ಕಾದಂಬರಿಗಾರ್ತಿ ಎಚ್. ಜಿ.ರಾಧಾದೇವಿ ಅವರ ಸಾಮಾಜಿಕ ಕಾದಂಬರಿ ಭೂಮಿಯ ನಕ್ಷತ್ರ. ಭೂಮಿಯ ನಕ್ಷತ್ರದ ನಾಯಕಿ ರೇಷ್ಮಾ .ಬಿಸ್ವಜಿತ್ ಮತ್ತು ಸತ್ಯಪ್ರೇಮ ದಂಪತಿಗಳ ಒಬ್ಬಳೇ ಮುದ್ದಿನ ಮಗಳು.ತಂದೆ ಉದ್ಯಮಿ ಹಾಗು ತಾಯಿ ಕಾಲೇಜು ಉಪನ್ಯಾಸಕಿ.ಶ್ರೀಮಂತಿಕೆಯಲ್ಲಿ ಬೆಳೆದ ರೇಷ್ಮಾಳಿಗೆ , ವಿದ್ಯಾಭ್ಯಾಸದೊಂದಿಗೆ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಒಂದು ಹವ್ಯಾಸ. ತನ್ನ ಸೌಂದರ್ಯದ ಆರೈಕೆಗೆ ಸಾವಿರಾರು ರೂಪಾಯಿ ಖರ್ಚು ಮಾಡುತ್ತಿದ್ದಳು. ಅವಳ ತಾಯಿಗೆ ಮಗಳ ವಿದ್ಯಾಭ್ಯಾಸದ ಬಗ್ಗೆ ಆಸಕ್ತಿ . ಇಲ್ಲಿನ ವಿದ್ಯಾಭ್ಯಾಸದ ನಂತರ ಆಕ್ಸಫರ್ಡ್ ಗೆ ಹೋಗಿ ಡಿ.ಲಿಟ್. ಮಾಡು ಎಂದು ಮಗಳನ್ನು ಪ್ರೋತ್ಸಾಹಿಸುತ್ತಿದ್ದರು. ತಂದೆಗೆ ತನ್ನ ಮಗಳು "Beauty Queen" ಎಂದು ಬಹಳ ಗರ್ವ. ನಿನಗೆ ಮಿಸ್ ಇಂಡಿಯಾ ಅವಾರ್ಡ್ ಸಿಗಬೇಕು,ಅದುವೇ ನಿನ್ನ ಸೌಂದರ್ಯಕ್ಕೆ ತಕ್ಕ ಅವಾರ್ಡ್ ,ಎಂದು ಅದರ ತಯಾರಿಯಲ್ಲಿ ತೊಡಗಲು ಪ್ರೋತ್ಸಾಹಿಸುತ್ತಿರುತ್ತಾರೆ . ಬಿಸ್ವಜಿತ್ ಕಂಪನಿಯಲ್ಲಿ ಹೊಸದಾಗಿ ಬಂದ ಮಹಿಳಾ ಸಹಾಯಕಿ "ಪ್ರೇಮ ಮೋಹಿನಿ "ಬಗ್ಗೆ ತಾಯಿಗೆ ಅನುಮಾನ . ಗಂಡನಿಗೆ ಆಕೆಯೊಂದಿಗೆ ಅನೈತಿಕ ಸಂಬಂಧವಿದೆ ಎಂಬ ಸಂಶಯದಿಂದ ಜಗಳ ಆರಂಭವಾಗುತ್ತದೆ.ಆಗ ಬಿಸ್ವಜಿತ್ ಕೂಡ, ಸತ್ಯಪ್ರೇಮ ಸುಮತಿಪಾಲ್ ನ ( ಕಂಪನಿಯ ನಿರ್ಮಾಪಕ ) ಜೊತೆ ಅತೀ ಸುಲುಗೆಯಿಂದ ಇರುವುದಕ್ಕೆ ಆಕ್ಷೇಪಣೆ ವ್ಯಕ್ತಪಡಿಸುತ್ತಾನೆ. ಇದು ಅವರ ಮಧ್ಯೆ ಜಗಳಕ್ಕೆ ಕಾರಣವಾಗಿ , ಮುಂದೆ ಅದೇ ಜಗಳ ಬೆಳೆದು ದೊಡ್ಡದಾಗುತ್ತದೆ .ಇದು ಅವರ ವಿವಾಹ ವಿಚ್ಛೇದನಕ್ಕೂ ಕಾರಣವಾಗುತ್ತದೆ . ಇಬ್ಬರೂ ಪರಸ್ಪರ ಕೋಪಿಸಿಕೊಂಡು 2ನೇ ವಿವಾಹ ಮಾಡಿಕೊಳ್ಳುತ್ತಾರೆ . ( ಬಿಸ್ವಜಿತ್ ಪ್ರೇಮ ಮೋಹಿನಿ ಜೊತೆ ಮತ್ತು ಸತ್ಯಪ್ರೇಮ ಸುಮತಿಪಾಲ್ ಜೊತೆ ) ಮತ್ತು ತಮ್ಮ ತಮ್ಮ ಹೊಸ ಸಂಸಾರದಲ್ಲಿ ಮುಳುಗಿರುತ್ತಾರೆ. ರೇಷ್ಮಾ ಈಗ ಇಬ್ಬರಿಗೂ ಬೇಡವಾಗಿ ತಾನು ಈಗ ಅನಾಥೆ ಎಂಬ ಬೇಸರ ಅವಳನ್ನು ಕಾಡಲು ಆರಂಭವಾಗುತ್ತದೆ .