ನೆರಳು

Author : ನಾಗರತ್ನ ಬಿ.ಆರ್.

Pages 292

₹ 300.00




Year of Publication: 2022
Published by: ಜಾಗೃತಿ ಪ್ರಿಂಟರ್ಸ್

Synopsys

‘ನೆರಳು’ ಬಿ.ಆರ್‌ ನಾಗರತ್ನ ಅವರ ಕಾದಂಬರಿಯಾಗಿದೆ. ಒಂದು ವೈದಿಕ ಮನೆತನದ ಕಥಾವಸ್ತುವನ್ನು ಒಳಗೊಂಡು 'ನೆರಳು' ಕಾದಂಬರಿಯನ್ನು ಓದುತ್ತ ಹೋದಂತೆ ದೂರದರ್ಶನದಲ್ಲಿ ಸದಭಿರುಚಿಯ ಕೌತುಕಭರಿತ ಧಾರಾವಾಹಿಯನ್ನು ವೀಕ್ಷಿಸಿದ ಅನುಭವವಾಗುತ್ತದೆ! ಏಕಪ್ರಕಾರದ ಮಂದಗತಿಯ ವರ್ಷಧಾರೆಯಂತೆ ಮುಂದೋಡುವ ಕಥಾನಕದಲ್ಲಿ ಸಂಪ್ರದಾಯಸ್ಥ ಮನೆತನದ ಹಲವು ತಲೆಮಾರುಗಳಲ್ಲಿ ಬಂದೊದಗುವ ಅನೇಕ ಘಟನಾವಳಿಗಳು, ಬಾಳಬವಣೆಯ ನೋವು- ನಲಿವುಗಳ ಸ್ಥಿತ್ಯಂತರಗಳನ್ನು ಬಿಂಬಿಸುವ ಎಷ್ಟೆಷ್ಟೋ ಅನಿರೀಕ್ಷಿತ ತಿರುವುಗಳು, ಅಲ್ಲೆಲ್ಲ ಅಭಿವ್ಯಕ್ತಗೊಳ್ಳುವ ಮಾನವ ಸಹಜ ಸ್ವಭಾವಗಳು, ಜತೆಜತೆಗೆ ಅಲ್ಲಲ್ಲಿ ಮಿಂಚಾಗಿ ಮೂಡುವ ಮಾನವೀಯ ಮೌಲ್ಯಗಳು-ಇವೆಲ್ಲವನ್ನೂ ಹಂತಹಂತವಾಗಿ ಮನಗಾಣುತ್ತಾ ಮನಸಾರೆ ಓದಿ ಅನುಭವಿಸಬಹುದಾದ ಒಂದು ಸುಂದರ ಕಾದಂಬರಿ ಇದಾಗಿದ್ದು ಶಬ್ದಾಡಂಬರವಿಲ್ಲದ, ಆಟೋಪದ ಆರ್ಭಟವಿಲ್ಲದ ಹದವರಿತ ಸುಲಭ ಶೈಲಿಯಲ್ಲಿ ಇದನ್ನು ಬರೆದಿರುವ ಅನುಭವಿ ಲೇಖಕಿ, ಸಹೋದರಿ ಶ್ರೀಮತಿ ಬಿ.ಆರ್. ನಾಗರತ್ನ ಅವರನ್ನು ಮೊದಲಿಗೆ ಅಭಿನಂದಿಸುತ್ತೇನೆ. ಒಬ್ಬ ಹೃದಯವಂತ ಸಾಹಿತಿಯ ಮನದಾಳದಿಂದ ಹೊರಹೊಮ್ಮುವ ಬರವಣಿಗೆಯಲ್ಲಿ ಕೂಡ ಆತನ ಅಥವಾ ಆಕೆಯ ಈ ಔದಾರ್ಯಭರಿತ ಮನೋಸ್ಥಿತಿಯ ಛಾಯೆ ಕಂಡೂ ಕಾಣದಂತೆ ತನ್ನ ಅಚ್ಚನ್ನೊತ್ತಿರುತ್ತದೆ ಎಂಬುದು ಕೆಲವು ಹಿರಿಯ ಸಾಹಿತಿಗಳ ಅನುಭವ ಮಾತು. 'ನೆರಳು' ಕಾದಂಬರಿಯನ್ನು ಓದುವಾಗ ಇದು ನಿಜವೆನಿಸುತ್ತದೆ, ಲೇಖಕಿಯ ಈ ವ್ಯಕ್ತಿತ್ವದ ನೆರಳು ಕಾದಂಬರಿಯುದ್ಧಕ್ಕೂ ಢಾಳಾಗಿ ಗೋಚರಿಸುತ್ತದೆ ಎಂದು ಧಾರಾಳವಾಗಿ ಹೇಳಬಹುದು. ಹೀಗಾಗಿ ಇದೊಂದು ವ್ಯಕ್ತಿ ಮನೋಧರ್ಮದ ವಿಭಿನ್ನ ಭಾವನೆಗಳ ಮತ್ತು ಮಾನವೀಯ ಮೌಲ್ಯಗಳನ್ನು ಪ್ರತಿನಿಧಿಸುವ ಒಂದು ಸತ್ವಭರಿತ ಕಥಾನಕವಾಗಿ ಓದುಗನಿಗೆ ಆಪ್ತವೆನಿಸುತ್ತದೆ.

About the Author

ನಾಗರತ್ನ ಬಿ.ಆರ್.
(03 December 1951)

ಕವಯತ್ರಿ, ಹಾಸ್ಯ ಪ್ರಜ್ಞೆಯುಳ್ಳ ಬರಹಗಾರ್ತಿ ನಾಗರತ್ನ ಬಿ.ಆರ್ ಅವರು 1951 ಡಿಸೆಂಬರ್ 3 ರಂದು ತುಮಕೂರಿನಲ್ಲಿ ಜನಿಸಿದರು. ’ಮತ್ತೆ ಮೂಡಿತು ವಸಂತ, ನೆಲೆ, ಹೊಣೆ’ ಅವರ ಕಥಾ ಸಂಕಲನಗಳಾಗಿವೆ. “ನಾಗ ಸಂಪಿಗೆ” ಅವರ ಪ್ರಮುಖ ಕವನ ಸಂಕಲನ. “ನಾಗೋಲ್ಲಾಸ, ಚುರುಮುರಿ, ಚುಟುಕು ಸಂಕಲನ, ರತ್ನಾ ಶತಕ, ಮೆಲುಕು’ ಅವರ ಹಾಸ್ಯ ಸಂಕಲನಗಳ ಕೃತಿಗಳು. ಬೇಂದ್ರೆ ಸೇವಾ ಪ್ರಶಸ್ತಿ, ಬಿಜಾಪುರ ಕುಮಾರರಾಮ ಪ್ರಶಸ್ತಿ-ಅಖಿಲ ಕರ್ನಾಟಕ ಚುಟುಕು ಸಾಹಿತ್ಯ ಪ್ರಶಸ್ತಿ, ಸವಿಗನ್ನಡ ಸಾಂಸ್ಕೃತಿಕ ಪ್ರಶಸ್ತಿ, ಕಥಾಸ್ಪರ್ಧೆಗಳಲ್ಲಿ ಬಹುಮಾನ ಪಡೆದಿದ್ದಾರೆ. ಸರ್ವಜ್ಞ ಸಾಂಸ್ಕೃತಿಕ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿಯಾಗಿದ್ದರು.    ...

READ MORE

Related Books