ಬತ್ತದ ತೊರೆ

Author : ಶಿವರಾಮ ಕಾರಂತ

Pages 300

₹ 18.00




Year of Publication: 1953
Published by: ಹರ್ಷ ಮುದ್ರಣ ಪ್ರಕಟನಾಲಯ.
Address: ಪುತ್ತೂರು ದ.ಕ.

Synopsys

ʼಬತ್ತದ ತೊರೆʼ ಕಾದಂಬರಿಯನ್ನು ಲೇಖಕ ಡಾ. ಶಿವರಾಮ ಕಾರಂತ ರಚಿಸಿದ್ದಾರೆ. ಮನುಷ್ಯನ ಮನೋಧರ್ಮವು ಅವನಲ್ಲಿರುವ ನೈಸರ್ಗಿಕ ಲಾಲಸೆ, ಅಭಿರುಚಿ ಸ್ವಭಾವಗಳಿಗೂ ಅವನು ನಾಗರಿಕನಾದ ಮೇಲೆ ತನ್ನ ಸಂಸ್ಕೃತಿಯಿಂದ ಕಲ್ಪಿಸಿಕೊಂಡ ಬದುಕಿನತ್ತ ಹೊರಳುತ್ತಾನೆ ಎನ್ನುವ ಪರಿಕಲ್ಪನೆಯಲ್ಲಿ ಈ ಕಾದಂಬರಿಯು ಮೂಡಿಬಂದಿದೆ. ಗಂಡು ಹೆಣ್ಣುಗಲ ಪ್ರೇಮದ ಪ್ರತೀಕ ಸ್ನೇಹ ಎಂದು ಈ ಕೃತಿಯ ಮುನ್ನುಡಿಯಲ್ಲಿ ವಿವರಿಸಲಾಗಿದೆ. ಐವರು ತರುಣಿಯರ ವಾಸ್ತವಿಕ ಜೀವನವನ್ನು ಮುಂದಿಟ್ಟುಕ್ಕೊಂಡು ಇಲ್ಲಿನ ಕಥೆಯನ್ನು ಹೆಣೆಯಲಾಗಿದೆ. ಸಹಜ ಪ್ರೇಮದ ನಿರಾಶೆಯಿಂದ ಮದುವೆಯೇ ಹುಳಿಯೆಂದು ತಿಳಿದುಕೊಂಡ ಹೆಣ್ಣೊಬ್ಬಳು ಯಾವ ರೀತಿ ಬಾದಲಾಗುತ್ತಾಳೆ ಮತ್ತು ಜೀವನದ ಭದ್ರತೆಗಾಗಿ ಮದುವೆಯಾದವಳೊಬ್ಬಳು ಹೇಗೆ ಭದ್ರತೆಯೇ ಇಲ್ಲದೆ ಜೀವನ ನಡೆಸುತ್ತಾಳೆ ಎಂಬುದರ ಸುತ್ತ ಈ ಕಾದಂಬರಿಯ ಕಥೆಯು ಸಾಗುತ್ತದೆ.

About the Author

ಶಿವರಾಮ ಕಾರಂತ
(10 October 1902 - 09 December 1997)

ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ- ಅಭೂತಪೂರ್ವ. 1902ರ ಅಕ್ಟೋಬರ್ 10ರಂದು ಜನಿಸಿದರು. ತಂದೆ ಶೇಷ ಕಾರಂತ ತಾಯಿ ಲಕ್ಷ್ಮಮ್ಮ. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದ್ದರು. ಚಲನಚಿತ್ರ , ಯಕ್ಷಗಾನ ಪ್ರಯೋಗಗಳನ್ನು ನಡೆಸಿದ್ದರು, ಹೀಗೆ ...

READ MORE

Related Books