ಲೇಖಕ ಅನಂತಚಂದ್ರ ಅವರು ಬರೆದ ಕಾದಂಬರಿ-ಸಾಮ್ಯಗಾನ. ಶರಾವತಿ ಹಿನ್ನೀರು, ಅದರೊಳಗೆ ನಿಂತಿದ್ದ ತೆಪ್ಪಗಳು, ಬೆಸ್ತನೊಬ್ಬ ಅವನೊಂದಿಗಿನ ಸಂಭಾಷಣೆಯು ತಮಗೆ ಕಥಾ ವಸ್ತು ನೀಡಿದೆ ಎಂದು ಸ್ವತಃ ಕಾದಂಬರಿಕಾರರು ಹೇಳುತ್ತಾರೆ. ಆದರೆ, ನೀವಂದುಕೊಂಡಂತೆ ಇದು ಡ್ಯಾಮ್ ಕಟ್ಟಿದ ಕಥೆಯೂ ಅಲ್ಲ; ಮತ್ತು, ಕಟ್ಟಲು ವಿರೋಧಿಸಿ ಜೀವತ್ಯಾಗ ಮಾಡಿದ ರೈತರ ಕಥೆಯೂ ಅಲ್ಲ. ಇದು ಗುಳೆ ಬಿದ್ದ ಈ ಜನರ ಮುಂದಿನ ಅರ್ಧ ಶತಕದ ಕಥೆ. ಇದು ಪಾತ್ರಗಳ, ಸನ್ನಿವೇಶಗಳ, ಕಾಲಘಟ್ಟಗಳ ಮಧ್ಯೆ ಕಾಣಬಹುದಾದಂತಹ ಸಾಮ್ಯತೆಯ ಕಥೆ’ ಹೀಗೆ ಹೇಳುವ ಮೂಲಕ ಕಾಲ್ಪನಿಕ ಕಥೆ ಎಂದು ಸ್ಪಷ್ಟಪಡಿಸಿದ್ದಾರೆ.
ಲೇಖಕ ಅನಂತಚಂದ್ರ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಮಂಕಳದೇ ಗ್ರಾಮದವರು. ತಂದೆ ಚಂದ್ರಶೇಖರ, ತಾಯಿ ರತ್ನ. ಸಾಗರ, ಶಿವಮೊಗ್ಗ ಹಾಗೂ ಬೆಂಗಳೂರಿನಲ್ಲಿ ಶಿಕ್ಷಣ ಪಡೆದಿದ್ದಾರೆ. ಕೃತಿಗಳು: ಸಾಮ್ಯಗಾನ (ಕಾದಂಬರಿ) ...
READ MORE