ಕಾಣಿಕೆ

Author : ಸಾರಾ ಅಬೂಬಕ್ಕರ್

Pages 178

₹ 144.00




Year of Publication: 2014
Published by: ಚಂದ್ರಗಿರಿ ಪ್ರಕಾಶನ
Address: ಮಂಗಳೂರು

Synopsys

ಲೇಖಕಿ ಸಾರಾ ಅಬೂಬಕ್ಕರ್ ಅವರ ಕಾದಂಬರಿ-ಕಾಣಿಕೆ. ಪ್ರಗತಿಪರ ವಿಛಾರಧಾರೆಗಳನ್ನು ಮೈಗೂಡಿಸಿಕೊಂಡು ಸಾಹಿತ್ಯ ರಚನೆ ಮಾಡುತ್ತಿರುವ ಲೇಖಕಿ, ಕಾಣಿಕೆ ಕಾದಂಬರಿಯಲ್ಲೂ ಕಥೆಯ ವಸ್ತುವಿನ ದೃಷ್ಟಿಯಿಂದ ಹೊಸತನ ತಂದಿದ್ದಾರೆ. ನಿರೂಪಣಾ ಶೈಲಿಯೂ ಪ್ರಖರವಾಗಿದ್ದು, ಓದುಗರ ಗಮನ ಸೆಳೆಯುತ್ತದೆ. ಮುಸ್ಲಿಂ ಹೆಣ್ಣು ಮಕ್ಕಳ ಶಿಕ್ಷಣ, ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಮುಸ್ಲಿಂ ಮಹಿಳೆಯರ ಶೋಷಣೆ ಹಾಗೂ ಕೋಮು ಸೌಹಾರ್ದ- ಈ ಮೂರು ವಿಷಯಗಳ ಕುರಿತು ಕತೆ, ಕಾದಂಬರಿ ಹಾಗೂ ಲೇಖನಗಳನ್ನು ಲೇಖಕಿ ಬರೆದಿದ್ದಾರೆ.

About the Author

ಸಾರಾ ಅಬೂಬಕ್ಕರ್
(30 June 1936 - 10 January 2023)

ಕನ್ನಡದ ಪ್ರಖ್ಯಾತ ಲೇಖಕಿ ಸಾರಾ ಅಬೂಬಕ್ಕರ್ ಅವರು 1936ರ ಜೂನ್ 30ರಂದು  ಕಾಸರಗೋಡಿನ ಚಂದ್ರಗಿರಿ ತೀರದ  ಗ್ರಾಮವೊಂದರಲ್ಲಿ ಜನಿಸಿದರು. ತಂದೆ ನ್ಯಾಯವಾದಿಗಳಾಗಿದ್ದ ಪಿ. ಅಹಮದ್ ಅವರು ಮತ್ತು  ತಾಯಿ ಚೈನಾಬಿ ಅವರು. ಸಾರಾ ಅವರ ಪ್ರಾಥಮಿಕ ವಿದ್ಯಾಭ್ಯಾಸ ಅವರ ಹುಟ್ಟಿದೂರಿನಲ್ಲೇ ನೆರವೇರಿತು.  ಮುಂದೆ ಅವರು ಹೈಸ್ಕೂಲುವರೆಗೆ ಕಲಿತದ್ದು ಕಾಸರಗೋಡಿನಲ್ಲಿ. ಎಂಜನಿಯರ್ ಆಗಿದ್ದ ಅಬೂಬಕ್ಕರ್‌ ಅವರೊಡನೆ ಸಾರಾ ಅವರ ವಿವಾಹ ಏರ್ಪಟ್ಟು ವಿದ್ಯಾಭ್ಯಾಸಕ್ಕೆ ವಿದಾಯ ಹೇಳುವಂತಾಯಿತು. ಆದರೆ ಓದಿನಲ್ಲಿ ನಿರಂತರ ಆಸಕ್ತರಾಗಿದ್ದ ಸಾರಾ ಅವರು ಶಿವರಾಮ  ಕಾರಂತರು, ಇನಾಂದಾರ್, ಭೈರಪ್ಪ, ಅನಂತಮೂರ್ತಿ ಇವರೆಲ್ಲರ ಬರವಣಿಗೆಗೆ ಮಾರು ಹೋಗಿ ಸದಾ ...

