ಹೆಣ್ಣೊಬ್ಬಳು ತನ್ನ ತಪ್ಪಿಲ್ಲವಾದರೂ ಅವಳ ಸೆರಗಿನಲ್ಲೇ ಎಷ್ಟೋ ಶೋಷಣೆಗಳು ಕುಳಿತು ತಾಂಡವವಾಡುತ್ತಾ ಕುಗ್ಗಿಸುವುದನ್ನು ಮನೋಜ್ಞವಾಗಿ ಇಲ್ಲಿ ಕಾದಂಬರಿಗಾರ್ತಿ ಗೀತಾ ನಾಗಭೂಷಣ ಅವರು ಅರ್ಥವತ್ತಾಗಿ ಚಿತ್ರಿಸಿದ್ದಾರೆ. ಈ ಲೇಖಕಿಯ ಅನುಭವಕ್ಕೆ ಬಂದ ಆಸರೆ ಕಳೆದುಕೊಂಡ ಹೆಣ್ಣಿನ ಜೀನವ, ಹಸಿ ಹಸಿ ಮಿಡುಕಾಟಗಳನ್ನು, ಬವಣೆಗಳನ್ನು ತಮ್ಮ ಜವಾರಿ ಭಾಷೆಯಲ್ಲೇ ಚಿತ್ರಿಸಿದ್ದು ಕಾದಂಬರಿಯ ಮತ್ತೊಂದು ವಿಶೇಷ
ಕನ್ನಡದ ಲೇಖಕಿಯರಲ್ಲಿ ಒಬ್ಬರಾದ ಗೀತಾ ನಾಗಭೂಷಣ ಅವರು ತಮ್ಮ ಕಾದಂಬರಿ-ಕತೆಗಳ ಮೂಲಕ ಜನಪ್ರಿಯರಾದವರು. ಗುಲ್ಬರ್ಗದ ಬಡ ಕುಟುಂಬದಲ್ಲಿ 1942ರ ಮಾರ್ಚ್ 25ರಂದು ಜನಿಸಿದರು. ತಂದೆ ಶಾಂತಪ್ಪ-ತಾಯಿ ಶರಣಮ್ಮ. ಮೆಟ್ರಿಕ್ ಮುಗಿಸಿದ ಮೇಲೆ ಕೆಲವುಕಾಲ ಕಲೆಕ್ಟರ್ ಕಛೇರಿಯಲ್ಲಿ ಉದ್ಯೋಗ ಮಾಡಿ ಬೆಳಗಿನ ಶಾಲೆಯಲ್ಲಿ ಓದಿ ಪದವಿ ಪಡೆದು, ಸಂಜೆ ಕಾಲೇಜಿನಲ್ಲಿ ಓದಿ ಬಿಎಡ್ ಮತ್ತು ಎಂ.ಎ. ಪದವಿ ಗಳಿಸಿದರು. ಓದುವಾಗಲೇ ಉದ್ಯೋಗ ಮಾಡುತ್ತಿದ್ದ ಇವರು ಎಂ.ಎ. ಪದವಿ ಗಳಿಸಿದ ನಂತರ ಶ್ರೀ ನಗರೇಶ್ವರ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ, ಪ್ರಾಧ್ಯಾಪಕಿಯಾಗಿ, ಪ್ರಾಚಾರ್ಯೆಯಾಗಿ 30ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾದರು. ...
READ MORE