ಮರಳು ದಿಣ್ಣೆ

Author : ಅನು ಬೆಳ್ಳೆ (ರಾಘವೇಂದ್ರರಾವ)

Pages 232

₹ 235.00




Year of Publication: 2018
Published by: ಸಿರಿವರ ಪ್ರಕಾಶನ
Address: #ಎಂ 37/ಬಿ, 8ನೇ ಅಡ್ಡರಸ್ತೆ, ಲಕ್ಷ್ಮೀನಾರಾಯಣಪುರ, ಬೆಂಗಳೂರು-560021
Phone: 9844109706

Synopsys

'ಮರಳುದಿಣ್ಣೆ' ಅನುಬೆಳ್ಳೆ ಅವರ ಕಾದಂಬರಿ. ಪತ್ತೇದಾರಿ ಕಥನಗಳು ಜನಪ್ರಿಯ ಮಾದರಿಯ ಸಾಹಿತ್ಯ ಎಂಬ ಹಣೆಪಟ್ಟಿಯನ್ನು ಹೊತ್ತುಕೊಂಡದ್ದೆ ಸಾಹಿತಿಗಳ ಸಾಂಸ್ಕೃತಿಕ ಸಾಹಿತ್ಯಕ ರಾಜಕೀಯದಿಂದಾಗಿ, ಅನುಬೆಳ್ಳೆಯವರು ಈವರೆಗೂ 45ಕ್ಕೂ ಅಧಿಕವಾದ ಮೌಲಿಕ ಕೃತಿಗಳನ್ನು ರಚಿಸಿದ್ದಾರೆ. ಆದರೆ ಅವರೊಬ್ಬ ಜನಪ್ರಿಯ ಸೃಜನಶೀಲ ಬರಹಗಾರ ಎಂಬ ಕಾರಣಕ್ಕೆ ಅವಜ್ಞೆಗೆ ಗುರಿಯಾಗಿದ್ದಾರೆ. ಹಾಗೇ ನೋಡಿದರೆ ಜನಪ್ರಿಯ ಸಾಹಿತ್ಯವನ್ನು ಓದುವ ವರ್ಗವು ಬಹುದೊಡ್ಡದು. ಮರಳುದಿಣ್ಣೆ ಯಂತಹ ಜನಪ್ರಿಯ ಕಥನ ಸಾಹಿತ್ಯವು ಮೈದಳೆಯುವುದೆ ಓದುಗ ವರ್ಗವನ್ನು ಸೃಷ್ಟಿಸುವ ದೃಷ್ಟಿಯಿಂದ ಎಂಬುದನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ಆ ಮೂಲಕ ಕನ್ನಡ ಸಾಹಿತ್ಯದ ಓದುಗರನ್ನು ಒಂದಿಷ್ಟು ಮೌಲ್ಯಮಾಪನಕ್ಕೊಳಪಡಿಸಬಹುದು. ಅದು ಅಲ್ಲದೆ ನಮ್ಮ ನಡುವೆ ನಡೆಯುವ ಸಾಹಿತ್ಯ ಸಂಸ್ಕೃತಿಯ ಸಂಶೋಧನೆ ಮುಖ್ಯ ಭೂಮಿಕೆಯ ಸಾಹಿತ್ಯವನ್ನೇ ಕೇಂದ್ರವಾಗಿಸಿ ನಡೆಯುತ್ತದೆ. ಇಂತಹ ಏಕಮುಖ ನಡೆಗಳು ಬದಲಾಗ ಬೇಕಾದರೆ ಸಂಶೋಧನೆಯ ಹಾದಿಗೆ ಜನಪ್ರಿಯ ಸಾಹಿತ್ಯವನ್ನು ಹೊರಳಿಸುವ ಜವಾಬ್ದಾರಿಯನ್ನು ನಾವುಗಳು ಹೊರಬೇಕಾಗಿದೆ.

About the Author

ಅನು ಬೆಳ್ಳೆ (ರಾಘವೇಂದ್ರರಾವ)

ವೃತ್ತಿಯಲ್ಲಿ ಉಪನ್ಯಾಸಕರಾಗಿರುವ ಅನು ಬೆಳ್ಳೆ ಅವರು ಮೂಲತಃ ಉಡುಪಿ ಜಿಲ್ಲೆಯ ಬೆಳ್ಳೆಯವರಾಗಿದ್ದು ಹುಟ್ಟಿದ್ದು ತಮಿಳುನಾಡಿನ ಮಧುರೈನಲ್ಲಿ. ಪ್ರಾಥಮಿಕ ಶಿಕ್ಷಣವನ್ನು ಪಡುಬೆಳ್ಳೆಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಮುಗಿಸಿ, ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಇನ್ನಂಜೆಯ ಎಸ್.ವಿ.ಎಚ್. ಪದವಿ ಪೂರ್ವ ಕಾಲೇಜ್ ನಲ್ಲಿ ಮುಗಿಸಿದ್ದರು. ಶಿರ್ವದ ಮೂಲ್ಕಿ ಸುಂದರ ರಾಮ ಶೆಟ್ಟಿ ಕಾಲೇಜಿನಲ್ಲಿ ಪದವಿಯನ್ನು ಪಡೆದು, ಧಾರವಾಡ ವಿಶ್ವವಿದ್ಯಾಲಯದಲ್ಲಿ ಎಂ.ಕಾಂ. ಸ್ನಾತಕೋತ್ತರ ಪದವಿಯನ್ನು ಮತ್ತು ಕುವೆಂಪು ವಿಶ್ವವಿದ್ಯಾಲಯದಲ್ಲಿ ಎಂ.ಎ. ಕನ್ನಡ ಸ್ನಾತಕೋತ್ತರ ಪದವಿಯನ್ನು ಪಡೆದರು. ಕನ್ನಡದ ಬಹುತೇಕ ಪತ್ರಿಕಗಳಲ್ಲಿ ಇವರ ಕಥೆ, ಕಾದಂಬರಿಗಳು ಪ್ರಕಟಗೊಂಡಿವೆ. ಈವರೆಗೆ ಐವತ್ತು ಕೃತಿಗಳನ್ನು ...

READ MORE

Related Books