“ಅಕ್ಕಮ್ಮನ ಭಾಗ್ಯ' ಹಿರಿಯ ಕಾದಂಬರಿಕಾರ ತ.ರಾ.ಸು ಅವರ ಸಾಮಾಜಿಕ ಕಾದಂಬರಿ. ವಿಧಿಯಿಂದ ಅಷ್ಟೇ ಅಲ್ಲ, ಸಹವರ್ತಿಗಳಿಂದಲೂ ವಂಚಿತಳಾಗಿ, ಆ ನೋವು- ದ್ರೋಹಗಳ ಮಧ್ಯೆ ಬಾಳಲೇಬೇಕಾಗಿ ಬಂದ ಹೆಣ್ಣಿನ ಕಥೆ.
ಆದರೆ ಅಂಥ ಜೀವನದ ಬಗ್ಗೆ ಕಾದಂಬರಿಯಲ್ಲಿ ಓದುವಾಗ ನಮ್ಮ ಹೃದಯದಲ್ಲಿ ಮೂಡುವ ಸಹಾನುಭೂತಿ, ಅನುಕಂಪ ಸಹಜ. ಆದರೆ, ಜೀವನದಲ್ಲಿ ಇಂತಹ ಅನುಕಂಪ ಕಾಣುವುದು ವಿರಳ. ಆದರೆ, ಕಾದಂಬರಿಯನ್ನು ಓದಿದ ವಾಚಕರಲ್ಲಿ ಒಬ್ಬಿಬ್ಬರಿಗಾದರೂ, ನಿಜ ಜೀವನದಲ್ಲಿ ಅಕ್ಕಮ್ಮನಂಥ ವ್ಯಕ್ತಿಯನ್ನು ಕಂಡಾಗ ಸಹಾನುಭೂತಿ ತೋರುವ ಭಾವನೆ ಮೂಡಿದಲ್ಲಿ ತಾವು ಈ ಕಾದಂಬರಿಯನ್ನು ಬರೆದದ್ದು ಸಾರ್ಥಕವಾಯಿತು ಎಂದು ಭಾವಿಸುತ್ತೇನೆ ಎನ್ನುತ್ತಾರೆ ಲೇಖಕ ತ.ರಾ.ಸು.
ತಳುಕು ರಾಮಸ್ವಾಮಯ್ಯ ಸುಬ್ಬರಾಯ(ತ.ರಾ.ಸು) ಹುಟ್ಟಿದ್ದು 1906 ಜೂನ್ 12 ಚಿತ್ರದುರ್ಗ ಜಿಲ್ಲೆಯ ಚೆಳ್ಳೆಕೆರೆ ತಾಲ್ಲೂಕಿನ ತಳುಕು ಎಂಬ ಗ್ರಾಮದಲ್ಲಿ. ಮೂಲ ಆಂಧ್ರಪ್ರದೇಶದವರು. ತಂದೆ ರಾಮಸ್ವಾಮಯ್ಯ ಅವರು ತಳುಕು ಗ್ರಾಮಕ್ಕೆ ಬಂದು ನಂತರ ಚಿತ್ರದುರ್ಗದಲ್ಲಿ ಪ್ಲೀಡರ್ ಆಗಿದ್ದರು. ಸುಬ್ಬಾರಾಯರು ಇಂಟರ್ ಮೀಡಿಯೆಟ್ನಲ್ಲಿದ್ದಾಗ ದೇಶದ ಸ್ವಾತಂತ್ಯ್ರ ಚಳವಳಿಯಲ್ಲಿ ಧುಮುಕಿದರು. ಪ್ರಮುಖ ಕೃತಿಗಳು: ಕಂಬನಿಯ ಕುಯಿಲು, ರಕ್ತರಾತ್ರಿ, ದುರ್ಗಾಸ್ತಮಾನ, ನೃಪತುಂಗ, ಸಿಡಿಲ ಮೊಗ್ಗು, ಶಿಲ್ಪಶ್ರೀ, ಕಸ್ತೂರಿ ಕಂಕಣ, ತಿರುಗುಬಾಣ-, ಈ ಕಾದಂಬರಿಗಳು ಬರೆಹಾ ಕೌಶಲ್ಯಕ್ಕೆ ಹಿಡಿದ ಕನ್ನಡಿ. ಚಲನಚಿತ್ರವಾದ ಕಾದಂಬರಿಗಳು: ಚಂದವಳ್ಳಿಯ ತೋಟ, ಹಂಸಗೀತೆ (1956ರಲ್ಲಿ ಬಸಂತ ಬಹಾರ್ ಹೆಸರಲ್ಲಿ ಹಿಂದಿ ಚಲನಚಿತ್ರವಾಗಿತ್ತು.) ನಾಗರಹಾವು, ...
READ MORE