ಮೈ ಬಣ್ಣ ಕಪ್ಪು ಎಂಬ ಕಾರಣಕ್ಕೆ ಪತಿಯಿಂದ ತಿರಸ್ಕೃತಳಾದ ಪತ್ನಿಯು ತನ್ನ ಸನ್ನಡತೆಯಿಂದ ಹೇಗೆ ಪತಿಯ ಹೃದಯವನ್ನು ಗೆಲ್ಲುತ್ತಾಳೆ ಎಂಬ ಕಥಾ ವಸ್ತು ಇರುವ ಕಾದಂಬರಿ-ಸೌಭಾಗ್ಯವತಿ. ಲೇಖಕರು-ಎಂ.ವೀ. ಸೀತಾರಾಮಯ್ಯ. ಮೈಬಣ್ಣಕ್ಕಿಂತ ಹೆಣ್ಣಿನ ಗುಣ ನೋಡಬೇಕು. ಮೈಬಣ್ಣ ಕಪ್ಪು ಎಂಬ ಕಾರಣಕ್ಕೆ ಪತಿಯಿಂದ ತಿರಸ್ಕೃತವಾದ ಅದೆಷ್ಟೋ ಹೆಣ್ಣುಗಳು ತಮ್ಮ ಜೀವನಕ್ಕೆ ಹಾನಿಯನ್ನುಂಟು ಮಾಡಿಕೊಂಡಿವೆ. ಈ ದಾರಿ ಸರಿಯಲ್ಲ; ಸಂಸಾರದ ನೆಮ್ಮದಿಗೆ ಮೈ ಬಣ್ಣ ಕಾರಣವಾಗದು ಎಂದು ಇಲ್ಲಿಯ ಕಥಾನಾಯಕಿ ತನ್ನ ಸದ್ ವರ್ತನೆಯಿಂದ ಪತಿಯನ್ನು ಮನವೊಲಿಸಿಕೊಳ್ಳುತ್ತಾಳೆ. ಇದು ಇತರರಿಗೂ ಮಾದರಿ. ಇಂತಹ ಸಂದೇಶದ ಕಾದಂಬರಿ ಇದು.
ರಾಘವ ಕಾವ್ಯನಾಮದ ಮೂಲಕ ಪರಿಚಿತರಾಗಿರುವ ಎಂ.ವಿ. ಸೀತಾರಾಮಯ್ಯ ಜನಿಸಿದ್ದು ಮೈಸೂರಿನಲ್ಲಿ. ಮಕ್ಕಳಿಗಾಗಿ ಬರೆದ 'ಹೂವನು ಮಾರುತ ಹೂವಾಡಗಿತ್ತಿ' ಹಾಡು ಕನ್ನಡ ಭಾಷಾ ಪಠ್ಯಪುಸ್ತಕದಲ್ಲಿತ್ತು. ಕನ್ನಡ ಅಧ್ಯಾಪಕರಾಗಿದ್ದ ಇವರು ಸಾಹಿತ್ಯ ಕ್ಷೇತ್ರದಲ್ಲಿಯೂ ಮನೆಮಾತಾಗಿದ್ದರು. ಕನ್ನಡ ಸಾಹಿತ್ಯಕ್ಕೆ ಇವರ ಕೊಡುಗೆಗಳೆಂದರೆ ಹಕ್ಕಿಹಾಡು, ರಾಗ, ಅಶೋಕ ಚಕ್ರ (ಕವನ ಸಂಗ್ರಹಗಳು), ರಾಘವ, ಕವನ ಕೋಶ, ಆ ಚಿತ್ರಗಳು, ಹಕ್ಕಿ ಹಾಡು, ರತಿದೇವಿ ಮತ್ತು ಇತರ ಕಥೆಗಳು, ಬಿಸಿಲು ಬೆಳದಿಂಗಳು, ನಿಲ್ದಾಣಗಳ ನಡುವೆ (ಕಥಾ ಸಂಕಲನಗಳು), ಭಾಗ್ಯಲಕ್ಷ್ಮಿ, ನಂಜಿನ ಸವಿ, ಜೀವನದ ಜೊತೆಗಾರ (ಕಾದಂಬರಿಗಳು), ತೆರೆಮರೆಯ ಚಿತ್ರಗಳು, ತೊಟ್ಟಿಲು ತೂಗದ ಕೈ (ನಾಟಕಗಳು), ...
READ MORE