ಬೇಸತ್ತ ರೇಷ್ಮಾ ತಂದೆಯ ಮನೆಗೆ ಬಂದರೆ ಅಲ್ಲಿ ಮಲತಾಯಿಯ ಮತ್ತು ಅವಳ ತಮ್ಮ "ಮನಮೋಹನ"ನ ಉಪಟಳ. ರೇಷ್ಮಾ ಬೇರೆ ದಾರಿ ತೋಚದೆ ಭಾಸಿನ್ ಅಂಕಲ್ ( ರೇಷ್ಮಾಳ ತಂದೆಯ ಗೆಳೆಯ )ಸಹಾಯದಿಂದ ಮುಂಬೈನ "ಭೂಮಿ "ಸಂಸ್ಥೆಯಲ್ಲಿ model ಆಗಿ ಸೇರಿಕೊಳ್ಳುತ್ತಾಳೆ .ಅಲ್ಲಿ ಅವಳ ಸೌಂದರ್ಯಕ್ಕೆ ತಕ್ಕ ಅವಕಾಶಗಳು ಲಭ್ಯವಾಗಿ ಸಾಕಷ್ಟು ದುಡ್ಡು ಗಳಿಸುತ್ತಾಳೆ . ತನ್ನ ವೃತ್ತಿಯಲ್ಲಿ ಉತ್ತುಂಗದ ಶಿಖರವೇರುತ್ತಾಳೆ. ಮುಂದೆ ರೇಷ್ಮಾಳ ಜೀವನದಲ್ಲಿ ಅವಳನ್ನು ಬಯಸಿ " ಪ್ರೇಮರಂಜನ್" ಮತ್ತು "ದೇವೇಂದ್ರ ಮೇರು" ಎಂಬ ಇಬ್ಬರು ಯುವಕರು ಬರುತ್ತಾರೆ. ಪ್ರೇಮರಂಜನ್ ರೇಷ್ಮಾಳಿಗೆ ಮೋಸ ಮಾಡಿ ಅವಳ ಹೆಸರಲ್ಲಿ ಲೋನ್ ತೆಗೆಯುತ್ತಾನೆ. ಪ್ರೇಮ್ ರಂಜನನ್ನನ್ನು ನಂಬಿದ್ದ ರೇಷ್ಮಾ ಇದರಿಂದ ಕಂಗೆಟ್ಟು ತಾನು "ಭೂಮಿಯ ನಕ್ಷತ್ರ" ಅಲ್ಲ "ಭೂಮಿಗೆ ಬಿದ್ದ ನಕ್ಷತ್ರ " ಅಂತ ಬರೆದಿಟ್ಟು ಸಾವಿಗೆ ಶರಣಾಗುವ ಹಂತಕ್ಕೂ ತಲಪಿರುತ್ತಾಳೆ. ಕೊನೆಗೆ ರೇಷ್ಮಾಳನ್ನು ಬದುಕಿಸಿದ ದೇವೇಂದ್ರ ಮೇರುವಿನ ಹೃದಯದಾಕಾಶದ ನಕ್ಷತ್ರವಾಗುತ್ತಾಳೆ ರೇಷ್ಮಾ.
2014ರಲ್ಲಿ ಈ ಕಾದಂಬರಿ ದ್ವಿತೀಯ ಮುದ್ರಣ ಕಂಡಿದೆ.
ಕನ್ನಡ ಕಾದಂಬರಿಗಾರ್ತಿ ಹೆಚ್. ಜಿ.ರಾಧಾದೇವಿ ಅವರು ತಮ್ಮ ವೃತ್ತಿ ಜೀವನದಲ್ಲಿ 30ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದಾರೆ. ಹುಟ್ಟಿದ್ದು ಕೋಲಾರ ಜಿಲ್ಲೆಯ ಶಿಡ್ಲಘಟ್ಟದಲ್ಲಿ. ತಂದೆ ಗೋಪಿನಾಥಾಚಾರ್. ಪ್ರಾಥಮಿಕ ಶಾಲಾ ಶಿಕ್ಷಕರು.ಕೋಲಾರದಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ.-ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು. ಮುಂದಿನ ಓದಿಗೆ ತಡೆಯುಂಟಾಗಿ, ಮನೆ ಪಾಠ ಆರಂಭಿಸಿದರು.ಈ ಅನುಭವವೇ ಶಾಲಾ ಶಿಕ್ಷಕಿಯಾಗುವ ಅವಕಾಶಕ್ಕೆ ದಾರಿಯಾಯಿತು. ದುಡಿಯುವ ಮಹಿಳಾ ವರ್ಗ ಕುರಿತ ಅನೆಕ ಸಮಸ್ಯೆಗಳನ್ನು ತಮ್ಮ ಕತೆ ಕಾದಂಬರಿಗಳ ಮೂಲಕ ಬೆಳಕು ಚೆಲ್ಲಿದ್ದು, ಈ ಬಗ್ಗೆ ಹಲವಾರು ಲೇಖನಗಳನ್ನು ಸಹ ಬರೆದಿದ್ದಾರೆ. ‘ಅನುರಾಗ ಅರಳಿತು, ಒಲವಿನ ಸುಧೆ ಒಲಿದು ಬಂದ ಅಪ್ಸರೆ, ಕತ್ತಲಲ್ಲಿ ಕಂಡ ಮಿಂಚು, ...
READ MORE