ಪೆಗ್ ಬೈ ಪೆಗ್ ಸತೀಶ ಬಳೇಗಾರ ಅವರ ಕಾದಂಬರಿಯಾಗಿದೆ. ಪ್ರಾಣ ಸ್ನೇಹಿತನಾದ ಮಹೇಶ ಕುಡಿದ ಮತ್ತಿನಲ್ಲಿ ಪ್ರಣವನ ಹೆಂಡತಿಯ ಮೇಲೆ ಅತ್ಯಾಚಾರ ಮಾಡಿದ್ದ, ಪ್ರಣವ್ ಅವನನ್ನು ಹೋಗಿ ಕೇಳಿದರೆ 'ಕುಡಿದ ಮತ್ತಿನಲ್ಲಿ ಏನೋ ತಪ್ಪು ಕೆಲಸ ಮಾಡಿಬಿಟ್ಟೆ. ಫ್ರೆಂಡ್. ದಯವಿಟ್ಟು ನನ್ನನ್ನು ಕ್ಷಮಿಸು, ಇನ್ನು ಮೇಲೆ ನಾನು ಕುಡಿಯುವುದನ್ನು ಬಿಟ್ಟು ಬಿಡುತ್ತೇನೆ ” ಎಂದು ಹೇಳಿದ, ಎರಡು ದಿವಸ ಬಿಟ್ಟು ಪ್ರಣವ್ ಫುಲ್ ಟೈಟ್ ಆಗಿದ್ದ, ಕುಡಿದ ಮತ್ತಿನಲ್ಲಿ ನೇರ ಮಹೇಶ್ ಮನೆಗೆ ಹೋಗಿ ಮಚ್ಚು ಬೀಸಿದ. ಒಂದೇ ಏಟಿಗೆ ಅಡ್ಡ ಮಲಗಿ ಕೊನೆಯ ಉಸಿರು ಹೊರ ಚೆಲ್ಲಿದ ಮಹೇಶ್, ಸುದ್ದಿ ತಿಳಿದ ಸತೀಶ ಓಡೋಡಿ ಬಂದ. "ಇನ್ನು ಮೇಲೆ ನಾನು ಕುಡಿಯುವುದನ್ನು ಬಿಟ್ಟು ಬಿಡುತ್ತೇನೆ. ಇದೊಂದು ಅಪರಾಧ ನಡೆದುಹೋಯಿತು. ನನ್ನನ್ನು ಹೇಗಾದರೂ ಸರಿಯೇ ಕಾಪಾಡು" ಎಂದ ಸತೀಶನಿಗೆ ಒಂದು ಕ್ಷಣ ಏನು ಮಾಡಬೇಕು ಎಂದು ಹೊಳೆಯಲಿಲ್ಲ. ಯಾರೋ ಆದಾಗಲೇ ಫೋನ್ ಮಾಡಿದ್ದರಿಂದ ಸೈರನ್ ಮಾಡುತ್ತ ಜೀಪ್ ಬಂತು. ಕುಡಿತ ಪ್ರಣವ್ ಜೀವನವನ್ನು ಒಂದು ಡೆಡ್ ಎಂಡ್‌ಗೆ ತಂದು ನಿಲ್ಲಿಸಿತ್ತು. ಅಲ್ಲಿ, ಡಿಂಗ್ ಅಂಡ್ ಡ್ರೈವ್' ಜೊತೆಗೆ 'ಡೋಂಟ್ ಬಂಕ್ ಆಂಡ್ ಟೆಕ್ ಎಂದು ಹೇಳುವ ಪರಿಸ್ಥಿತಿ ನಿರ್ಮಾಣಗೊಂಡಿತ್ತು ಎನ್ನುವುದನ್ನು ಬೆನ್ನುಡಿಯಲ್ಲಿ ತಿಳಿಸಲಾಗಿದೆ.
ಸತೀಶ ಬಳೆಗಾರ ಇವರು ಕುಂದಾಪುರ ತಾಲೂಕಿನ ಸಿದ್ದಾಪುರದವರು. ವೃತ್ತಿಯಲ್ಲಿ ವ್ಯಾಪಾರಿ. ಪ್ರವೃತ್ತಿಯಲ್ಲಿ ಲೇಖಕ. ಶಂಕರ್ ನಾಗ್ ದಿ ಲೆಜೆಂಡ್ ಸೇರಿದಂತೆ ಇದುವರೆಗೆ ಹತ್ತು ಕೃತಿಗಳನ್ನು ರಚಿಸಿರುತ್ತಾರೆ. 'ಧೈರ್ಯ ಅಂದರೆ ಏನು' ಇದು ಇವರ ಮೊದಲ ಕೃತಿ. ಈ ಕೃತಿ 2008 ರಲ್ಲಿ ಬಿಡುಗಡೆಗೊಂಡಿತ್ತು. ಗೆಲುವಿಗಾಗಿ ಧ್ಯಾನ, ಚಾಣಕ್ಯ, ನರೇಂದ್ರ ಮೋದಿ, ಫರ್ಸ್ಟ್ ಪೆಗ್ ಇವರು ಬರೆದಿರುವ ಪ್ರಮುಖ ಕೃತಿಗಳು. ಇದರಲ್ಲಿ ಚಾಣಕ್ಯ ಪುಸ್ತಕ ಮೂರು ಬಾರಿ ಮರು ಮುದ್ರಣಗೊಂಡಿದೆ. ಉದಯವಾಣಿ, ಹೊಸ ದಿಗಂತ, ತರಂಗ ಪತ್ರಿಕೆಯಲ್ಲಿ ಇವರು ಬರೆದಿರುವ ಲೇಖನ, ಕಥೆಗಳು ಪ್ರಕಟವಾಗಿವೆ. ಕೃತಿಗಳು: ಶಂಕರ್ ನಾಗ್ ...
READ MORE