’ಬೆಸುಗೆಯ ಬಂಧನದಲ್ಲ” ಕಸ್ತೂರ ಬಾ ಮತ್ತು ಬಾಪು ದಾಂಪತ್ಯ ಕಥನ. ಇದೊಂದು ಕಾದಂಬರಿಯೂ ಹೌದು, ದಾಂಪತ್ಯ ಕಥನ, ದಾಂಪತ್ಯ ಚರಿತ್ರೆಯೂ ಹೌದು. ಭಾರತದ ಸ್ವಾತಂತ್ರ್ಯ ಚಳುವಳಿ ಜಗತ್ತಿನ ತಂದೆ, ತಾಯಿಯಂತೆ ಬಾಳಿ ಬದುಕಿದ ಬಾಪು (ಗಾಂಧೀಜಿ) ಮತ್ತು ಕಸ್ತೂರ ಬಾ ನಡುವಿನ ದಾಂಪತ್ಯ ಸಂಬಂಧಗಳು ಹೇಗಿದ್ದಿರಬಹುದೆಂಬ ಕುತೂಹಲ ಲೇಖಕಿ ವಿಜಯಾ ಸುಬ್ಬರಾಜ್ ಅವರದ್ದು.
ದೇಶದ ಸ್ವಾತಂತ್ರ್ಯಕ್ಕಾಗಿ ಅಹಿಂಸಾ ಹೋರಾಟಕ್ಕೆ ತನ್ನನ್ನು ಅರ್ಪಿಸಿಕೊಂಡಿದ್ದ ಮಹಾತ್ಮ ಗಾಂಧಿಜಿಯ ಪತ್ನಿ ಕಸ್ತೂರ ಬಾ ಅವರ ಬದುಕಿನ ಕುತೂಹಲ ಈ ಕೃತಿಯ ರಚನೆಗೆ ಕಾರಣ ಎನ್ನುತ್ತಾರೆ. ಬಾಳಿನುದ್ದಕ್ಕೂ ಅಗ್ನಿದಿವ್ಯಗಳನ್ನು ಹಾದು ಒಂದು ನೆಲೆಯನ್ನು ಚರಿತ್ರೆಯ ಪುಟಗಳಲ್ಲಿ ಗುರುತಿಸಿಕೊಂಡು ಬದುಕಿದ ಕಸ್ತೂರ ಬಾ ಅವರ ಕುರಿತ ಈ ಕೃತಿ, ಬಾಪು ಮತ್ತು ಬಾ ಅವರ ದಾಂಪತ್ಯ ಜೀವನದ ಕುರಿತು ತಿಳಿಸುತ್ತದೆ.
ವಿಜಯಾ ಸುಬ್ಬರಾಜ್ ಅವರು ಬೆಂಗಳೂರಿನಲ್ಲಿ 1947 ಏಪ್ರಿಲ್ 20ರಂದು ಜನಿಸಿದರು. ತಾಯಿ ಲಕ್ಷ್ಮಿ, ತಂದೆ ಸೀತಾರಾಂ. ಇಂಗ್ಲಿಷ್ ಮತ್ತು ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಕನ್ನಡ ಸಾಹಿತ್ಯ ಕ್ಷೇತ್ರದ ಕೃಷಿಯಲ್ಲಿ ತೊಡಗಿಕೊಂಡಿರುವ ಇವರು ಬಿಯುಸಿಟಿಎ ನ ಉಪಾಧ್ಯಕ್ಷೆ, ಕನ್ನಡ ನುಡಿ ನಿಯತಕಾಲಿಕೆಯ ಸಂಪಾದಕಿ, ನಂಜನಗೂಡು ತಿರುಮಲಾಂಬ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾಗಿದ್ದಾರೆ. ಕರ್ನಾಟಕ ಲೇಖಕಿಯರ ಸಂಘದ ಉಪಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ವಿಜಯಾ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ನೀಲಗಂಗಾ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ...
READ MORE