ಲೇಖಕ ದೇವರಾಜು ಚನ್ನಸಂದ್ರ ಅವರ ಕಾದಂಬರಿ-ಅಜ್ಞಾನಿಯ ಅಂತರಂಗ. ಜ್ಞಾನದ ಭ್ರಮೆಯಲ್ಲೊಂದು ಅಜ್ಞಾನದ ಬದುಕು ಎಂಬುದು ಈ ಕೃತಿಯ ಉಪಶೀರ್ಷಿಕೆ. ಕಥಾವಸ್ತುವು ತತ್ವಜ್ಞಾನವನ್ನು ಸುತ್ತುವರಿದಿದ್ದು, ಬದುಕಿನ ಅಂತರಂಗವನ್ನು ಶೋಧಿಸುವ ಪ್ರಯತ್ನ ಕಾಣಬಹುದು. ನಿರೂಪಣಾ ಶೈಲಿ, ಸನ್ನಿವೇಶಗಳ ಜೋಡಣೆ, ಪಾತ್ರಗಳ ಸೃಷ್ಟಿ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಈ ಕಾದಂಬರಿಯು ಓದುಗರನ್ನು ಸೆಳೆಯುತ್ತದೆ.
ದೇವರಾಜು ಚನ್ನಸಂದ್ರರವರು ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಚನ್ನಸಂದ್ರ ಗ್ರಾಮದವರು. ತಂದೆ- ಈರೇಗೌಡ, ತಾಯಿ- ಮಹದೇವಮ್ಮ. ಪ್ರಾಥಮಿಕ ಶಿಕ್ಷಣವನ್ನು ತಮ್ಮ ಹುಟ್ಟೂರಿನಲ್ಲಿ ಪಡೆದ ದೇವರಾಜು ಅವರು ಪ್ರೌಢ ಶಿಕ್ಷಣವನ್ನು ಕೋಡಿಹಳ್ಳಿಯ ಶ್ರೀಶಾರದಾ ಹೈಸ್ಕೂಲ್ ನಲ್ಲಿ ಪಡೆದುಕೊಂಡರು. ಕಾಲೇಜು ಶಿಕ್ಷಣವನ್ನು ಕನಕಪುರದ ವಿದ್ಯಾದಾನಿ ಮತ್ತು ಕರ್ಮಯೋಗಿ ಶ್ರೀ ಎಸ್. ಕರಿಯಪ್ಪನವರ ರೂರಲ್ ಕಾಲೇಜಿನಲ್ಲಿ ಪೂರ್ಣಗೊಳಿಸಿದ ದೇವರಾಜು ಅವರು ಬೆಂಗಳೂರಿನ ವಿಶ್ವವಿದ್ಯಾಲಯದಲ್ಲಿ ಸಮಾಜಕಾರ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಹಲವಾರು ಸ್ವಯಂ ಸೇವಾ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸಿರುವ ದೇವರಾಜ್ ಆಪ್ತಸಮಾಲೋಚಕರಾಗಿ ಸುಮಾರು 5 ವರ್ಷ ಕಾರ್ಯ ನಿರ್ವಹಿಸಿ ಮತ್ತೈದು ವರ್ಷ ಜೀವನ ಕೌಶಲ್ಯ ...
READ MORE