೇತನ (2021 ಸಾಲಿನ ...

READ MORE

Related Books