ಖ್ಯಾತ ವಿದ್ವಾಂಸ ಡಾ. ಕೆ.ಎಸ್. ನಾರಾಯಣಾಚಾರ್ಯ ಅವರ ಪೌರಾಣಿಕ ಕಾದಂಬರಿ-ನಹುಷ. ಈ ಕಾದಂಬರಿಯು ಮಹಾಭಾರತ ಕಥೆಯ ಪೂರ್ವಕಾಂಡದ ಭಾಗ-3ರ ವಂಶಾವಳಿಯದ್ದಾಗಿದೆ. ನಹುಷ ರಾಜನಿಗೆ ಇಂತಹ ಸಂತಾನ ಉಂಟಾಗಿದ್ದುದು ಹೇಗೆ? ನಹುಷನಿಗೆ ಸರ್ಪರೂಪು ಬಂದಿದ್ದಾದರೂ ಹೆಗೆ? ಇವರು ಶತಾಶ್ವಮೇಧ ಮಾಡಿದ್ದು ಏಕೆ? ನಹುಷನ ಜೀವಿತಾವಧಿಯಲ್ಲಿ ಕಂಡು ಬರುವ ಬಹುಮುಖೀಯ ವ್ಯಕ್ತಿತ್ವದ ಸೀಳು ನೋಟಗಳೇಕೆ? ಇಂತಹ ಸಂಗತಿಗಳನ್ನು ಒಳಗೊಂಡ ಕಾದಂಬರಿ ಇದು. ಪೌರಾಣಿಕ ಕಥೆಗೆ ಧಕ್ಕೆಯಾಗದ ಹಾಗೆ ನಹುಷನ ವ್ಯಕ್ತಿತ್ವಕ್ಕೂ ಧಕ್ಕೆ ಆಗದ ಹಾಗೆ ವಿಶ್ಲೇಷಿಸಿದ ಕಾದಂಬರಿಯು, ತನ್ನ ಆಕರ್ಷಕ ಬರಹ ಶೈಲಿಯಿಂದ ಓದುಗರ ಗಮನ ಸೆಳೆಯುತ್ತದೆ.
ಹಿರಿಯ ವಿದ್ವಾಂಸ ಹಾಗೂ ಪ್ರವಚನಕಾರರೂ ಆಗಿರುವ ಪ್ರೊ. ಕೆ.ಎಸ್. ನಾರಾಯಣಾಚಾರ್ಯರು ಮೂಲತಃ ಬೆಂಗಳೂರು ಜಿಲ್ಲೆಯ (ಈಗಿನ ಕನಕಪುರ) ಕನಕನಹಳ್ಳಿಯವರು. ತಂದೆ ಕೆ.ಎನ್. ಶ್ರೀನಿವಾಸ ದೇಶಿಕಾಚಾರ್. ತಾಯಿ ರಂಗನಾಯಕಮ್ಮ. ವೈದಿಕ ವಿದ್ವಾಂಸರ ಕುಟುಂಬ ಇವರದು.ಮೈಸೂರಿನ ಮಹಾರಾಜ ಕಾಲೇಜಿನಿಂದ ಬಿ.ಎಸ್.ಸಿ. ಪದವೀಧರರು. ನಂತರ ಬಿ.ಎ. ಆನರ್ಸ್ ಮಾಡಿ, ಆಧುನಿಕ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಡಬ್ಲ್ಯು.ಬಿ. ಯೇಟ್ಸ್ ಮತ್ತು ಟಿ.ಎಸ್. ಎಲಿಯೆಟ್ ಅವರ ಕಾವ್ಯದ ಮೇಲೆ ಭಾರತೀಯ ಸಂಸ್ಕೃತಿಯ ಕುರಿತು ಅಧ್ಯಯನ ನಡೆಸಿ ಪಿಎಚ್.ಡಿ. ಪಡೆದರು. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ, ಆ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರಾದರು. ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ವೇದಗಳು, ರಾಮಾಯಣ, ...
READ MORE