READ MORE

Reviews

(ಹೊಸತು, ಮಾರ್ಚ್ 2015, ಪುಸ್ತಕದ ಪರಿಚಯ)

ಈ ಕಾದಂಬರಿ ಒಂದು ಕುಟುಂಬದ ಅತಿಸೂಕ್ಷ್ಮ ಸಮಸ್ಯೆಯೊಂದನ್ನು ಗಂಭೀರವಾಗಿ ವರ್ಣಿಸಿದೆ. ಸಮಾಜದಲ್ಲಿನ ಮಾನವನಿರ್ಮಿತ ವ್ಯವಸ್ಥೆಗಳಾದ ಮದುವೆ-ಮಕ್ಕಳು-ಸಂಸಾರ ಎಲ್ಲವೂ ಸರಿಯಾಗಿದ್ದರೆ ಚೆನ್ನ ಅಲ್ಲಿ ಯಾವುದೇ ಕಾರಣಕ್ಕಾದರೂ ಸರಿ, ಬಿರುಕು ಬಿಟ್ಟಿತೆಂದರೆ ಮೊದಲು ಬಲಿಯಾಗುವುದು ಹೆಣ್ಣಿ, ಸಮಾಜದ ಕಟ್ಟುಪಾಡುಗಳಿಗೆ ಬಂದಿಯಾಗಿ ಮನದಾಳದ ತುಮುಲಗಳನ್ನು ಹತ್ತಿಕ್ಕಿ ಮನೆತನದ ಗೌರವಕ್ಕಾಗಿ ದೊಡ್ಡತ್ಯಾಗಕ್ಕೆ ಹೆಣ್ಣು ಸಿದ್ಧವಾಗಬೇಕೆಂಬುದು ನಿರೀಕ್ಷೆ. ಗಂಡಸರಿಂದ ಇದನ್ನು ಅಪೇಕ್ಷಿಸುವುದಿಲ್ಲ, ಕಟ್ಟುಕತೆಯಲ್ಲದ ಇಲ್ಲಿನ ನಿರೂಪಣೆ ಲೇಖಕಿ ಸ್ವತಃ ಕೇಳಿದ ಘಟನೆಯಾಗಿದ್ದು ಸಂಸಾರಗಳಲ್ಲಿನ ಗೊಂದಲಗಳನ್ನು ಪರಿಚಯಿಸುತ್ತದೆ. ಕುಟುಂಬದ ಇತರ ಸದಸ್ಯರ ಭಾವನೆಗಳ ಮುಂದೆ ಹೆಣ್ಣಿನ ನವಿರಾದ ಭಾವನೆಗಳು ನಗಣ್ಯ, ಇಂದಿನ ದಿನಗಳಿಗೆ ಇದು ಅನ್ವಯಿಸಲಾರದೆಂಬ ಮಾತಿದ್ದರೂ ಸಂಸಾರಗಳಲ್ಲಿ ಇವೆಲ್ಲ ಸಾಮಾನ್ಯ. ಮನೆಗಳಲ್ಲಿ ಸಹಜವಾಗಿ ನಡೆಯುವ ಸಂಭಾಷಣೆಗಳಿಂದ ಕುಟುಂಬದ ಸದಸ್ಯರ ಸಂಬಂಧಿಕರ ಮನದಾಳಗಳೇನೆಂದು ಚೆನ್ನಾಗಿ ಚಿತ್ರಿತವಾಗಿದೆ. ಸಂಬಂಧಗಳ ನಿಜವಾದ ಪರಿಚಯವಾಗಿ ಅಲ್ಲಿ ಕಳಕಳಿ ಎಷ್ಟು, ಸ್ವಾರ್ಥಪರತೆ ಎಷ್ಟು ಎಂದು ಗೋಚರಿಸುತ್ತದೆ. ಯಾವಾಗಲೂ ಹೆಣ್ಣುಮಕ್ಕಳ ಶೋಷಣೆ ವಿರುದ್ಧ ದನಿಯೆತ್ತುವ ಲೇಖಕಿ ಸಾರಾ ಒಂದು ಸಾಂಸಾರಿಕ ಘಟನೆಯನ್ನು ನಮ್ಮ ಮುಂದಿಟ್ಟಿದ್ದಾರೆ.

Related Books