ಚಲನಚಿತ್ರ ಸಂಗೀತ ನಿರ್ದೇಶಕ ಆರ್. ಎನ್. ಜಯಗೋಪಾಲ ಅವರ ಆಯ್ದ ಕೆಲ ಚಿತ್ರಗೀತೆಗಳನ್ನು ಸಂಕಲಿಸಿದ ಕೃತಿಗೆ ‘ನಗುವೆ ನಯನ ಮಧುರ ಮೌನ’ ಶೀರ್ಷಿಕೆಯಡಿ ಆರ್. ಎನ್., ಜಯಗೋಪಾಲರ ವ್ಯಕ್ತಿತ್ವವನ್ನು ಲೇಖಕ ಎನ್. ಎಸ್. ಶ್ರೀಧರಮೂರ್ತಿ ಅವರು ಕಟ್ಟಿಕೊಟ್ಟಿದ್ದಾರೆ.
ಸಂಗೀತ ನಿರ್ದೇಶಕ ಹಂಸಲೇಖಾ ಅವರು ಕೃತಿಗೆ ಬರೆದ ಬೆನ್ನುಡಿಯಲ್ಲಿ “ಚಿತ್ರಗೀತೆಗಳನ್ನು ಆಧುನಿಕ ಜನಪದ ಎಂದು ಕರೆಯಬಹುದು. ಎಷ್ಟೋ ಸಲ ಹಾಡುಗಳು ಜನಪ್ರಿಯವಾದರೂ ಅದರ ನಿರ್ಮಾತೃಗಳಿಗೆ ಆ ಯಶಸ್ಸು ಸಿಕ್ಕುವುದೇ ಇಲ್ಲ. ಅದಕ್ಕೆ ಸೂಕ್ತ ದಾಖಲಾತಿಯ ಕೊರತೆಯೇ ಮುಖ್ಯ ಕಾರಣ. ಇಂತಹ ಸಂಕಲನಗಳು ಅದನ್ನು ಕೆಲಮಟ್ಟಿಗಾದರೂ ಸರಿದೂಗಿಸುತ್ತವೆ. ಜಯಗೋಪಾಲ್ ಅವರ ಪ್ರಮುಖ ಗೀತೆಗಳನ್ನು ಒಟ್ಟಾಗಿರಿಸಿರುವ ಈ ಸಂಕಲನ ತಾವು ಬಹುವಾಗಿ ಮೆಚ್ಚಿಕೊಂಡಿದ್ದ ಗೀತೆಗಳ ಕರ್ತೃ ಜಯಗೋಪಾಲ್ ಎಂಬ ಅರಿವನ್ನು ಬಹಳ ಜನಕ್ಕೆ ಉಂಟು ಮಾಡುವುದಲ್ಲದೆ, ಈ ಕುರಿತು ಅಧ್ಯಯನಕ್ಕೆ ಕೂಡ ನೆರವು ನೀಡುತ್ತದೆ. ಕನ್ನಡ ಚಿತ್ರಗೀತೆಗಳ ಕುರಿತು ಗಂಭೀರ ಅಧ್ಯಯನವನ್ನು ಕೈಗೊಂಡಿರುವರಲ್ಲಿ ಎನ್.ಎಸ್. ಶ್ರೀಧರಮೂರ್ತಿ ಮೊದಲಿಗರು ಎನಿಸುತ್ತದೆ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.